Gokarna: ಮಾಹಾಬಲೇಶ್ವರ ದರ್ಶನ ಪಡೆದ ಗೋಲ್ಡನ್ ಬಾಯ್ಸ್! ಯಾರಿವರು ?
Gokarna: ಮಾಹಾಬಲೇಶ್ವರ ದರ್ಶನ ಪಡೆದ ಗೋಲ್ಡನ್ ಬಾಯ್ಸ್ - ಯಾರಿವರು ?
ಗೋಕರ್ಣ :- ಬಾಲಿವುಡ್ ನ ಸಿನಿಮಾ ಫೈನಾನ್ಸರ್ ಮೈಮೇಲೆ 25 ಕೆಜಿ ಚಿನ್ನ ಹೊತ್ತು ತಿರುಗುವ ಗೋಲ್ಡನ್ ಬಾಯ್ಸ (Goldan Boys) ಖ್ಯಾತಿಯ ಪುಣೆಯ ಸನ್ನಿ ನಾನಾ ಸಾಹೇಬ್ ವಾಘಘೋರೆ,ಸಂಜಯ ಗುಜ್ಜಾರ( ಬಂಟಿ) ಕುಟುಂಬ ಸಮೇತರಾಗಿ ಗೋಕರ್ಣದ ಮಹಾಬಲೇಶ್ವರ ದೇವರ ದರ್ಶನ ಪಡೆದು ಆತ್ಮ ಲಿಂಗ ಪೂಜೆ ಸಲ್ಲಿಸಿದರು.

ಈ ಸಂದರರ್ಭದಲ್ಲಿ ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ವೇ. ಸುಬ್ರಹ್ಮಣ್ಯ ಅಡಿ ಪೂಜಾ ಕೈಂಕರ್ಯ ನೆರವೇರಿಸಿ ಮಂದಿರದವತಿಯಿಂದ ಪ್ರಸಾದ ನೀಡಿ ಗೌರವಿಸಿದರು.
ಇದನ್ನೂ ಓದಿ:-Gokarna | ಸಮುದ್ರದಲ್ಲಿ ಸಾವು ಬದುಕಿನ ಹೋರಾಟ ನಡೆಸಿದ ವಿದೇಶಿಗನ ರಕ್ಷಣೆ ಮಾಡಿದ ಲೈಪ್ ಗಾರ್ಡಗಳು ವಿಡಿಯೋ ನೋಡಿ.
ಬಂಗಾರದ ಬಣ್ಣದ ಐಷಾರಾಮಿ ಕಾರ್‌ನಲ್ಲಿ ಬಂದಿಳಿದ ಇವರು ಮೈಮೇಲೆ ಚಿನ್ನದ ಸರ ರಾಶಿ ತೊಟ್ಟು ತೆರಳುತ್ತಿರುವ ವೇಳೆ ಪ್ರವಾಸಿಗರ ಗಮನಸೆಳೆದರಲ್ಲದೇ ಇವರೊಂದಿಗೆ ಪೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು.
ಸಾಮಾಜಿಕ ಜಾಲ ತಾಣದಲ್ಲಿ ಗೋಲ್ಡನ್ ಬಾಯ್ಸ್ ಎಂದೇ ಗುರುತಿಸಿಕೊಂಡ ಇವರು ಸಾಕಷ್ಟು ಪ್ರಚಲಿತದಲ್ಲಿದ್ದು ಗೋಕರ್ಣಕ್ಕೆ ಭೇಟಿ ನೀಡಿದ ವೇಳೆ ಇವರನ್ನು ನೋಡಲು ಜನ ಮುಗಿಬಿದ್ದರು.

ಚಿಕ್ಕ ವಯಸ್ಸಿನಿಂದಲೇ ಕೆಜಿಗಟ್ಟಲೇ ಚಿನ್ನ ಮೈಮೇಲೆ ಹಾಕಿಕೊಳ್ಳುವ ಕ್ರೇಸ್ ಬೆಳಸಿಕೊಂಡಿದ್ದ ಸನ್ನಿ ಕನಿಷ್ಟ 25 ಕೆಜಿ ಚಿನ್ನ ಮೈಮೇಲೆ ಹಾಕಿಕೊಂಡು ತಿರುಗುತ್ತಾರೆ. ಈಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಪ್ರೇಮಸ್ಸ್ ಆಗಿದ್ದು ಜನ ಇವರನ್ನ ಚಿನ್ನದ ಹುಡುಗ ಎಂದೇ ಕರೆಯುತ್ತಾರೆ.
ವಿಡಿಯೋ ನೋಡಿ.