For the best experience, open
https://m.kannadavani.news
on your mobile browser.
Advertisement

BJP ಯಲ್ಲಿ ಪಂಗಡವೇ ಪಕ್ಷವಾಗಿದೆ ,ನಾಯಕರೇ ಇಲ್ಲ- ಶಿವರಾಮ್ ಹೆಬ್ಬಾರ್

Uttara kannda news 03 December 2024 :-ಕರ್ನಾಟಕದಲ್ಲಿ ಬಿಜೆಪಿ (Bjp) ಪಕ್ಷವಾಗಿ ಉಳಿಯದೇ ಪಂಗಡಗಳೇ ಪಕ್ಷವಾಗಿದೆ, ಕರ್ನಾಟಕ ಬಿಜೆಪಿಯಲ್ಲಿ ನಾಯಕರೇ ಇಲ್ಲ ಎಂದು ಯಲ್ಲಾಪುರದ ಬಿಜೆಪಿ ರೆಬಲ್ ಶಾಸಕ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಪಕ್ಷದ ನಾಯಕರನ್ನು ಟೀಕಿಸಿದ್ದಾರೆ.
03:03 PM Dec 03, 2024 IST | ಶುಭಸಾಗರ್
bjp ಯಲ್ಲಿ ಪಂಗಡವೇ ಪಕ್ಷವಾಗಿದೆ  ನಾಯಕರೇ ಇಲ್ಲ  ಶಿವರಾಮ್ ಹೆಬ್ಬಾರ್

Uttara kannda news 03 December 2024 :-ಕರ್ನಾಟಕದಲ್ಲಿ ಬಿಜೆಪಿ (Bjp) ಪಕ್ಷವಾಗಿ ಉಳಿಯದೇ ಪಂಗಡಗಳೇ ಪಕ್ಷವಾಗಿದೆ, ಕರ್ನಾಟಕ ಬಿಜೆಪಿಯಲ್ಲಿ ನಾಯಕರೇ ಇಲ್ಲ ಎಂದು ಯಲ್ಲಾಪುರದ ಬಿಜೆಪಿ ರೆಬಲ್ ಶಾಸಕ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಪಕ್ಷದ ನಾಯಕರನ್ನು ಟೀಕಿಸಿದ್ದಾರೆ.

Advertisement

ಇದನ್ನೂ ಓದಿ:-Uttara kannda -ಪಶ್ಚಿಮ ಘಟ್ಟ ಭಾಗದಲ್ಲಿ ಭೂಕಂಪ-ತಜ್ಞರ ಸ್ಥಳ ಪರಿಶೀಲನೆ ಜಿಲ್ಲಾಧಿಕಾರಿ ಹೇಳಿದ್ದಿಷ್ಟು.

ಇಂದು ಶಿರಸಿಯಲ್ಲಿ (sirsi) ಮಾತನಾಡಿದ ಅವರು ಯತ್ನಾಳ್ ರವರಿಗೆ ಷೋಕಾಸ್ ನೋಟಿಸ್ ಕೊಟ್ಟಿರುವ ಬಗ್ಗೆ ಟೀಕಿಸಿದ ಅವರು ಯತ್ನಾಳ್, ಕುಮಾರ ಬಂಗಾರಪ್ಪ, ರಮೇಶ್ ಜಾರಕಿಹೊಳಿ ಅವರೆಲ್ಲಾ ನನ್ನ ಸ್ನೇಹಿತರು. ಆದ್ರೆ, ಈ ಬೆಳವಣಿಗೆಗೆ ಅಂತಿಮವಿಲ್ಲ, ಬೆಳವಣಿಗೆ ಅಂತಿಮ ಘಟ್ಟಕ್ಕೆ ತಲುಪಿದೆ, ಇನ್ನೂ ಮತ್ತೆ ಜೋರಾಗಲಿದೆ.ಇನ್ನು ಕಾದು ನೋಡಿ ಮತ್ತೊಂದು ಪಂಗಡ ನಿರ್ಮಾಣವಾಗುತ್ತೆ ಎಂದರು.

ಇದನ್ನೂ ಓದಿ:-Sirsi ಬಾಲಕಿ ಮೇಲಿನ ದೌರ್ಜನ್ಯಕ್ಕೆ 20 ವರ್ಷ ಶಿಕ್ಷೆ ವಿಧಿಸಿದ ನ್ಯಾಯಾಲಯ

ಇನ್ನು ಯಾವುದೇ ರಾಜಕೀಯ ಪಕ್ಷದಲ್ಲಿ ಅಶಿಸ್ತನ್ನು ಬಹಳ ದಿನ ನುಂಗಿಕೊಂಡು ಹೋದ್ರೆ ,ಬಹಳ ಅಶಿಸ್ತು ಹೊಟ್ಟೆಯಲ್ಲಿ ಹಾಕೊಂಡು ಹೋದ್ರೆ, ರಾಜಕೀಯ ಪಕ್ಷವೇ ಅಶಿಸ್ತಾಗುತ್ತೆ.

ಅಶಿಸ್ತಿಗೆ ಕಾಲಕಾಲಕ್ಕೆ ಔಷಧಿ, ಇಂಜೆಕ್ಷನ್ ಕೊಟ್ರೆ ಅದು ಗುಣವಾಗುತ್ತದೆ.ಅಂತಿಮ ಘಟ್ಟದಲ್ಲಿ ಯಾವ ಇಂಜೆಕ್ಷನ್ ಕೊಟ್ರೂ ಕೂಡ ಇಂಜೆಕ್ಷನೇ ರಿಯ್ಯಾಕ್ಷನ್ ಆಗುತ್ತದೆ.ಬಿಜೆಪಿಯಲ್ಲಿ ಅಶಿಸ್ತು 200% ಕಾಣುತ್ತೆ 100% ಮಾತ್ರವಲ್ಲ ಎಂದು ಈಗಿನ ಬೆಳವಣಿಗೆ ಯನ್ನು ಟೀಕಿಸಿದರು.

ಇನ್ನು ನಾನು ಬಿಜೆಪಿ ಪಕ್ಷದಿಂದ ಒಂದು ವರ್ಷದಿಂದ ದೂರ ಉಳಿದಿದ್ದೇನೆ ಪಕ್ಷದಲ್ಲಿ ನಡೆಯುವ ಆಕ್ರಮಣಕಾರಿ ಸಂದೇಶಗಳು ಗೊತ್ತಾಗುತ್ತಿಲ್ಲ. ನನ್ನನ್ನು ಜನರು 2028ರವರೆಗೆ ಶಾಸಕರಾಗಿ ಆಯ್ಕೆ ಮಾಡಿದ್ದಾರೆ
ಮುಂದೆ ಕಾಲ ನಿರ್ಣಯ ಮಾಡುತ್ತದೆ ಎಂದು ಪಕ್ಷ ಬಿಡುವ ಬಗ್ಗೆ ಮನೋಜ್ಞವಾಗಿ ಹೇಳಿದರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ