Gruha lakshmi Yojana:ಗೃಹಲಕ್ಷ್ಮಿ ಬೇಡ ಎಂದು ಬರೆದುಕೊಟ್ರು ಉತ್ತರ ಕನ್ನಡ ಜಿಲ್ಲೆಯ ಮಹಿಳೆಯರು !
Gruha lakshmi Yojana:ಗೃಹಲಕ್ಷ್ಮಿ ಬೇಡ ಎಂದು ಬರೆದುಕೊಟ್ರು ಉತ್ತರ ಕನ್ನಡ ಜಿಲ್ಲೆಯ ಮಹಿಳೆಯರು !

ಕಾರವಾರ:- ಗ್ಯಾರಂಟಿ ಕೊಟ್ಟರೇ(gyaranti ) ಸರ್ಕಾರ ಆರ್ಥಿಕ ದಿವಾಳಿ ಆಗುತ್ತದೆ ಎಂದು ಪ್ರಧಾನಿ ಮೋದಿ (modi) ಹೇಳಿದ್ದರು.ಕೊನೆಗೆ ಅವರೇ ಮೋದಿ ಗ್ಯಾರಂಟಿ ಎಂದು ಅಳವಡಿಸುವ ಕೆಲಸ ಮಾಡಿದ್ದಾರೆ ಎಂದು
ಗ್ಯಾರಂಟಿ ಯೋಜನೆ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಂ.ರೇವಣ್ಣ ಟೀಕಿಸಿದ್ದಾರೆ.
ಇದನ್ನೂ ಓದಿ:-Gruha Lakshmi Scheme: ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬಂದಿಲ್ವಾ.? ಹಾಗಿದ್ರೆ ಈ ಕೆಲಸ ಮಾಡಿ
ಕಾರವಾರದ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ಭಾಗವಹಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಐದು ಗ್ಯಾರಂಟಿ ಅನುಷ್ಟಾನಕ್ಕೆ ಯಾವುದೇ ಹಣದ ಕೊರತೆಯಿಲ್ಲ .
ಜಿಲ್ಲೆ ಮತ್ತು ರಾಜ್ಯವಾರು ಪಟ್ಟಿ ಈ ಕೆಳಗಿನಂತಿದೆ:-
ರಾಜ್ಯದಲ್ಲಿ 1.22 ಕೋಟಿ ಗೃಹಲಕ್ಷ್ಮಿ (Gruhalaksmi yojana) ಫಲಾನುಭವಿಗಳಿದ್ದು 35,180 ಕೋಟಿ ಕರ್ಚು ಮಾಡಲಾಗಿದೆ.ಗೃಹ ಜ್ಯೋತಿ ಯೋಜನೆಯಲ್ಲಿ 1.63 ಕೋಟಿ ಫಲಾನುಭವಿಗಳಿದ್ದು 12,589 ಕೋಟಿ ಹಣ ನೀಡಲಾಗಿದೆ.ಅನ್ನಭಾಗ್ಯ ಯೋಜನೆಯಲ್ಲಿ 59.56 ಕೋಟಿ ಫಲಾನುಭವಿಗಳಿದ್ದು 9.775 ಕೋಟಿ ಫಲಾನುಭವಿಗಳಿಗೆ ನೀಡಲಾಗಿದೆ.
ಶಕ್ತಿ ಯೋಜನೆಯಲ್ಲಿ 387 ಕೋಟಿ ಫಲಾನುಭವಿಗಳಿದ್ದು ,9352 ಕೋಟಿ ಕರ್ಚು ಮಾಡಲಾಗಿದೆ.
ಯುವ ನಿಧಿ ಯೋಜನೆಯಲ್ಲಿ 2.37 ಲಕ್ಷ ನೊಂದಣಿಯಾಗಿದ್ದು 252 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದ ಗ್ಯಾರಂಟಿ ಯೋಜನೆ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಂ.ರೇವಣ್ಣ ಹೇಳಿದರು.
ಗ್ಯಾರಂಟಿ ಸ್ಕೀಮ್ ಬೇಡ ಎಂದು ಬರೆದುಕೊಟ್ಟರು!
ರಾಜ್ಯದಲ್ಲಿ ಅತಿ ಹೆಚ್ಚು ಗ್ಯಾರಂಟಿ ಯೋಜನೆ ಅನುಷ್ಠಾನ ಆಗಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ.ಸುಮಾರು 98% ಪಂಚ ಗ್ಯಾರಂಟಿ ಯೋಜನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನ ಆಗಿದೆ. ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಬಹುಮಾನ ನೀಡಲಾಗುವುದು ಎಂದ ಅವರು
ಇದನ್ನೂ ಓದಿ:-ರಾಜ್ಯದ ಜನರಿಗೆ ಗೃಹ ಜ್ಯೋತಿ ನಿಯಮ ಬದಲಾಯಿಸಿದ ಸರ್ಕಾರ? ಏನು ಬದಲಾವಣೆ ವಿವರ ನೋಡಿ.
ಗೃಹ ಲಕ್ಷ್ಮಿ ಹಣ ಬೇಡ ಎಂದು 2500 ಮಹಿಳೆಯರು ಬರೆದು ಕೊಟ್ಟಿದ್ದಾರೆ, 2500 ಮಹಿಳೆರೆಲ್ಲ ಉತ್ತರ ಕನ್ನಡ ಜಿಲ್ಲೆಯವರು ಮಾತ್ರ.
ಗೃಹ ಲಕ್ಷ್ಮಿ ಹಣ ಬೇಡ ಎಂದು ರಾಜ್ಯದಲ್ಲಿ ಕೇವಲ ಉತ್ತರ ಕನ್ನಡ ಜಿಲ್ಲೆಯವರು ಮಾತ್ರ ಬರೆದುಕೊಟ್ಟಿದ್ದಾರೆ.
ರಾಜ್ಯದಲ್ಲಿ ಬಹಳಷ್ಟು ಜನ ಗೃಹ ಲಕ್ಷ್ಮಿ ಹಣ ಬೇಡ ಅಂತಾ ಹೇಳಿದಾರೆ, ಆದ್ರೆ ಬರೆದು ಕೊಟ್ಟಿದ್ದು ಕೇವಲ ಉತ್ತರ ಕನ್ನಡ ಜಿಲ್ಲೆಯ ಮಹಿಳೆಯರು ಮಾತ್ರ ಎಂದು ರಾಜ್ಯ ಗ್ಯಾರಂಟಿ ಆಯೋಗದ ಅಧ್ಯಕ್ಷ ರೇವಣ್ಣ ಹೇಳಿದ್ದಾರೆ.