ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Gokarna: ಗೋಕರ್ಣ ಗ್ರಹಣ ಸಂದರ್ಭದಲ್ಲಿ ಏನೇನು ಪೂಜೆ ವಿವರ ಇಲ್ಲಿದೆ

Gokarna Chandra Grahan 2025 ಸಂದರ್ಭದಲ್ಲಿ ಮಹಾಬಲೇಶ್ವರ ದೇವಸ್ಥಾನದಲ್ಲಿ ದರ್ಶನ ಹಾಗೂ ಪೂಜೆ ಸಮಯದಲ್ಲಿ ಬದಲಾವಣೆ. ಭಕ್ತರಿಗೆ ವಿಶೇಷ ಮಾಹಿತಿ ಇಲ್ಲಿ ನೋಡಿ.
03:45 PM Sep 06, 2025 IST | ಶುಭಸಾಗರ್
Gokarna Chandra Grahan 2025 ಸಂದರ್ಭದಲ್ಲಿ ಮಹಾಬಲೇಶ್ವರ ದೇವಸ್ಥಾನದಲ್ಲಿ ದರ್ಶನ ಹಾಗೂ ಪೂಜೆ ಸಮಯದಲ್ಲಿ ಬದಲಾವಣೆ. ಭಕ್ತರಿಗೆ ವಿಶೇಷ ಮಾಹಿತಿ ಇಲ್ಲಿ ನೋಡಿ.

Gokarna: ಗೋಕರ್ಣ ಗ್ರಹಣ ಸಂದರ್ಭದಲ್ಲಿ ಏನೇನು ಪೂಜೆ ವಿವರ ಇಲ್ಲಿದೆ

Advertisement

ಮಿಲನ್ ನಲ್ಲಿ ಫೇಸ್ಟಿವಲ್ ಆಫರ್ |ಇಂದೇ ಭೇಟಿನೀಡಿ

ಕಾರವಾರ :- ನಾಳೆ ರಕ್ತ ಚಂದ್ರಗ್ರಹಣ ಸಂಭವಿಸುತಿದ್ದು ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಚಂದ್ರ ಗ್ರಹಣದ ಪ್ರಯುಕ್ತ ಮಹಾಬಲೇಶ್ವರ ಮಂದಿರದಲ್ಲಿ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.ಇದಲ್ಲದೇ

ಮಂದಿರದಿಂದ ನೀಡುವ ಎರಡು ಹೊತ್ತಿನ ಪ್ರಸಾದ ಭೋಜನದ ವ್ಯವಸ್ಥೆಯಲ್ಲಿ ಈ ದಿನದಂದು  ಸಂಜೆ ಭೋಜನದ ವ್ಯವಸ್ಥೆ ಇರುವುದಿಲ್ಲ .ದೇವರ ದರ್ಶನಕ್ಕೆ ಬರುವ ಭಕ್ತರು ಬೆಳಗ್ಗೆ 10-45 ಗಂಟೆಯ ತನಕ ಮಾತ್ರ ದೇವರ ಸ್ಪರ್ಶ ದರ್ಶನಕ್ಕೆ ಅವಕಾಶವಿದ್ದು, ನಂತರ ಮಧ್ಯಾಹ್ನ 12.30 ಗಂಟೆಯ ಒಳಗೆ ಮಹಾಪೂಜೆ ನಡೆಯಲಿದೆ.

Advertisement

Karwar: ಹಬ್ಬದ ಖುಷಿಯನ್ನು ಉಡುಗೊರೆ ಜೊತೆ ಉಳಿತಾಯ ಮಾಡಿ ಆನಂದಿಸಿ ಜಿಲಾನಿ ಹೋಲ್ ಸೇಲ್ ಮಾರ್ಟ ನಲ್ಲಿ ಬಂಪರ್ ಆಫರ್ 

ಸಂಜೆ 4.00 ಗಂಟೆಯಿಂದ 5.30 ರವರೆಗೆ   ಮಾತ್ರ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ನಂತರ  ಏಳು ಗಂಟೆಯ ಒಳಗೆ ಮಹಾಪೂಜೆ ನೆರವೇರಿಸಿ ದೇವಾಲಯ ಮುಚ್ಚಲಾಗುತ್ತೆ. ಗ್ರಹಣ ಕಾಲದ ರಾತ್ರಿ 9.45ರಿಂದ ಮಧ್ಯರಾತ್ರಿ 1-26ರರವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಗ್ರಹಣ ಮೋಕ್ಷದ ಬಳಿಕ ದೇವಾಲಯ ಶುಚಿಯಾಗಿಸಿ ವಿಶೇಷ ಪುಣ್ಯಾಹ ನೆರವೇರುವುದರೊಂದಿಗೆ ದೇವಾಲಯ ಮುಚ್ಚಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

 

Advertisement
Tags :
Chandra Grahan Puja TimingsGokarna Chandra Grahan 2025Gokarna Mahabaleshwar templeGokarna Temple Darshan NewsKarnataka Temple NewsLunar Eclipse 2025 GokarnaUttara Kannada Chandra Grahan
Advertisement
Next Article
Advertisement