Gokarna|ಲೈಪ್ ಗಾರ್ಡ ಮಾತು ಕೇಳದ ವಿದ್ಯಾರ್ಥಿಗಳು | ಸಮುದ್ರಪಾಲಾಗುತಿದ್ದವರ ರಕ್ಷಣೆ
Gokarna|ಲೈಪ್ ಗಾರ್ಡ ಮಾತು ಕೇಳದ ವಿದ್ಯಾರ್ಥಿಗಳು | ಸಮುದ್ರಪಾಲಾಗುತಿದ್ದವರ ರಕ್ಷಣೆ.
ವಿಡಿಯೋ ನೋಡಿ:-
ಕಾರವಾರ :-ಲೈಫ್ ಗಾರ್ಡಗಳ ಎಚ್ಚರಿಕೆ ನೀಡಿದರೂ ಮಾತು ಕೇಳದೇ ಸಮುದ್ರಕ್ಕಿಳಿದು ಅಲೆಗಳ ಸೆಳೆತಕ್ಕೆ ಸಮುದ್ರಪಾಲಾಗುತಿದ್ದ ಮೂರು ಜನ ಶಾಲೆ ವಿದ್ಯಾರ್ಥಿಗಳು,ಓರ್ವ ಶಿಕ್ಷಕನನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ(gokarna) ಮುಖ್ಯ ಕಡಲ ತೀರದಲ್ಲಿ ಲೈಪ್ ಗಾರ್ಡಗಳು ರಕ್ಷಣೆ ಮಾಡಿದ ಘಟನೆ ಶನಿವಾರ ನಡೆದಿದೆ.
ಶಿವಮೊಗ್ಗ (shivamogga) ನಗರದ ಸರ್ಕಾರಿ ಹಿರಿಯ ಪ್ರೌಢ ಶಾಲೆಯ ನಿಯಾಜ್ ಅಹ್ಮದ್ (15), ಮೊಹ್ಮದ್ ಜಿಲಾಲ್ (15) ,ಆಕಾಶ್ 15) ಮತ್ತು ಶಾಲೆಯ ಶಿಕ್ಷನ ರಕ್ಷಣೆಗೊಳಗಾದವರಾಗಿದ್ದಾರೆ. ಶಿವಮೊಗ್ಗ ದಿಂದ 39 ವಿದ್ಯಾರ್ಥಿಗಳು ಶಿಕ್ಷಕರ ಜೊತೆ ಶಾಲೆಯ ಪ್ರವಾಸಕ್ಕೆ ಬಂದಿದ್ದರು.ಸಮುದ್ರದ ಅಲೆ ಹೆಚ್ಚಾಗಿದ್ದು ಸೆಳೆತ ಹೆಚ್ಚಿದ್ದರಿಂದ ಸಮುದ್ರಕ್ಕೆ ಇಳಿಯದಂತೆ ಲೈಫ್ ಗಾರ್ಡ ಗಳು ಎಚ್ಚರಿಕೆ ನೀಡಿದರೂ ಶಿಕ್ಷಕರ ಸಮೇತ ವಿದ್ಯಾರ್ಥಿಗಳು ಸಮುದ್ರಕ್ಕಿಳಿದಿದ್ದರು.
ಅಲೆಗಳ ಸೆಳೆತಕ್ಕೆ ಸಿಲುಕಿದ್ದ ವಿದ್ಯಾರ್ಥಿಗಳುಹಾಗೂ ಶಿಕ್ಷಕನ್ನು ಗಮನಿಸಿದ ಜೀವ ರಕ್ಷಕ ಸಿಬ್ಬಂದಿಗಳಾದ ಮೋಹನ್ ಅಂಬಿಗ,ರೋಷನ್ ಕಾರ್ವಿ, ದರ್ಶನ್ ಹರಿಕಾಂತ್,ಚಿದಾನಂದ ಲಕ್ಕುಮನೆ,ದೀಪಕ್ ಗೌಡ, ಅಶೋಕ್ ಹರಿಕಾಂತ್ ಮಹೇಶ್ ಹರಿಕಾಂತ್ರ ,ಜಗ್ಗು ಹರಿಕಾಂತ್ರ ,ಕಮಲಾಕರ ಹೊಸ್ಕಟ್ಟ ರವರು ರಕ್ಷಣೆ ಮಾಡಿದ್ದಾರೆ ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ವೀಕೆಂಡ್ ನಲ್ಲಿ ಹೆಚ್ಚು ಪ್ರವಾಸಿಗರು ಬರುತಿದ್ದು ಎಚ್ಚರಿಕೆ ನೀಡಿದರೂ ಪ್ರವಾಸಿಗರು ಸಮುದ್ರಕ್ಕಿಳಿದು ಅವಘಡ ನಡೆಯುತ್ತಿದೆ.