BJP ಕೈ ಹಿಡಿದ AAP ಮಾಜಿ ಸಚಿವ ಕೈಲಾಶ್ ಗಹ್ಲೋಟ್
Report by sanjana mishra
NewDelhi : ಆಪ್ ಅದ್ಮಿ ಪಕ್ಷಕ್ಕೆ ಇತ್ತಚೇಗೆ ರಾಜೀನಾಮೆ ನೀಡಿದ್ದ ಮಾಜಿ ಸಚಿವ ಕೈಲಾಶ್ ಗಹ್ಲೋಟ್ ಇಂದು ಬಿಜೆಪಿ(Bjp) ಸೇರ್ಪಡೆಯಾಗಿದ್ದಾರೆ.
ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್, ಜಯ್ ಪಾಂಡಾ, ದುಷ್ಯಂತ್ ಗೌತಮ್, ಹರ್ಷ್ ಮಲ್ಹೋತ್ರಾ ಮತ್ತು ಇತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾದರು.
ಇದನ್ನೂ ಓದಿ:-Gokarna ಆರೋಗ್ಯ ಕೇಂದ್ರದಲ್ಲಿದ್ದ ಕೋಟಿ ಮೌಲ್ಯದ ಪುರಾತನ ಬುದ್ದನ ಲೋಹ ಶಿಲ್ಪ ಕಾಣೆ!
ಸೇರ್ಪಡೆ ನಂತರ ಮಾತನಾಡಿದ ಅವರು ಎಎಪಿಯ ಟೀಕೆಯನ್ನು ತಳ್ಳಿಹಾಕಿದ ಗಹ್ಲೋಟ್ ಅವರು ಒತ್ತಡದ ಅಡಿಯಲ್ಲಿ ತೊರೆದರು, ತಮ್ಮ ನಿರ್ಧಾರ ರಾತ್ರೋರಾತ್ರಿ ಮಾಡಿದಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷವು ಅದರ ಮೂಲ ಮೌಲ್ಯಗಳು ಮತ್ತು ನೈತಿಕತೆಯಿಂದ ದೂರ ಸರಿದಿದೆ ಹೀಗಾಗಿ ರಾಜೀನಾಮೆ ನೀಡಬೇಕಾಯಿತು ಎಂದು ಹೇಳಿದರು.
ಯಾವುದೇ ಬಾಹ್ಯ ಒತ್ತಡದಿಂದ ನಾನು ಬಿಜೆಪಿಗೆ (Bjp)ಸೇರಲಿಲ್ಲ, ಎಎಪಿ ತನ್ನ ಸಿದ್ಧಾಂತವನ್ನು ರಾಜಿ ಮಾಡಿಕೊಂಡಿದ್ದರಿಂದ ನಾನು ರಾಜೀನಾಮೆ ನೀಡಬೇಕಾಯಿತು.
ನಾನು ಆರಂಭದಲ್ಲಿ ಸಾಮಾನ್ಯ ಜನರಿಗೆ ಸೇವೆ ಸಲ್ಲಿಸಲು ಎಎಪಿಗೆ ಸೇರಿದೆ, ಆದರೆ ಈಗ, ಪಕ್ಷವು ಅದರ ಮೂಲ ಧ್ಯೇಯದಿಂದ ಸಂಪರ್ಕ ಕಡಿತಗೊಂಡಿದೆ. ಅದರ ನಾಯಕರು 'ಆಮ್' (ಸಾಮಾನ್ಯ) ನಿಂದ 'ಖಾಸ್' (ಗಣ್ಯರು) ಗೆ ಬದಲಾಗುತ್ತಿದ್ದಾರೆ ಎಂದು ಹೇಳಿದರು.
ಕೈಲಾಶ್ ಗೆಹ್ಲೋಟ್ ಬಿಜೆಪಿ ಸೇರ್ಪಡೆ ಬಗ್ಗೆ ಮಾತನಾಡಿದ ಆಪ್ ರಾಷ್ಟ್ರೀಯ ಸಂಚಾಲು ಅರವಿಂದ್ ಕೇಜ್ರಿವಾಲ್ ಅವರು, ಗಹ್ಲೋಟ್ ಅವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರರು, ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು ಎಂದರು.