ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Dandeli ಹೆದ್ದಾರಿಯಲ್ಲಿ ಆನೆ ಹಿಂಡು ರಸ್ತೆಗಿಳಿದು ಸೆಲ್ಫಿ ಗೆ ಮುಂದಾದ ಪ್ರವಾಸಿಗರು.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ (Dandeli) ತಾಲೂಕಿನ ಹಳಿಯಾಳ- ದಾಂಡೇಲಿ ರಾಜ್ಯ ಹೆದ್ದಾರಿಯಲ್ಲಿ ಆನೆಗಳ ಗುಂಪು ಪ್ರತ್ಯಕ್ಷವಾಗಿದ್ದು ಹೆದ್ದಾರಿಯ ಸುತ್ತ -ಮುತ್ತ ಓಡಾಡುತಿದ್ದು ಆತಂಕ ಸೃಷ್ಟಿಸಿದೆ. ಹೆದ್ದಾರಿಯಲ್ಲಿ ಆನೆಗಳನ್ನ ( elephant) ಕಂಡು ಕೆಲವುಹೊತ್ತು ವಾಹನ( vehicle)
12:27 PM Jan 17, 2025 IST | ಶುಭಸಾಗರ್
elephants entered the road on the Dandeli highway tourists attempted to take selfies with them

Dandeli news :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ (Dandeli) ತಾಲೂಕಿನ ಹಳಿಯಾಳ- ದಾಂಡೇಲಿ ರಾಜ್ಯ ಹೆದ್ದಾರಿಯಲ್ಲಿ ಆನೆಗಳ ಗುಂಪು ಪ್ರತ್ಯಕ್ಷವಾಗಿದ್ದು ಹೆದ್ದಾರಿಯ ಸುತ್ತ -ಮುತ್ತ ಓಡಾಡುತಿದ್ದು ಆತಂಕ ಸೃಷ್ಟಿಸಿದೆ. ಹೆದ್ದಾರಿಯಲ್ಲಿ ಆನೆಗಳನ್ನ ( elephant) ಕಂಡು ಕೆಲವುಹೊತ್ತು ವಾಹನ( vehicle) ನಿಲ್ಲಿಸಿದ ಸವಾರರು ಆನೆಗಳೊಂದಿಗೆ ಸೆಲ್ಫಿ ಹಾಗೂ ವಿಡಿಯೋ ತೆಗೆದು ಹುಚ್ಚಾಟವಾಡಿದ್ದಾರೆ. ಸದ್ಯ ದಾಂಡೇಲಿಯ ಅರಣ್ಯ ಭಾಗದಲ್ಲಿ ಆನೆಗಳ ಹಿಂಡು ಸಂಚರಿಸುತಿದ್ದು ಈ ಭಾಗದ ತೋಟ,ಕಬ್ಬಿನ ಗದ್ದೆಗಳಿಗೆ ನುಗ್ಗುತ್ತಿದೆ.

Advertisement

ದಾಂಡೇಲಿ ಅರಣ್ಯದಲ್ಲಿ ಆನೆ ಮುಂದೆ ವಿಡಿಯೋ ಮಾಡಲು ನಿಂತ ಪ್ರವಾಸಿಗ

ಹಳಿಯಾಳ ,ಯಲ್ಲಾಪುರ ಭಾಗದಲ್ಲೂ ಆನೆ ಹಾವಳಿ.

ಇನ್ನು ಕೆಲವು ವರ್ಷಗಳ ಹಿಂದೆ ಹಳಿಯಾಳ ನಗರಕ್ಕೇ ಒಂಟಿ ಸಲಗವೊಂದು ಆಗಮಿಸಿ ನಗರವಾಸಿಗಳಿಗೆ ಶಾಕ್ ನೀಡಿತ್ತು. ಇದಲ್ಲದೇ ಕೆಲವು ತಿಂಗಳ ಹಿಂದೆ ಹಳಿಯಾಳ ಭಾಗದ ಕಬ್ಬಿನ ಗದ್ದೆಗಳಿಗೆ ನುಗ್ಗಿದ ಆನೆಗಳು ಕಬ್ಬು ಬೆಳೆಯನ್ನು ನಾಶಮಾಡಿತ್ತು. ನಂತರ ಅರಣ್ಯ ಇಲಾಖೆಯವರು ಆನೆಯನ್ನು ಓಡಿಸುವ ಕಾರ್ಯ ಮಾಡಿದ್ದರು.

ಇದನ್ನೂ ಓದಿ:-Siddapura : ಮಿತಿಮೀರಿದ ಆನೆ ಹಾವಳಿ ಗದ್ದೆ,ಮನೆಗಳ ಬಳಿ ಪುಂಡಾಟ.

Siddapura elephant attack

ಇನ್ನು ಜೋಯಿಡಾ ಭಾಗದಲ್ಲಿ ಸಹ ಆನೆಗಳು ಓಡಾಡುತಿದ್ದು ಆಗಾಗ ತೋಟಗಳಿಗೆ ನುಗ್ಗುತ್ತಿವೆ.ಇನ್ನು ಯಲ್ಲಾಪುರ ,ಶಿರಸಿ,ಸಿದ್ದಾಪುರ, ಮುಂಡಗೋಡು ಭಾಗದಲ್ಲಿ ಸಹ ಆನೆಗಳು ನವಂಬರ್ ನಿಂದ ಡಿಸೆಂಬರ್ ವೇಳೆಯಲ್ಲಿ ಓಡಾಡುತ್ತಿವೆ. ಆಹಾರ ಅರಸಿ ಕಾಡು ಬಿಟ್ಟು ನಾಡಿನತ್ತ ಮುಖಮಾಡುತಿದ್ದು ರೈತರ ಫಸಲಿಗೆ ಲಗ್ಗೆ ಇಡುತ್ತಿವೆ.

Advertisement

ಆನೆ ಕಾರಿಡಾರ್ ಗೆ ಒತ್ತುವರಿ ಸಂಕಷ್ಟ.

 

ಕಾಡಾನೆಯಿಂದ ದಾಳಿಗೊಳಗಾದ ಗದ್ದೆ

ಪ್ರತಿ ವರ್ಷ ಆನೆಗಳು ಹಳಿಯಾಳ ದಾಂಡೇಲಿ ,ಯಲ್ಲಾಪುರ ಭಾಗದಿಂದ ಮುಂಡಗೋಡು ಭಾಗದ ಮೂಲಕ ಸಂಚಾರ ಮಾಡುತ್ತವೆ. ಯಲ್ಲಾಪುರ ಭಾಗದಲ್ಲಿ ನೀರು ಆಶ್ರಯಿಸಿ ಕೆಲವು ದಿನ ಕಳೆಯುತ್ತವೆ. ಆದರೇ ಅರಣ್ಯ ಒತ್ತುವರಿ , ರಸ್ತೆ ಅಭಿವೃದ್ಧಿಯಿಂದಾಗಿ ಆನೆಗಳು ಸಂಚರಿಸುವ ಮಾರ್ಗದ ಪತ ಬಂದ್ ಆಗುತಿದ್ದು , ಜನ ಬೇಲಿ ಹಾಕಿ ಉಳುಮೆ ಮಾಡುತಿದ್ದಾರೆ. ಇದರಿಂದಾಗಿ ಆನೆಗಳು ಮಾರ್ಗ ಬದಲಿಸುತಿದ್ದು ಇದೀಗ ಆನೆಗಳು ಬಾರದ ಪ್ರದೇಶಗಳಲ್ಲಿ ಸಹ ಆನೆಗಳ ಹಿಂಡು ಬರತೊಡಗಿದೆ.

Advertisement
Tags :
adventureDandeliElephantsHighwaynatureSafetyFirstSelfieTouristsWildlifeWildlifeEncounter
Advertisement
Next Article
Advertisement