ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Gokarna|ತಂದೆ ಮಾತು ಮೀರಲಾರದೇ 36 ವರ್ಷದ ಹಿಂದೆ ಮನೆಬಿಟ್ಟು ಹೋದ ವ್ಯಕ್ತಿ - ದೂರು ನೀಡಿದ ಎರಡು ತಿಂಗಳಲ್ಲೇ ಹುಡುಕಿದ ಪೊಲೀಸರು

GOKARNA NEWS 12 NOVEMBER 2024 :- ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ 36 ವರ್ಷದ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯನ್ನು ದೂರು ನೀಡಿದ ಎರಡು ತಿಂಗಳಲ್ಲೇ ಗೋಕರ್ಣದ PSI ಖಾದರ್ ರವರ ತಂಡ ಪತ್ತೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
10:04 PM Nov 12, 2024 IST | ಶುಭಸಾಗರ್

GOKARNA NEWS 12 NOVEMBER 2024 :- ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ 36 ವರ್ಷದ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯನ್ನು ದೂರು ನೀಡಿದ ಎರಡು ತಿಂಗಳಲ್ಲೇ ಗೋಕರ್ಣದ PSI ಖಾದರ್ ರವರ ತಂಡ ಪತ್ತೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಏನಿದು ಘಟನೆ? ಮನೆಬಿಟ್ಟು ಹೋಗಿದ್ದೇಕೆ ? ದೂರು ನೀಡಿದ್ದೇಕೆ?

1986 ರಲ್ಲಿ ಸುಬ್ರಹ್ಮಣ್ಯ ರಾಮಕೃಷ್ಣ ಮೈಯರ್ ರವರಿಗೆ ಗೋಕರ್ಣದಲ್ಲಿ ಇವರ ತಂದೆ ವಿವಾಹ ನಿಶ್ಚಯಿಸಿದ್ದರು. ಆದರೇ ಇವರಿಗೆ ವಿವಾಹ ಆಗಲು ಇಷ್ಟವಿರಲಿಲ್ಲ ಜೊತೆಗೆ ತಂದೆಯ ಮಾತು ಮೀರಿ ತನಗೆ ಇಷ್ಟವಿಲ್ಲ ಎಂದು ಹೇಳಲಾಗದೇ ಮನೆ ಬಿಟ್ಟು ಹೋದ ಇವರು ಮುಂಬೈ ಸೇರಿಕೊಂಡಿದ್ದರು.

ಇದನ್ನೂ ಓದಿ:-Gokarna :ಖಿನ್ನತೆಯಲ್ಲಿ ಬಳಲುತಿದ್ದ ಮಾನಸಿಕ ವ್ಯಕ್ತಿಗೆ ಹೊಸ ಬೆಳಕು ಮೂಡಿಸಿದ್ದ ನಿರ್ದೇಶಕ ಗುರುಪ್ರಸಾದ್ !

ಮುಂಬೈ ನಲ್ಲಿ ವಜ್ರೇಶ್ವರಿ ದೇವಸ್ಥಾನದಲ್ಲಿ ಅರ್ಚಕ ವೃತ್ತಿ ಮಾಡಿಕೊಂಡು ಜ್ಯೋತಿಷ್ಯ ಹೇಳಿಕೊಂಡಿದ್ದ ಇವರು ಕುಟುಂಬ ಸಂಪರ್ಕದಿಂದ ದೂರವಾಗಿ 36 ವರ್ಷಗಳಾಗಿತ್ತು.

Advertisement

ಗೋಕರ್ಣದಲ್ಲಿ ಇವರ ಸಹೋದರಿ ಹಾಗೂ ಸಹೋದರ ರಿದ್ದು ಅಲ್ಪ ಆಸ್ತಿ ಸಹ ಇತ್ತು. ಆದರೇ ಈ ಕುಟುಂಬ ಆಸ್ತಿ ಪಾಲು ಮಾಡಿಕೊಳ್ಳಲು ಮನೆಬಿಟ್ಟು ಹೋಗಿದ್ದ ಸಹೋದರ ಸಹ ಅವಷ್ಯವಿತ್ತು. ಹೀಗಾಗಿ 36 ವರ್ಷದ ನಂತರ ಸುಬ್ರಹ್ಮಣ್ಯ ರವರಿಗಾಗಿ ಗೋಕರ್ಣ ಠಾಣೆಯಲ್ಲಿ ಇವರ ಸಹೋದರಿ ಜಯಲಕ್ಷ್ಮಿ ರವರು ತಮ್ಮ ಸಹೋದರ ಕಾಣೆಯಾಗಿರುವ ಕುರಿತು ದೂರು ನೀಡಿದರು.

ಇದನ್ನೂ ಓದಿ:-Gokarna|ತಂಗಿಯನ್ನು ಬೀದಿಯಲ್ಲಿ ಬಿಟ್ಟುಹೋದ ಅಣ್ಣ| ಅಣ್ಣನನ್ನು ಹುಡುಕಿ ತಂಗಿ ಒಪ್ಪಿಸಿದ PSI ಖಾದರ್

ಈ ದೂರು ಆಧರಿಸಿ ಗೋಕರ್ಣ ಠಾಣೆ PSI ಖಾದರ್ ರವರ ತಂಡ ತನಿಖೆ ಕೈಗೊಂಡಾಗ ಇವರು ಮುಂಬೈ ನ ಬಾಂದಾರ್ ನಲ್ಲಿ ಜ್ಯೋತಿಷ್ಯ ಹೇಳಿಕೊಂಡು ವೈದಿಕ ವೃತ್ತಿ ಮಾಡಿಕೊಂಡಿದ್ದುದನ್ನು ಪತ್ತೆ ಹಚ್ಚಿದರು.

ನಂತರ ಇವರನ್ನು ಸಂಪರ್ಕ ಮಾಡಿ ಕುಟುಂಬಕ್ಕೂ ಮಾಹಿತಿ ನೀಡಿದರು. ಆದರೇ ತಾವು ಗೋಕರ್ಣ ಕ್ಕೆ ಬರದೊಪ್ಪದ ಇವರು ತಾವು ಜೀವಂತವಾಗಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು ಕೊನೆಗೂ 36 ವರ್ಷದ ನಂತರ ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ರವರನ್ನು ಪತ್ತೆ ಮಾಡುವ ಮೂಲಕ ಪ್ರಕರಣವನ್ನು ತಾರ್ಕಿಕ ಅಂತ್ಯಗೊಳಿಸಿದರು.

Advertisement
Tags :
GokarnahomeKumtamissing complaintpolice searchedUttra kannda
Advertisement
Next Article
Advertisement