Uttara kannada|600 ಕಿಲೋಮೀಟರ್ ಅಲೆದರೂ ಸಿಗದ ತುರ್ತು ಚಿಕಿತ್ಸೆ ! ಬದುಕಿಸುವ ಆಸೆ ಹೊತ್ತು ಹೋದ ಬಡ ಕುಟುಂಬಕ್ಕೆ ಸಾಲಮಾಡಿ ಅಂಬುಲೆನ್ಸ್ ಡೀಸೆಲ್ ಖರ್ಚು ಬರಿಸುವ ಶಿಕ್ಷೆ!
Uttara kannada|600 ಕಿಲೋಮೀಟರ್ ಅಲೆದರೂ ಸಿಗದ ತುರ್ತು ಚಿಕಿತ್ಸೆ ! ಬದುಕಿಸುವ ಆಸೆ ಹೊತ್ತು ಹೋದ ಬಡ ಕುಟುಂಬಕ್ಕೆ ಸಾಲಮಾಡಿ ಅಂಬುಲೆನ್ಸ್ ಡೀಸೆಲ್ ಖರ್ಚು ಬರಿಸುವ ಶಿಕ್ಷೆ!
ಕಾರವಾರ (30 october 2025):- ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎಂಬ ಹೋರಾಟದ ಕಿಚ್ಚು ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಗೆಯೇ ಇದೆ. ಇತ್ತೀಚೆಗಷ್ಟೇ ಸೂಪರ್ ಸ್ಪೆಷಲಿಟಿ ಆಸ್ಪತ್ರೆಗೆ ರಾಜ್ಯ ಸರ್ಕಾರ ಮಂಜೂರು ಮಾಡದಿದ್ದರೇ ಇನ್ನು ಮೂರು ತಿಂಗಳೊಳಗೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿಯನ್ನು ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.
ಆದರೇ ಉತ್ತಮ ಸೌಕರ್ಯದ ಆಸ್ಪತ್ರೆಗಾಗಿ ಕನವರಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಚಿಕಿತ್ಸೆಗಾಗಿ 600 ಕಿಲೋಮೀಟರ್ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗಿದರೂ ,ನೋವು ತೋಡಿಕೊಂಡು ಗೋಳಾಡುದರೂ ಚಿಕಿತ್ಸೆಯೇ ಸಿಗದೆ ಬಡ ವ್ಯಕ್ತಿಯೊಬ್ಬನ ಜೀವ ಬಲಿಯಾಗಿದೆ.
Karwar|ಉಚಿತ ತಪಾಸಣೆ ನೆಪದಲ್ಲಿ ದಂಪತಿವಳಿಗೆ 40 ಸಾವಿರ ವಂಚನೆ
ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಅಂಕೋಲಾ ತಾಲೂಕಿನ ಬೋಳೆ ಗ್ರಾಮದ ಕೂಲಿ ಕಾರ್ಮಿಕ ಚಂದ್ರಹಾಸ ಆಗೇರ (50) ಅವರು ಸೂಕ್ತ ಚಿಕಿತ್ಸೆಗಾಗಿ 12 ತಾಸು ಜೀವ ಕೈಯಲ್ಲಿ ಹಿಡಿದು, ಐದು ಆಸ್ಪತ್ರೆಗಳ ಬಾಗಿಲು ಬಡಿದು, 600 ಕಿ.ಮೀ. ಅಲೆದರೂ ಚಿಕಿತ್ಸೆ ಸಿಗದೆ ಅಸುನೀಗಿದ ಕರುಣಾಜನಕ ಘಟನೆ ಇದು. ಚಿಕಿತ್ಸೆಗಾಗಿ ಆ್ಯಂಬುಲೆನ್ಸ್‌ನಲ್ಲಿ ಅರ್ಧ ದಿನ ಅಲೆದಾಡಿ ಕೊನೆಗೆ ಆ್ಯಂಬುಲೆನ್ಸ್‌ನಲ್ಲಿಯೇ ಶವವಾದರು.


ಚಂದ್ರಹಾಸ ಆಗೇರ ಅವರದ್ದು ಬಡ ಕುಟುಂಬ. ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಚಂದ್ರಹಾಸ ರವರು ಅ.27ರಂದು ಕೂಲಿ ಕೆಲಸ ಮುಗಿಸಿ ಮಧ್ಯಾಹ್ನ 2.15ರ ವೇಳೆಗೆ ಕಾಲ್ನಡಿಗೆಯಲ್ಲಿ ಮನೆಗೆ ಹೊರಟಿದ್ದರು. ಈ ವೇಳೆ ಅಂಕೋಲಾ ಸಮೀಪದ ಶೆಟಗೇರಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಿಂಭಾಗದಿಂದ ಬಂದ ಕಾರು ಗುದ್ದಿ ಪರಾರಿಯಾಯಿತು. ಚಂದ್ರಹಾಸ ಗಂಭೀರವಾಗಿ ಗಾಯಗೊಂಡರು.
Karwar Hospital | ಕುಸಿದ ಜಿಲ್ಲಾಸ್ಪತ್ರೆ ಹೊಸ ಕಟ್ಟಡದ ರೂಪಿಂಗ್ ಷೀಟ್!
ತಕ್ಷಣ ಕುಟುಂಬಸ್ಥರು 108 ಆರೋಗ್ಯ ಕವಚ ವಾಹನಕ್ಕೆ ಕರೆ ಮಾಡಿದರು. ಆದರೇ ಸಮಯಕ್ಕೆ ಸರಿಯಾಗಿ ವಾಹನ ಬರಲೇ ಇಲ್ಲ.ಕೊನೆಗೆ ಪರಿಚಿತರ ಆಟೋ ಮೂಲಕ ಅಂಕೋಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ತಲೆಗೆ ಹಾಗೂ ಕಾಲಿಗೆ ತೀವ್ರ ಪೆಟ್ಟಾದ್ದರಿಂದ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಯಿತು.ಅಂಕೋಲದಿಂದ 35 ಕಿ.ಮೀ ದೂರದ ಕ್ರಿಮ್ಸ್ ಗೆ ಅಂಬುಲೆನ್ಸ್ ಮೂಲಕ ಕರೆದೊಯ್ಯಲಾಯಿತು.ನಾಲ್ಕು ತಾಸು ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಲಾಯಿತು.ಆಗ ಅಂಬುಲೆನ್ಸ್ ಮೂಲಕ 250 ಕಿಲೋ ಮೀಟರ್ ಕ್ರಮಿಸು ಮಧ್ಯರಾತ್ರಿ 1 ಗಂಟೆಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ತಲುಪಿದರು.ಆದ್ರೆ ಆಸ್ಪತ್ರೆ ಆಡಳಿತ ಬೆಡ್ ಇಲ್ಲಾ ಎಂದು ದಾಖಲು ಮಾಡಿಕೊಳ್ಳದೇ ಕಳುಹಿಸಿತು.
ಇನ್ನು ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೇ ಆಯುಷ್ಮಾನ್ ಶಿಫಾರಸ್ಸು ಪತ್ರವನ್ನು ತಿರಸ್ಕರಿಸಿದ ಅವರು ಎರಡು ದಿನ ದ ಹಾಸಿಗೆ ವೆಚ್ಚ ಸೇರಿ 30 ಸಾವಿರ ಕಟ್ಟಿದರೆ ದಾಖಲಿಸಿಕೊಳ್ಳುವುದಾಗಿ ಹೇಳಿದರು.ತಕ್ಷಣದಲ್ಲಿ ಹಣ ಕಟ್ಟಲಾಗದೇ ಮತ್ತೊಂದು ಖಾಸಗಿ ಆಸ್ಪತ್ರೆಗೆ ಹೋದರೂ ಅಲ್ಲಿಯೂ ಸೇರಿಸಿಕೊಳ್ಳಲಿಲ್ಲ, ನಮ್ಮ ಬಳಿ ಈ ತಡರಾತ್ರಿಯಲ್ಲಿ 2500 ಮಾತ್ರ ಇದೆ ಈಗ ಇದನ್ನ ಕಟ್ಟಿಸಿಕೊಳ್ಳಿ ಎಂದರೂ ನಂತರ ಕೊಡುವುದಾಗಿ ಹೇಳಿದರೂ ಅವರ ಮನಸ್ಸು ಕರಗಲಿಲ್ಲ. ಬಡವರಾಗಿರುವ ಅವರಿಗೆ ತಕ್ಷಣ ಹಣ ಹೊಂದಿಸುವುದು ಸಹ ಕಷ್ಟವಾಗಿತ್ತು. ಅನುವಾರ್ಯವಾಗಿ ಮಂಗಳೂರಿನಿಂದ ಕಾರವಾರದ ಕ್ರಿಮ್ಸ್ ಗೆ ಮುಂಜಾನೆ ಕರೆದೊಯ್ಯುವುದರಲ್ಲಿ ಚಂದ್ರಹಾಸರ ಜೀವ ಹೋಗಿತ್ತು.
ಅಂಬುಲೆನ್ಸ್ ಗೆ ಪಿಂಚಣಿ ಹಣ!

ಇನ್ನು ಕಾರವಾರದಿಂದ ಕ್ರಿಮ್ಸ್ ವೈದ್ಯಕೀಯ ಕಾಲೇಜಿನ ಅಂಬುಲೆನ್ಸ್ ನನ್ನು ಮಂಗಳೂರಿಗೆ ತೆಗೆದುಕೊಂಡು ಹೋಗಿದ್ದರಿಂದ ಅಂಬುಲೆನ್ಸ್ ನ ಡಿಸೆಲ್ ಖರ್ಚು 6500 ಭರಿಸುವ ಅನಿವಾರ್ಯ ಆಯಿತು.
ಚಂದ್ರಹಾಸ ಅವರ ಪತ್ನಿ ಮನೆಕೆಲಸ ಮಾಡುತಿದ್ರೆ,ಚಂದ್ರಹಾಸ ರವರು ಗಾರೆ ಕೆಲಸಕ್ಕೆ ಹೋಗುತಿದ್ದರು.ದುಡಿಯುವ ಹಣ ಮನೆಯ ನಿರ್ವಹಣೆಗೆ ಖರ್ಚಾದರೇ ಉಳಿಸಲು ಎಲ್ಲಿಂದ ತರಬೇಕು! ಡಿಸೆಲ್ ಹಣ ಕಟ್ಟಲು ಹಣ ವಿಲ್ಲದಿದ್ದಾಗ ಪರಿಚಿತ ವಿಶೇಷ ಚೇತನ ವ್ಯಕ್ತಿಯೊಬ್ಬರು ತಮ್ಮ ಪಿಂಚಣಿಯ ಹಣ ನಾಲ್ಕು ಸಾವಿರ ಕೊಟ್ಟರೇ ಸ್ಥಳೀಯ ರಾದ ಪುಷ್ಪಲತಾ ಎಂಬುವವರು ಉಳಿದ ಹಣ ನೀಡಿ ಅಂಬುಲೆನ್ಸ್ ಖರ್ಚನ್ನು ಕೊಟ್ಟರು.
ಹಣವಿದ್ದರೇ ಎಲ್ಲವೂ ಎನ್ನುವಂತಾಗಿದ್ದು ,ಸರ್ಕಾರದ ವೈದ್ಯಕೀಯ ಸವಲತ್ತುಗಳು ಇದ್ದರೂ ಬಡವರಿಗೆ ಮಾತ್ರ ನಿಲುಕದ ನಕ್ಷತ್ರ ಎನ್ನುವಂತಾಗಿದೆ. ಇನ್ನಾದರೂ ಸರ್ಕಾರ ಕುರುಡು ಕಣ್ಣು ತೆರೆದು ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿ ,ಬಡವರ ಕಣ್ಣೀರು ಒರಸಲಿ ,ರಸ್ತೆ ಅಪಘಾತದಲ್ಲಿ ಚಿಕತ್ಸೆ ಸಿಗದೇ ಸಾಯುವವರ ಪ್ರಾಣ ಉಳಿಸಲಿ ಎಂಬುದು ನಮ್ಮ ಆಶಯ.
