Gokarna|ಗೋಕರ್ಣ ಗುಹೆಯಲ್ಲಿದ್ದ ರಷ್ಯಾ ಮಹಿಳೆ ಮರಳಿ ತಾಯ್ನಾಡಿಗೆ
Gokarna|ಗೋಕರ್ಣ ಗುಹೆಯಲ್ಲಿದ್ದ ರಷ್ಯಾ ಮಹಿಳೆ ಮರಳಿ ತಾಯ್ನಾಡಿಗೆ
ಕಾರವಾರ :-ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ(gokarna) ರಾಮತೀರ್ಥ ಅರಣ್ಯದ ಗುಹೆಯಲ್ಲಿ ವಿಸಾ ಅವಧಿ ಮುಗಿದು ಮಕ್ಕಳೊಂದಿಗೆ ವಾಸವಿದ್ದ ರಷ್ಯಾದ ನೀನಾ ಕುಟೀನಾ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಕೊನೆಗೂ ರಷ್ಯಾಗೆ ಕಳುಹಿಸುವಲ್ಲಿ ಗೋಕರ್ಣ ಪೊಲೀಸರು ಯಶಸ್ವಿ ಕಂಡಿದ್ದಾರೆ.
Gokarna|ಗೋಕರ್ಣ ಕಡಲ ಅಲೆಯಲ್ಲಿ ನೀಲಿ ಬೆಳಕಿನ ವಿಸ್ಮಯ-ಕಡಲಿನಲ್ಲಿ ರಾತ್ರಿ ಸೂಸಿದ ನೀಲಿ ಬೆಳಕು
ಜುಲೈ 10 ರಂದು ಗೋಕರ್ಣದ ಪೊಲೀಸರು ಬೀಟ್ ನಲ್ಲಿ ತಪಾಸಣೆಗೆ ತೆರಳಿದ್ದಾಗ ರಾಮತೀರ್ಥ ಅರಣ್ಯದಲ್ಲಿ ನ ಗುಹೆಯಲ್ಲಿ ರಷ್ಯಾ ಮಹಿಳೆ ( Russia women) ತನ್ನ ಮಕ್ಕಳಾದ ಪ್ರೆಯಾ (06) ಹಾಗೂ ಅಮಾ (4) ಮಳೆಯಲ್ಲಿಯೇ ಗುಹೆಯಲ್ಲಿ ವಾಸವಿದ್ದರು.
ಇವರನ್ನು ಗೋಕರ್ಣ ಸಿಪಿಐ ಶ್ರೀಧರ್ ನೇತ್ರತ್ವದ ತಂಡ ರಕ್ಷಣೆ ಮಾಡಿತ್ತು.ಈ ಕುರಿತು ವಿಸೃತ ವರದಿ ಬಿತ್ತರವಾಗುತಿದ್ದಂತೆ ಈಕೆಯ ಪತಿ ರಷ್ಯಾ ನಿವಾಸಿ ಡೋರ್‌ಶ್ಲೋಮೋ ಗೋಲ್ಡ್‌ಸ್ಟೈನ್ ಬೆಂಗಳೂರು ಹೈಕೋರ್ಟ ನಲ್ಲಿ ರಷ್ಯಾಗೆ ಕಳಿಹಿಸುವಂತೆ ಅರ್ಜಿ ಸಲ್ಲಿಸಿದ್ದರು.
Gokarna|ತಂಗಿಯನ್ನು ಬೀದಿಯಲ್ಲಿ ಬಿಟ್ಟುಹೋದ ಅಣ್ಣ| ಅಣ್ಣನನ್ನು ಹುಡುಕಿ ತಂಗಿ ಒಪ್ಪಿಸಿದ PSI ಖಾದರ್
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರ ಪೀಠ ತನಿಖೆ ನಡೆಸಿ ರಷ್ಯಾಗೆ ಕಳುಹಿಸಲು ಸೂಚಿಸಿತ್ತು.ಇನ್ನು ಗೋಕರ್ಣ ಪೊಲೀಸರು ಈಕೆಯ ಮಕ್ಕಳ ಡಿ.ಎನ್.ಎ ಪರೀಕ್ಷೆ ನಡೆಸಿ ಈಕೆಯದ್ದೇ ಮಕ್ಕಳು ಎಂದು ದೃಡಪಡಿಸಿಕೊಂಡಿದ್ದು ,ಇದೀಗ ಗೋಕರ್ಣ ಪೊಲೀಸರು ಆಕೆಯ ಕುಟುಂಬವನ್ನು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ರಷ್ಯಾಗೆ ಕಳುಹಿಸಿದ್ದು ಈ ಕುಟುಂಬ ಇಂದು ರಷ್ಯಾಗೆ ತೆರಳಿದೆ.