Uttara Kannada Suicide Cases 2025|ಒಂದು ವರ್ಷದಲ್ಲಿ ಎಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಗೊತ್ತಾ?
Uttara kannada| ಜಿಲ್ಲೆಯಲ್ಲಿ ಹೆಚ್ಚಾಯ್ತು ಆತ್ಮಹತ್ಯೆ ಪ್ರಕರಣ |ಒಂದು ವರ್ಷದಲ್ಲಿ ಎಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಗೊತ್ತಾ?
Uttara Kannada Suicide Report 2025/ ಕಾರವಾರ ( 29 october 2025) :-ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೀಗ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.
ಬದಲಾಗುತ್ತಿರುವಬದುಕು,ಏಕಾಂಗಿತನ,ಜಂಜಾಟಗಳು,ಸಾಲ ,ಒತ್ತಡಗಳು ಆತ್ಮಹತ್ಯೆಯಂತಹ ಪ್ರಕರಣಗಳು ಏರಿಕೆ ಕಾಣುತ್ತಿದೆ .ಹಾಗಿದ್ರೆ ಉತ್ತರ ಕನ್ನಡ (uttara Kannada) ಜಿಲ್ಲೆಯಲ್ಲಿ ಎಷ್ಟು ಪ್ರಕರಣ ಅಂತೀರಾ ಈ ಬಗ್ಗೆ ವಿವರ ಇಲ್ಲಿದೆ
ಯಾಂತ್ರಿಕ ಬದುಕಿನಲ್ಲಿ,ಒತ್ತಡ,ಸಾಲ, ಜಂಡಾಟಗಳು,ಕುಟುಂಬ ,ಆರೋಗ್ಯ( health)ಸಮಸ್ಯೆಗಳು ಯುವಕ ಹಾಗೂ ವೃದ್ಧರಲ್ಲಿ ಆತ್ಮಹತ್ಯೆಗೆ ಪ್ರೇರೇಪಣೆ ನೀಡುತ್ತಿರುವುದು ಇದೀಗ ಬೆಳಕಿಗೆ ಬಂದಿದೆ.
Karwar|ಕದಂಬ ನೌಕಾ ನೆಲೆಯ ಬಳಿ ಚಿರತೆ ಪ್ರತ್ಯಕ್ಷ |ವಿಡಿಯೋ ನೋಡಿ
ಹೌದು ಉತ್ತರ ಕನ್ನಡ ಜಿಲ್ಲೆಯಲ್ಲಿ 18 ರಿಂದ 35ವರ್ಷದೊಳಗಿನ ಯುವಕರು ಹಾಗೂ 70 ದಾಡುತ್ತಿರುವ ಹಿರಿಯ ನಾಗರೀಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವರದಿ ಪೊಲೀಸ್ ಇಲಾಖೆಯ ಅಂಕೆ ಸಂಕೆಗಳಿಂದ ತಿಳಿದು ಬಂದಿದೆ. ಮಹಿಳೆಯರಿಗಿಂತ ಪುರುಷರೇ ಅತೀ ಹೆಚ್ಚು ಆತ್ಮಹತ್ಯೆ ( suicide) ಮಾಡಿಕೊಂಡಿದ್ದಾರೆ.
Kumta| ಕೊನೆಗೂ ಸಿಕ್ಕ ಪುರಸಭೆ ಆರ್.ಓ ವೆಂಕಟೇಶ್ |ಜಿಲ್ಲಾಧಿಕಾರಿ ಹೇಳಿದ್ದೇನು?
ಕಳೆದ ವರ್ಷ ವಿವಿಧ ಕಾರಣದಿಂದ ಉತ್ತರ ಕನ್ನಡ (uttara kannada) ಜಿಲ್ಲೆಯಲ್ಲಿ 253 ಜನ ಆತ್ಮಹತ್ಯೆ ಮಾಡಿಕೊಂಡಿದ್ದರೆ ,ಈ ವರ್ಷ ವರ್ಷ ಅಕ್ಟೋಬರ್ ತಿಂಗಳ ಅಂತ್ಯದಲ್ಲೇ 226 ಜನ ವಿವಿಧ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದರಲ್ಲಿ ಪುರಷರೇ ಹೆಚ್ಚಾಗಿದ್ದು , ಹೆಚ್ಚಿನವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೇ , ಎರಡನೇ ಸ್ಥಾನದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ.
ಹೆಚ್ಚಿನ ಪ್ರಕರಣದಲ್ಲಿ ವಿವಾಹ ಸಂಬಂಧ,ಅನಾರೋಗ್ಯ, ಆರ್ಥಿಕ ಸಮಸ್ಯೆ , ಏಕಾಂಗಿತನ ಆತ್ಮಹತ್ಯೆಯ ಪ್ರಮುಖ ಕಾರಣವಾಗಿದೆ ಎಂಬುದು ತಿಳಿದು ಬಂದಿದ್ದು ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದೀಪನ್ ಮಾಹಿತಿ ನೀಡಿದ್ದಾರೆ.
ಇನ್ನು ಉತ್ತರ ಕನ್ನಡ (uttara kannada) ಜಿಲ್ಲೆಯಲ್ಲಿ ಅಂಕೋಲ ದಲ್ಲಿ ಈ ವರ್ಷ 71 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆಯಲ್ಲಿ ಹೆಚ್ಚಿನದ್ದು ಗಂಡ-ಹೆಂಡತಿ ವೈಮನಸ್ಸು ಕಾರಣವಾಗಿದ್ರೆ ,ಸಾಲ, ಮಾನಸಿಕ ಒತ್ತಡ ಸಹ ಕಾರಣವಾಗಿದೆ. ಇನ್ನು ಹಿರಿಯ ನಾಗರೀಕರಲ್ಲಿ ಏಕಾಂಗಿತನ,ಅನಾರೋಗ್ಯ ಗಳು ಆತ್ಮಹತ್ಯೆಗೆ ಕಾರಣವಾಗುತ್ತಿದೆ.
ಹಲವು ಕಾರಣಗಳು ಆತ್ಮಹತ್ಯೆಗೆ ಪ್ರೇರೇಪಣೆ ನೀಡುತಿದ್ದು ಮಾನಸಿಕವಾಗಿ ಒತ್ತಡಕ್ಕೆ ಒಳಗಾದವರನ್ನು ಅವರ ಕುಟುಂಬದವರು ಗುರುತಿಸಬೇಕು, ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸಬೇಕು ಅದು ಸಾಲದಿದ್ದಾಗ ಮನೋ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು ಎಂಬುದು ಮನೋ ವೈದ್ಯರಾದ ಕಾರವಾರ ಕ್ರಿಮ್ಸ್ ವೈದ್ಯಕೀಯ ಕಾಲೇಜಿನ ಪ್ರೊಪೇಸರ್ ಡಾ.ವಿಜಯರಾಜ್ ರವರ ಮಾತು.
ಬದುಕಿನ ಜಂಜಾಟಗಳು ,ಒತ್ತಡಗಳು ಇಂದಿನ ಪೀಳಿಗೆಗೆ ಆತ್ಮವಿಶ್ವಾಸ ಕುಗ್ಗಿಸುವಂತೆ ಮಾಡುತಿದ್ದು , ಜೊತೆಗೆ ವೃದ್ದಾಪ್ಯದಲ್ಲಿ ಅನಾರೋಗ್ಯ , ಒಂಟಿತನಗಳು ವೃದ್ಧರಲ್ಲಿ ಆತ್ಮಹತ್ಯೆಯಂತಹ ಘಟನೆಗಳು ಏರಿಕೆಯಾಗುತ್ತಿರುವುದು ಮಾತ್ರ ವಿಪರ್ಯಾಸ.
