FACT CHECK :ಕುಮಟಾ -ಶಿರಸಿ ರಸ್ತೆ ಬಂದ್ ! ವೈರಲ್ PHOTO ಹಿಂದಿದೆ "ಪೇಪರ್ ಲೀಕ್ "ಕಥೆ!
FACT CHECK NEWS- ಕುಮಟಾ -ಶಿರಸಿ (kumta -sirsi) ಹೆದ್ದಾರಿ ಬಂದ್ ಆಗಲಿದೆ ಎಂಬ ಕುರಿತು ಸೋಷಿಯಲ್ ಮೀಡಿಯಾ (social media )ದಲ್ಲಿ ಕಳೆದ ಒಂದು ವಾರದಿಂದ ಸುದ್ದಿ ಹರಿದಾಡುತ್ತಿದೆ. ಆದರೇ ಈ ಕುರಿತು ಸಾಲಷ್ಟು ಜನರು ಬಂದ್ ಆಗುತ್ತಿದೆ ಎಂದೇ ನಂಬಿದ್ದರು.
ಇದನ್ನೂ ಓದಿ:-Karnataka: ಜನವಸತಿ ಪ್ರದೇಶಗಳತ್ತ ಆನೆಗಳ ಹಾವಳಿ ವಿಡಿಯೋ ನೋಡಿ.
ಆದರೇ ಇದು ಹೇಗೆ ಷೇರ್ ಆಯ್ತು ,ಆರ್ಡರ್ ಮಾಡಿದ್ದಾರೆಯೇ ಎಂಬ ಮಾಹಿತಿ ಕುರಿತು ಕನ್ನಡವಾಣಿ ರಿಯಾಲಿಟಿ ಚಕ್ ಮಾಡಿದಾಗ ಸಿಕ್ಕಿದ್ದು ಪ್ರಿಂಟಿಂಗ್ ಪ್ರೆಸ್ ಮಾಲೀಕನ ಪೇಪರ್ ಲೀಕ್ ಸ್ಟೋರಿ.
ಹೌದು ಕುಮಟಾ- ಶಿರಸಿ ಹೆದ್ದಾರಿಯನ್ನು ಬಂದ್ ಮಾಡುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಸ್ತಾವನೆ ಸಲ್ಲಿಸಿದ್ದು ನಿಜ.
ಈ ಕುರಿತು ಕನ್ನಡವಾಣಿ ಜೊತೆ NHAI ಅಧಿಕಾರಿ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಬಂದ್ ಮಾಡುವ ಕುರಿತು ಜಿಲ್ಲಾಧಿಕಾರಿ ಜೊತೆ ಚರ್ಚೆ ನಡೆದಿದೆ. ಈ ವೇಳೆ ಬಂದ್ ಮಾಡುವ ಕುರಿತು ಒಪ್ಪಿಗೆ ಸಿಕ್ಕಲ್ಲಿ ಅದರ ಆದೇಶ ವನ್ನು ಪ್ರಿಂಟ್ ಮಾಡಿಸುವ ಕುರಿತು ಜಿಲ್ಲೆಯ ಪ್ರಿಂಟಿಂಗ್ ಪ್ರಸ್ ನ ಮಾಲೀಕರಿಗೆ ಮಾಹಿತಿ ನೀಡಿ ಪ್ರಿಂಟ್ ಮಾಡಲು ಸಿದ್ದತೆ ಮಾಡಿಕೊಳ್ಳಲು ಹೇಳಲಾಗಿತ್ತು.
ಆದರೇ ಪ್ರಿಂಟಿಂಗ್ ಪ್ರಸ್ ನವರು ತಾವೇ ಬ್ರೇಕಿಂಗ್ ನ್ಯೂಸ್ ಕೊಡುವ ಆತುರದಲ್ಲಿ ಪೋಸ್ಟರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ಪೋಸ್ಟರ್ (poster) ಎಲ್ಲೆಡೆ ವೈರಲ್ ಆಗಿದೆ. ಆದರೇ ಮಾಧ್ಯಮಗಳಲ್ಲಿ ಸುದ್ದಿ ಬಾರದ ಹಿನ್ನಲೆಯಲ್ಲಿ ಜನ ಕೂಡ ಗೊಂದಲಕ್ಕೆ ಸಿಲುಕಿದ್ದಾರೆ.
NHAI ಅಧಿಕಾರಿ ಹೇಳುವಂತೆ ಇನ್ನೂ ಅಧಿಕೃತವಾಗಿ ಬಂದ್ ಮಾಡಿಲ್ಲ. ಅಧಿಕೃತವಾಗಿ ಇದುವರೆಗೂ ಬಂದ್ ಮಾಡುವ ದಿನಾಂಕ ನಿಗಧಿ ಆಗಿಲ್ಲ.
ಈಗ ಸದ್ಯ ವಾಹನ ನಿಷೇಧ ಅನಿವಾರ್ಯತೆ ಇಲ್ಲದ ಸ್ಥಳದಲ್ಲಿ ಕಾಮಗಾರಿ ಮಾಡಲು ಸೂಚಿಸಲಾಗಿದೆ.
ವಾಹನ ನಿಷೇಧ ಅನಿವಾರ್ಯತೆ ಇದ್ದ ಸ್ಥಳದಲ್ಲಿ ಬಂದ್ ಮಾಡಿದ ಬಳಿಕ ಕಾಮಗಾರಿ ಮಾಡಲು ಸೂಚಿಸಲಾಗಿದೆ.ನಿಷೇಧ ಮಾಡದೆ ವಾಹನ ಸಂಚಾರಕ್ಕೆ ಸಮಸ್ಯೆ ಆಗದ ಹಾಗೆ ಕಾಮಗಾರಿ ಮಾಡಲಾಗುತ್ತಿದೆ.
ನವೆಂಬರ್ 15 ರಂದು ವಾಹನ ಸಂಚಾರ ನಿಷೇಧಕ್ಕೆ ನಾವು ಮನವಿ ಮಾಡಿದ್ದೆವು.ಆದ್ರೆ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಲಗೆ ಮೇರೆಗೆ ಈ ನಿರ್ಣಯ ಕೈಗೊಂಡಿದ್ದೇವೆ.
ಮುಂದೆ ಬಂದ್ ಮಾಡಲು ನಿರ್ಣಯಿಸಿದಾಗ ಹಾಕಲು ಪ್ರಿಂಟಿಂಗ್ ಪ್ರೆಸ್ ನಲ್ಲಿ ಬೊರ್ಡ್ ಮಾಡುವಂತೆ ಹೇಳಿದ್ದೆವು. ಅವರು ತಪ್ಪಾಗಿ ಅರ್ಥೈಸಿಕೊಂಡು ಹಳೆಯ ಆದೇಶದಂತೆ ಇರಬಹುದು ಅಂತಾ ಅನ್ಕೊಂಡು ಈ ಅವಾಂತರ ಮಾಡಿದ್ದಾರೆ ಎಂದು ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಪ್ರಿಂಟಿಂಗ್ ಪ್ರಸ್ ನವರು ವಾಹನ ನಿಷೇಧದ ಪೊಸ್ಟ್ ರೆಡಿ ಮಾಡಿ ನಮ್ಮ ಗಮನಕ್ಕೆ ತರದೆ ವೈರಲ್ ಮಾಡಿದ್ದಾರೆ.
ಸಾರ್ವಜನಿಕರು ಈ ಪೊಸ್ಟ್ ಅನ್ನು ಅಧಿಕೃತವಾಗಿ ಪರಗಣಿಸಬಾರದೆಂದು ಹೆದ್ದಾರಿ ಪ್ರಾಧೀಕಾರ ಅಧಿಕಾರಿ ಶಿವಕುಮಾರ್ ತಿಳಿಸಿದ್ದು ,ಸದ್ಯ ಕುಮಟಾ -ಶಿರಸಿ ಹೆದ್ದಾರಿ ಬಂದ್ ಮಾಡುವ ನಿರ್ಣಯ ಕೈಗೊಂಡಿಲ್ಲ .