HESCOM Power Cut|ಸರ್ಕಾರಿ ಕಚೇರಿಯ ವಿದ್ಯುತ್ ಬಿಲ್ ಕಟ್ಟಲು ಹಣವಿಲ್ಲ| ಹೆಸ್ಕಾಂ ನಿಂದ ಸರ್ಕಾರಿ ಕಚೇರಿಗಳಿಗೆ ಪವರ್ ಕಟ್ ಶಾಕ್.
HESCOM Power Cut|ಸರ್ಕಾರಿ ಕಚೇರಿಯ ವಿದ್ಯುತ್ ಬಿಲ್ ಕಟ್ಟಲು ಹಣವಿಲ್ಲ| ಹೆಸ್ಕಾಂ ನಿಂದ ಸರ್ಕಾರಿ ಕಚೇರಿಗಳಿಗೆ ಪವರ್ ಕಟ್ ಶಾಕ್
ಕಾರವಾರ (31 ಅಕ್ಟೋಬರ್ 2025):- ರಾಜ್ಯ ಸರ್ಕಾರ ಗ್ಯಾರಂಟಿ (ಗ್ಯಾರಂಟಿ ಯೋಜನೆ )ಯೋಜನೆಯ ಮೂಲಕ ಜನರಿಗೆ ಉಚಿತ ಸವಲತ್ತು ನೀಡುತ್ತಿದೆ. ಆದರೇ ಸರ್ಕಾರಿ ಕಚೇರಿಗಳ ವಿದ್ಯುತ್ ಬಿಲ್ ಸಹ ಪಾವತಿ ಮಾಡಲಾಗದಷ್ಟು ಗತಿಗೆಟ್ಟು ಹೋಯಿತಾ ಎಂಬ ಪ್ರಶ್ನೆ ಮೂಡಿದ್ದು ಹೆಸ್ಕಾಂ (ಹೆಸ್ಕಾಂ)ವಿಭಾಗದ ಏಳು ಜಿಲ್ಲೆಗಳಲ್ಲಿ ಹದಿಮೂರು ಕೋಟಿ ಹದಿನೈದು ಲಕ್ಷ ಸರ್ಕಾರಿ ಕಚೇರಿಗಳು (ಸರ್ಕಾರಿ ಕಚೇರಿ) ಬಿಲ್ ಬಾಕಿ ಉಳಿಸಿಕೊಂಡಿದ್ದು ಇದೀಗ ಹೆಸ್ಕಾಂ ಇಲಾಖೆ ಹಣ ತುಂಬದ ಸರ್ಕಾರಿ ಕಚೇರಿಗಳ ವಿದ್ಯುತ್ ಕಡಿತದ ಶಾಕ್ ನೀಡಿದೆ.
ಕರ್ನಾಟಕ| ನವೆಂಬರ್ 28ಕ್ಕೆ ಕರಾವಳಿಗೆ ಪ್ರಧಾನಿ ಮೋದಿ| ಯಾವ ಕ್ಷೇತ್ರಗಳ ಭೇಟಿ ವಿವರ ಇಲ್ಲಿದೆ.
ಹೌದು ಗುರುವಾರ ಕಾರವಾರದಲ್ಲಿ ಹಲವು ಸರ್ಕಾರಿ ಕಚೇರಿಗೆ ಕತ್ತಲ ದಿನವಾಗಿತ್ತು. ಕಚೇರಿಯಲ್ಲಿ ಏಸಿ ಕೆಳಗೆ ,ಫ್ಯಾನ್ ಕೆಳಗೆ ಕುಳಿತು ಜೋಗಲಾಡಿತನ ಮಾಡುತಿದ್ದ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹೆಸ್ಕಾಂ ಇಲಾಖೆ ಶಾಕ್ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾಧಿಕಾರಿ ಕಟ್ಟಡದಲ್ಲಿ ಇರುವ ಎಸ್ಸಿ ಕಚೇರಿ ಹಾಗೂ ತಹಶಿಲ್ದಾರ್, ನೊಂದಣಾಧಿಕಾರಿ ಕಚೇರಿ ಹೀಗೆ ಕಾರವಾರದಲ್ಲಿ ಇದ್ದ 15 ಹೆಚ್ಚು ಕಚೇರಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿತ್ತು.
ಹೆಸ್ಕಾಂಗೆ ದೀರ್ಘಕಾಲದವರೆಗೆ ವಿದ್ಯುತ್ ಬಿಲ್ ಪಾವತಿಸದೇ ಕಳೆದ ಒಂದು ಹೆಸ್ಕಾಂ ನೀಡಿದ ನೋಟಿಸ್ ಗೂ ಉತ್ತರ ನೀಡಲಾಯಿತು ಅಧಿಕಾರಿಗಳ ವರ್ತನೆಯಿಂದಾಗಿ, ಜನರಿಗೆ 200 ಯುನಿಟ್ ಫ್ರೀಯಾಗಿ ನೀಡಿ ಆರ್ಥಿಕ ಕೊರತೆ ಅನುಭವಿಸುತ್ತಿರುವ ಹೆಸ್ಕಾಂ ಇಲಾಖೆ ಹಣ ವಸೂಲಿಗಾಗಿ ಇದೀಗ ಸರ್ಕಾರಿ ಕಚೇರಿಯ ವಿದ್ಯುತ್ ಕಡಿತ ಮಾಡಿದೆ.
ಕಾರವಾರ ಭಾಗದ 15 ಸರ್ಕಾರಿ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದು ಆ ದಿನ ನಿತ್ಯ ನಡೆಯಬೇಕಾದ ಕಾರ್ಯಗಳು ಅಡ್ಡಿಯಾಗುವಂತೆ ಆಗಿದ್ದು ಸಾರ್ವಜನಿಕರಿಗೆ ಆಗಬೇಕಾದ ಕಾರ್ಯಗಳು ಆಗದೇ ಶಾಪ ಹಾಕುವಂತಾಯಿತು.
ಕರ್ನಾಟಕ | ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನದ ದ್ರೋಣಾಚಾರ್ಯ ಕೆ.ಪಿ ಹೆಗಡೆಗೆ ರಾಜ್ಯೋತ್ಸವ ಪ್ರಶಸ್ತಿ
ಹೆಸ್ಕಾಂ ವ್ಯಾಪ್ತಿಗೆ ರಾಜ್ಯದ ಉತ್ತರ ಕನ್ನಡಹಾ,ವೇರಿ,ಬೆಳಗಾವಿ,ಗದಗ,ಬಿಜಾಪುರ,ಬಾಗಲಕೋಟೆ ,ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳು ಸೇರುತ್ತವೆ. ಕಳೆದ ಎಂಟು ತಿಂಗಳಿನಿಂದ ರಾಜ್ಯ ಸರ್ಕಾರ ಸಾಮ್ಯದ ಜಿಲ್ಲಾ,ತಾಲೂಕು ಕಚೇರಿಗಳು ಒಟ್ಟು ಹದಿಮೂರು ಕೋಟಿ ಹದಿನೈದು ಲಕ್ಷ ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನಲ್ಲಿ ಎರಡು ಕೋಟಿ ಹದಿನೆಂಟು ಲಕ್ಷದ ಇಪ್ಪತ್ತೈದು ಸಾವಿರದ ಇನ್ನೂರ ನಲವತ್ತಮೂರು ರುಪಾಯಿಗಳು ಬಾಕಿ ಇವೆ.
ಇವುಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 6037980, ಗ್ರಾಮೀಣಾಭಿವೃದ್ಧಿ ಇಲಾಖೆ( ಬೀದಿ ದೀಪ, ಕುಡಿಯುವ ನೀರು, ಕಚೇರಿ ಸೇರಿ)- 4.89 ಕೋಟಿ ರೂ. 
ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಇಲಾಖೆ -1.57 ಕೋಟಿ ರೂ.ನಗರಾಭಿವೃದ್ಧಿ ಇಲಾಖೆ (ಬೀದಿ ದೀಪ, ಕುಡಿಯುವ ನೀರು, ಕಚೇರಿ ಸೇರಿ) -1.29 ಕೋಟಿ ರೂ.
ಶಿಕ್ಷಣ ಇಲಾಖೆ (ಶಾಲೆಗಳು ಸೇರಿ) -67.78 ಲಕ್ಷ ರೂ. 
ಕರ್ನಾಟಕ ನೀರಾವರಿ ನಿಗಮ -60.93 ಲಕ್ಷ ರೂ. 
ಆರೋಗ್ಯ ಇಲಾಖೆ (ಆಸ್ಪತ್ರೆಗಳು ಸೇರಿ) -48.87 ಲಕ್ಷ ರೂ. 
ಅರಣ್ಯ ಇಲಾಖೆ -31.47 ಲಕ್ಷ ರೂ. 
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (ಅಂಗನವಾಡಿಗಳು ಸೇರಿ) -16.85 ಲಕ್ಷ ರೂ.ಇತರೆ ಇಲಾಖೆ (ಮುಜರಾಯಿ ಸೇರಿ) -15.05 ಲಕ್ಷ ರೂ.
ಗೃಹ ಇಲಾಖೆ -13.21 ಲಕ್ಷ ಬಾಕಿ ಉಳಿಸಿಕೊಂಡಿದ್ದು ,ಹೆಸ್ಕಾಂ ನಷ್ಟವಾಗುವ ಸಂಭಾವನೆ ಇದೀಗ ಈ ಹಣ ವಸೂಲಿಗಾಗಿ ಈ ಕಚೇರಿಗಳ ವಿದ್ಯುತ್ ನಿಲುಗಡೆ ಮಾಡಿದೆ.
ಈ ಸರ್ಕಾರಿ ಕಚೇರಿಗಳ ವಿದ್ಯುತ್ ಬಿಲ್‌ಗಳನ್ನು ಹಲವು ಇಲಾಖೆಗಳು ಕಳೆದ ಒಂದು ವರ್ಷದಿಂದ ಪಾವತಿಸಿಲ್ಲ.ನೋಟಿಸ್ ನೀಡಿದರೂ ಉತ್ತರ ನೀಡಿಲ್ಲ. ವಿದ್ಯುತ್ ಕೊರತೆ ಇದ್ದು ,ಜನರಿಗೆ ವಿದ್ಯುತ್ ನೀಡಲು ವಿದ್ಯುತ್ ಖರೀದಿ ಮಾಡಬೇಕು. ಇದಕ್ಕೆ ಹಣದ ಅವಶ್ಯಕತೆ ಇದೆ. ಹೀಗಾಗಿ ಈ ಅಭಿಯಾನ ಪ್ರಾರಂಭವಾಯಿತು ಎಂದು ಕಾರವಾರ-ಅಂಕೋಲ ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ರೂಷನಿ ಪೆಡ್ನೇಕರ್ ಮಾಹಿತಿ ನೀಡಿದ್ದಾರೆ.
Karnataka| ಮುಖ್ಯಮಂತ್ರಿ ಬದಲಾವಣೆ- ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ !
ಸದ್ಯ ಹಣ ಕಟ್ಟಸ ಇಲಾಖೆಗಳಲ್ಲಿ ಕೆಲವು ಖಜಾನೆಯಲ್ಲಿ ಹಣ ಇಲ್ಲ ಅಂದ್ರೆ ಇನ್ನು ಕೆಲವು ಇಲಾಖೆಗಳು ಇದೀಗ ಹಣ ಕಟ್ಟಲು ಮುಂದಾಗಿದ್ದಾರೆ.
ಹೊಟ್ಟೆಗೆ ಹಿಟ್ಟಿಲ್ಲಾ ಎಂದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತೆ ರಾಜ್ಯ ಸರ್ಕಾರ ತಮ್ಮ ಸರ್ಕಾರಿ ಕಚೇರಿಯ ವಿದ್ಯುತ್ ಬಿಲ್ ಸಹ ಪಡೆದಾಗದಂತ ದುಸ್ತಿಗೆ ಬಂದಿದ್ದು ಹೆಸ್ಕಾಂ ಇಲಾಖೆ ಇದೀಗ ತಮ್ಮ ಹಣ ಬಡ್ಡಿ ಸಮೇತ ವಸೂಲಿಗಾಗಿ ವಿದ್ಯುತ್ ನಿಲುಗಡೆ ಮಾಡಿ ಕಚೇರಿಗಳಿಗೆ ಶಾಕ್ ನೀಡಿದೆ.
 
 
            