Gokarna ಆರೋಗ್ಯ ಕೇಂದ್ರದಲ್ಲಿದ್ದ ಕೋಟಿ ಮೌಲ್ಯದ ಪುರಾತನ ಬುದ್ದನ ಲೋಹ ಶಿಲ್ಪ ಕಾಣೆ!
Gokarna news 16 November 2024:- ಕನ್ನಡ ಜಿಲ್ಲೆಯ ಕುಮಟಾ(kumta) ತಾಲೂಕಿನ ಗೋಕರ್ಣದ(Gokarna) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬ್ರಿಟೀಷರ ಕಾಲದ ಅತೀ ಹಳೆಯ ಪಂಚಲೋಹದ ಗೌತಮ ಬುದ್ದನ ನಾಲ್ಕು ಅಡಿ ಉದ್ದದ ವಿಗ್ರಹ ಕಾಣೆಯಾಗಿದೆ.
ಆದ್ರೆ ಇದನ್ನು ಯಾರೂ ಕೂಡ ಕದ್ದಿಲ್ಲ. ತೆಗೆದುಕೊಂಡು ಹೋದವರ ಬಗ್ಗೆಯೂ ಮಾಹಿತಿ ಇದ್ದರೂ ಇಲಾಖೆ ನಿರ್ಲಕ್ಷ ಕೋಟಿ ಮೌಲ್ಯದ ನಾಲ್ಕು ಅಡಿ ಎತ್ತರದ ಪಂಚಲೋಹದ ವಿಗ್ರಹ ಬೇರೆಯವರ ಪಾಲಾಗಿದೆ.
ಈ ಕುರಿತು ಗೋಕರ್ಣದ ಗಣೇಶ್ ಎಂಬುವವರು ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ:-Gokarna ಓಂ ಬೀಚ್ ನಲ್ಲಿ ಮಹಿಳೆಯರೇ ಹುಷಾರ್ ನಿಮ್ಮ ಮಾನಕ್ಕಿಲ್ಲ ಇಲ್ಲಿ ಕಿಮ್ಮತ್ತು! ಕಾರಣ ಇಲ್ಲಿದೆ.
ಏನಿದು ಘಟನೆ ಕದ್ದವರು ಯಾರು?
ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬ್ರಿಟೀಷರ ಕಾಲದಲ್ಲಿ ಗೋಕರ್ಣದ ನಾಡಕರ್ಣಿ ಕುಟುಂಬ ದಾನವಾಗಿ ನೀಡಿತ್ತು.
ಗೌತಮ ಬುದ್ಧನ ನಾಲ್ಕುವರೆ ಅಡಿ ಎತ್ತರದ ಪಂಚಲೋಹದ ಮೂರ್ತಿ , 2005 ಕ್ಕೂ ಪೂರ್ವದಲ್ಲಿ ಆರೋಗ್ಯ ಕೇಂದ್ರದ ಮುಖ್ಯದ್ವಾರದ ಅಂಚಿನಲ್ಲಿ ಇರಿಸಲಾಗಿತ್ತು.
ಆರೋಗ್ಯ ಕೇಂದ್ರದ ತಾತ್ಕಾಲಿಕ ವೈದ್ಯಾಧಿಕಾರಿ ಯಾಗಿದ್ದ ಡಾ. ರಾಘವೇಂದ್ರ ಹೆಬ್ಬಾರ್ ಎನ್ನುವವರು ಆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಆ ಸಮಯದಲ್ಲಿ ಗೋಕರ್ಣದ ರವೀಂದ್ರ ಎಸ್ ಜೋಷಿ ಎನ್ನುವವರಿಗೆ ಬಹುಮೌಲ್ಯವಾದ ಗೌತಮ ಬುದ್ಧನ ಮೂರ್ತಿಯನ್ನು ಸರ್ಕಾರದ ಯಾವ ನಿಯಮವನ್ನೂ ಪಾಲಿಸದೇ ಹಸ್ತಾಂತರಿಸಲಾಗಿದೆ.
ಈ ಬಗ್ಗೆ ಆಡಿಟ್ ಪರಶೀಲನೆ ಕೂಡ ನಡೆದಿದ್ದು , ಮೂರ್ತಿಯ ಬಗ್ಗೆ ವರದಿ ನೀಡಲಾಗಿತ್ತು. 10-06-06 ಹಾಗೂ 20-06-16 ರಲ್ಲಿ ಸದ್ರಿ ಆಡಿಟ್ ನಲ್ಲಿ ರವೀಂದ್ರ ಜೋಷಿಯಿಂದ ಹಿಂಪಡೆಯಲು ಆದೇಶ ಸಹ ಮಾಡಲಾಗಿದೆ.

ಈ ಕುರಿತು ರವೀಂದ್ರರವರು ಮೂರ್ತಿಯನ್ನು ಹಿಂತಿರುಗಿಸಲು ಬದ್ದನಾಗಿರುತ್ತೇನೆ ಎಂದೂ ಲಿಖಿತ ಪತ್ರ ಬರೆದು ಕೊಟ್ಟಿದ್ದರು.
ಆದರೆ ಈ ವಿಷಯದಲ್ಲಿ ಆತ ಬತೆದುಕೊಟ್ಟ ದಾಖಲೆಯಲ್ಲಿ ಪಂಚಲೋಹದ ಮೂರ್ತಿ ಎನ್ನುವ ಬದಲು ಹಿತ್ತಾಳೆಯ ಅನುಪಯುಕ್ತ ಮೂರ್ತಿ ಎಂದು ನಮೂದಿಸಿದ್ದಾರೆ. ಅಲ್ಲದೆ ಅದನ್ನು ಬದಲಾಯಿಸುವ ಕುರಿತು ಎಂದು ನಮೂದಿಸಲಾಗಿದೆ.
ಈ ಪಂಚಲೋಹದ ಮೂರ್ತಿ ಕೋಟಿಗಟ್ಟಲೆ ಬೆಲೆಬಾಳುವ ಮೂರ್ತಿಯಾಗಿದ್ದು ಸದ್ರಿಯವರು ಮೂಲ ಮೂರ್ತಿಯನ್ನೇ ತಂದು ಪ್ರತಿಷ್ಠಾಪಿಸಬೇಕು, ಅದನ್ನು ಬದಲಾಯಿಸುವ ಅಥವಾ ಬೇರೆ ರೀತಿ ವಿಲೇವಾರಿ ಮಾಡುವ ಅಧೀಕಾರ ಯಾವ ಅಧಿಕಾರಿಗೂ ಕಾನೂನುಬದ್ದವಾಗಿ ಇರುವುದಿಲ್ಲ.
ಇದನ್ನೂ ಓದಿ:-Gokarna|ತಂದೆ ಮಾತು ಮೀರಲಾರದೇ 36 ವರ್ಷದ ಹಿಂದೆ ಮನೆಬಿಟ್ಟು ಹೋದ ವ್ಯಕ್ತಿ – ದೂರು ನೀಡಿದ ಎರಡು ತಿಂಗಳಲ್ಲೇ ಹುಡುಕಿದ ಪೊಲೀಸರು
ವರ್ಷಲೆಕ್ಕ ತಪಾಸಣ ವರದಿಗೆ ಪಾಲನಾ ವರದಿದಾಸ್ತಾನು ಪುಸ್ತಕದಲ್ಲಿ ನಮೂದಿಸಿದಂತೆ ಕೊಟ್ಟವರದಿ ಪಾಲನಾ ವರದಿ ಆಗಲಾರದು.
ಸದ್ರಿ ವಿಗ್ರಹವು ಪಂಚಲೋಹದಾಗಿದ್ದು, ನಾಲ್ಕುಅಡಿಎತ್ತರವಿದೆ, ಅದನ್ನು ಗೋಕರ್ಣ ಸೀಮೆಯ ನಾಡಕರ್ಣಿ ಕುಟುಂಬ ದಾನವಾಗಿ ನೀಡಿದ ಕೊಡುಗೆಯಾಗಿದ್ದು, ಇಂತಹ ಅಮೂಲ್ಯವದ ಮೂರ್ತಿಯನ್ನು ಕಳುವು ಮಾಡಿದ ವ್ಯಕ್ತಿಯ ಮೇಲೆ ತನಿಖೆ ನಡೆಸಿ ಅಪರಾದಿಯ ಮೇಲೆ ಕಾನೂನಿನ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆರೋಗ್ಯಾಧಿಕಾರಿಗೆ ಗಣಪತಿ ರವರು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.