Karwar ನಗರಸಭೆಯಲ್ಲೊಂದು NIGHT SHELTER ಏನಿದು ಗೊತ್ತಾ? Video ನೋಡಿ
ಕಾರವಾರ :- ಉತ್ತರ ಕನ್ನಡ ಜಿಲ್ಲೆ (Uttra kannda) ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆಗಳಲ್ಲಿ ಒಂದು. ಹೀಗಿರುವಾಗ ಗೋವ ಗಡಿಭಾಗದ ಕಾರವಾರದ (karwar) ಜಿಲ್ಲಾ ಕೇಂದ್ರಗಳಿಗೆ ಕೆಲಸ ನಿಮಿತ್ತ ಇತರೆ ಊರುಗಳಿಂದ ಜಿಲ್ಲಾ ಕೇಂದ್ರದ ಕಚೇರಿಗಳಿಗೆ ಬಂದು ಹೋಗುವಷ್ಟರಲ್ಲಿ ಸಂಜೆ ಏಳರ ನಂತರ ಘಟ್ಟದ ಭಾಗ ಸೇರಿದಂತೆ ಹಲವು ತಾಲೂಕುಗಳಿಗೆ ಬಸ್ ವ್ಯವಸ್ಥೆ ಇಲ್ಲ.
ಇದನ್ನೂ ಓದಿ:-Karwar | ಹಣಕೋಣ ಉದ್ಯಮಿ ಹತ್ಯೆ -ಪ್ರಮುಖ ಆರೋಪಿ ಆತ್ಮಹತ್ಯೆ ಮೂವರ ಬಂಧನ
ಇದಲ್ಲದೇ ಅದೆಷ್ಟೋ ಬಡ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಇತರೆ ಊರುಗಳಿಂದ ಕಾರವಾರಕ್ಕೆ ಬಂದು ದುಬಾರಿ ಲಾಡ್ಜ್ ದರ ನೀಡಲಾಗದೇ ಬಸ್ ನಿಲ್ದಾಣದಲ್ಲೇ ತಂಗುತ್ತಾರೆ.
ಹೀಗಾಗಿ ಇದನ್ನು ಮನಗಂಡ ಕಾರವಾರ ನಗರಸಭೆಯಿಂದ NIGHT SHELTER ನನ್ನು ಸ್ಥಾಪಿಸಿದ್ದು 20 ಬೆಡ್ ಗಳ ಉತ್ತಮ ಗುಣಮಟ್ಟದ ವಸತಿ ವ್ಯವಸ್ಥೆ ಕಲ್ಪಿಸಿದೆ.
ಇಲ್ಲಿ ಕೇವಲ ಜಿಲ್ಲೆಯವರಲ್ಲದೇ ಹೊರ ಜಿಲ್ಲೆ,ರಾಜ್ಯದವರಿಗೂ ಅವಕಾಶ ಇದ್ದು , ಇಲ್ಲಿ ತಂಗಬೇಕಾದರೇ ನಿಮ್ಮ ಯಾವುದಾದರೂ ಸರ್ಕಾರದ ಅನುಮೋದಿತ ಗುರುತಿನ ಚೀಟಿಯನ್ನು ,ಅಂದರೇ ಆಧಾರ್ ಕಾರ್ಡ,ಓಟರ್ ಐಡಿಯ ನಕಲನ್ನು ನೀಡಿ ಇಲ್ಲಿ ತಂಗಬಹುದು.
ಒಂದು ಬೆಡ್ ಗೆ 100 ರೂ ದರ ವಿಧಿಸುತ್ತಾರೆ. ಇದು ಇಲ್ಲಿನ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ. ಈ ಷಲ್ಟರ್ ನಲ್ಲಿ ಉತ್ತಮ ಬೆಡ್ ವ್ಯವಸ್ಥೆ ,ಪ್ಯಾನ್ ಹಾಗೂ ಪಕ್ಕದಲ್ಲಿಯೇ ಶೌಚಾಲಯ ವ್ಯವಸ್ಥೆ ಸಹ ಇದ್ದು ಕಾರವಾರದ ನಗರಸಭೆಗೆ ಆಗಮಿಸಿ ಇಲ್ಲಿನ ಸಿಬ್ಬಂದಿ ಸಂಪರ್ಕಿಸಿ ಈ ನೈಟ್ ಷಲ್ಟರ್ ನನ್ನು ಪಡೆಯಬಹುದಾಗಿದೆ.