ED: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ಸೇರಿದ 21 ಕೋಟಿ ಮೌಲ್ಯದ ಆಸ್ತಿ ಜಪ್ತಿ | ಯಾವ ಆಸ್ತಿ ಜಪ್ತಿ ವಿವರ ನೋಡಿ
ED: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ಸೇರಿದ 21 ಕೋಟಿ ಮೌಲ್ಯದ ಆಸ್ತಿ ಜಪ್ತಿ | ಯಾವ ಆಸ್ತಿ ಜಪ್ತಿ ವಿವರ ನೋಡಿ
ED news :-ಬೇಲಿಕೇರೆ ಅದಿರು ನಾಪತ್ತೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಹೈಕೋರ್ಟ ತಡೆಯಾಜ್ಞೆ ಮೇಲೆ ಹೊರಗಿದ್ದ ಕಾರವಾರದ ಶಾಸಕ ಸೈಲ್ ಗೆ ಇಡಿ ಶಾಕ್ ನೀಡಿತ್ತಿ.
ಅಕ್ರಮ ಆಸ್ತಿ ಗಳಿಗೆ ಸಂಬಂಧ ಸೈಲ್ ಮನೆಗೆ ದಾಳಿ ಮಾಡಿದ್ದ ED ಇದೀಗ 21 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಶನಿವಾರ ಜಪ್ತಿ ಮಾಡಿದೆ. ಕಬ್ಬಿಣದ ಅದಿರಿನ ಅಕ್ರಮ ರಫ್ತು ಪ್ರಕರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ED ಮೂಲಗಳ ಮಾಹಿತಿ.
MLA, MP ಗಳಿಗೆ ಸಿಗುತ್ತೆ ಮಾಜಿಯಾದ ನಂತರ ಪಿಂಚಣಿ :ಎಷ್ಟು ಅಂತೀರಾ ಇಲ್ಲಿದೆ ನೋಡಿ.
ಈ ಆಸ್ತಿಗಳನ್ನು ವಶಪಡಿಸಿಕೊಳ್ಳಲು ನ.6ರಂದು ಪಿಎಂಎಲ್‌ಎ ಕಾಯ್ದೆಯಡಿ ತಾತ್ಕಾಲಿಕ ಆದೇಶ ಹೊರಡಿಸಲಾಗಿತ್ತು. ಜಪ್ತಿ ಮಾಡಲಾದ ಆಸ್ತಿಯಲ್ಲಿ, ಕಾರವಾರದ ಕೆಲವು ಆಸ್ತಿಗಳು ಸೇರಿ ಸೈಲ್ ಒಡೆತನದ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ. ಲಿ. ಹೆಸರಿನಲ್ಲಿ ಗೋವಾದಲ್ಲಿರುವ ಕೃಷಿ ಭೂಮಿ ಮತ್ತು ವಾಣಿಜ್ಯ ಕಟ್ಟಡಗಳು ಸೇರಿವೆ. ಪ್ರಕರಣದಲ್ಲಿ ಸೈಲ್ ಅವರಿಗೆ ನೀಡಲಾಗಿದ್ದ ಜಾಮೀನನ್ನು ಶುಕ್ರವಾರವಷ್ಟೇ ಪಿಎಂಎಲ್‌ಎ ನ್ಯಾಯಾಲಯ ರದ್ದುಪಡಿಸಿತ್ತು.