Bigg Boss kannda ರಿಯಾಲಿಟಿ ಶೋ ರದ್ದಿಗಾಗಿ ಸಾಗರ ನ್ಯಾಯಾಲದಲ್ಲಿ ದಾವೆ? ಏನಿದು ಪ್ರಕರಣ?
ಬಿಗ್ ಬಾಸ್ ರಿಯಾಲಿಟಿ ಶೋ ರದ್ದಿಗಾಗಿ ಸಾಗರ ನ್ಯಾಯಾಲದಲ್ಲಿ ದಾವೆ? ಏನಿದು ಪ್ರಕರಣ?
ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ 11 ನೇ ಸೀಸನ್ ಗೆ ಮತ್ತೊಂದು ಸಂಕಷ್ಟ: ಸಾಗರ ನ್ಯಾಯಾಲಯದಿಂದ ತುರ್ತು ನೋಟಿಸ್ ಜಾರಿ!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಗಳಲ್ಲಿ ಒಂದಾದ ಕನ್ನಡ ಚಿತ್ರರಂಗದ ಮಾಣಿಕ್ಯ ಕಿಚ್ಚ ಸುದೀಪ್ ಹೋಸ್ಟ್ ಮಾಡುತ್ತಿರುವ ಬಿಗ್ ಬಾಸ್ 11 ನೇ ಸೀಸನ್ ಗೆ ( Colors Kannada Bigg Boss season 11) ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಿರುವುದು ಸುಳ್ಳಲ್ಲ.
ಬಿಗ್ ಬಾಸ್ 11 ನೇ ಸೀಸನ್ ಪ್ರಾರಂಭವಾಗಿ ಇಂದಿಗೆ 19 ದಿನ ಕಳೆದಿದೆ .ಈ ನಡುವೆ ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಅನೇಕ ಅರೋಪ ಕೇಳು ಬಂದಿದ್ದು ಕಳೆದ ವಾರ . 'ಬಿಗ್ ಬಾಸ್' ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಮಹಿಳಾ ಆಯೋಗಕ್ಕೆ ಪತ್ರದ ಮೂಲಕ ವಕೀಲೆ ದೂರು ನೀಡಿದ್ದರು .
ಇನ್ನೂ ಇದೇ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ತಂಡ ಎಚ್ಚೆತ್ತುಕೊಂಡು ಈ ಬಾರಿಯ ನರಕ-ಸ್ವರ್ಗ ಎಂಬ ಪರಿಕಲ್ಪನೆಯನ್ನು ಅರ್ಧಕ್ಕೆ ನಿಲ್ಲಿಸಿ ಎಲ್ಲಾ ಸ್ಪರ್ಧಿಗಳನ್ನು ಒಂದೇ ಮನೆಯಲ್ಲಿ ಇರುವ ಅವಕಾಶ ಕಲ್ಪಿಸಿಕೊಡಲಾಗಿದೆ.
ಸಂಕಷ್ಟಗಳಿಂದ ಮುಕ್ತಿಗೊಂಡಿದೆ ಎಂದುಕೊಂಡಿದ್ದ ಕಲರ್ಸ್ ಕನ್ನಡ ತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ .
ಅದುವೇ ಬಿಗ್ ಬಾಸ್ 11 ನೇ ಸೀಸನ್ ಪ್ರಸಾರವನ್ನು ಖಾಯಂ ಅಗಿ ರದ್ದುಪಡಿಸುವಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ಮಾನ್ಯ ಪ್ರಧಾನ ವ್ಯವಹಾರ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಹಾಕಲಾಗಿರುವ ಅರ್ಜಿ.
- Dandeli| ಗ್ರಾಹಕರ ಸೋಗಿನಲ್ಲಿ ಬರ್ತಾರೆ ಈ ಕಳ್ಳಿಯರು! ವಿಡಿಯೋ ನೋಡಿ appeared first on ಕನ್ನಡವಾಣಿ.ನ್ಯೂಸ್.">Dandeli| ಗ್ರಾಹಕರ ಸೋಗಿನಲ್ಲಿ ಬರ್ತಾರೆ ಈ ಕಳ್ಳಿಯರು! ವಿಡಿಯೋ ನೋಡಿ
- Uttra kannda | ಫಟಾ ಫಟ್ ಸುದ್ದಿ 18 October 2024 appeared first on ಕನ್ನಡವಾಣಿ.ನ್ಯೂಸ್.">Uttra kannda | ಫಟಾ ಫಟ್ ಸುದ್ದಿ 18 October 2024
- Arecanut price| ಅಡಿಕೆ ಧಾರಣೆ 18 october 2024 appeared first on ಕನ್ನಡವಾಣಿ.ನ್ಯೂಸ್.">Arecanut price| ಅಡಿಕೆ ಧಾರಣೆ 18 october 2024
- Weather report| ಹವಾಮಾನ ವರದಿ. appeared first on ಕನ್ನಡವಾಣಿ.ನ್ಯೂಸ್.">Weather report| ಹವಾಮಾನ ವರದಿ.
- Haliyala ವಿದ್ಯುತ್ ಅವಘಡ ಮಳಿಗೆ ಮನೆಗಳು ಬೆಂಕಿಗಾಹುತಿ. appeared first on ಕನ್ನಡವಾಣಿ.ನ್ಯೂಸ್.">Haliyala ವಿದ್ಯುತ್ ಅವಘಡ ಮಳಿಗೆ ಮನೆಗಳು ಬೆಂಕಿಗಾಹುತಿ.
ಹೌದು, ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ 11 ನೇ ಸೀಸನ್ ವಿರುದ್ಧ ಶಿವಮೊಗ್ಗ ಜಿಲ್ಲೆಯ ಸಾಗರದ ವಕೀಲ ಕೆ.ಎಲ್ ಭೋಜರಾಜ್ ಎಂಬವರು ವ್ಯವಹಾರ ಪ್ರಕ್ರಿಯಾ ಸಂಹಿತೆ ಆದೇಶ 39 ನಿಯಮ 1 ಮತ್ತು 2 ರೆಡ್ ವಿತ್ ಸೆಕ್ಷನ್ 151ರ ಪ್ರಕಾರ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಾಧೀಶರಾದ ಚಾಂದಿನಿ ಜಿ.ಯು ರವರು ವಕೀಲ ಕೆ.ಎಲ್ ಭೋಜರಾಜ್ ರವರ ಅರ್ಜಿ ಕೈಗೆತ್ತಿಕೊಂಡಿದ್ದು ಸಿವಿಲ್ ಕಾರ್ಯವಿಧಾನದ ಕೋಡ್ ಕಾಯಿದೆ U/sec.26,order7,rule1 ಅಡಿಯಲ್ಲಿ ಕಲರ್ಸ್ ಕನ್ನಡ ವಾಹಿನಿಯ ನಿರ್ಮಾಪಕರ ಹಾಗೂ ಸಂಪಾದಕರಿಗೆ ತುರ್ತು ನೋಟಿಸ್ ನೀಡಿದ್ದು ಅರ್ಜಿ ವಿಚಾರಣೆ ಅಕ್ಟೋಬರ್ 28 ರಂದು ನಡೆಯಲಿದೆ.
ಇದನ್ನೂ ಓದಿ:-Darshan bail case| ನಟ ದರ್ಶನ್ ,ಪವಿತ್ರಾ ಗೌಡಾಗೆ ಜಾಮೀನು ನಿರಾಕರಣೆ.
ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಮೇರು ನಟ ಕಿಚ್ಚ ಸುದೀಪ್ ಹೋಸ್ಟ್ ಮಾಡುತ್ತಿರುವ ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈ ರೀತಿ ಒಂದಿಲ್ಲ ಒಂದು ಸಂಕಷ್ಟಗಳು ಎದುರಿಸುತ್ತಿದ್ದು, ಈ ಬಾರಿಯ ಬಿಗ್ ಬಾಸ್ 11ನೇ ಸೀಸನ್ ಖಾಯಂ ರದ್ದು ಅಗುತ್ತ ಕಾದು ನೋಡಬೇಕಾಗಿದೆ.