For the best experience, open
https://m.kannadavani.news
on your mobile browser.
Advertisement

Haliyala ವರದಿಗೆ ಸರ್ಕಾರ ಸ್ಪಂದನೆ- ವಿದ್ಯಾರ್ಥಿನಿ ಸಾವಿಗೆ ಕಾರಣನಾದ ಮುಖ್ಯ ಶಿಕ್ಷಕ ಅಮಾನತು

Haliyala News 29 november 2024:- ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶೈಕ್ಷಣಿಕ ಜಿಲ್ಲೆಯ ಹಳಿಯಾಳ ತಾಲೂಕಿನ ಮುಂಡವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿ ಮೂತ್ರವಿಸರ್ಜನೆಗೆ ಹೋದ ಸಮಯದಲ್ಲಿ ವಿದ್ಯುತ್‌ ತಂತಿ ತಗುಲಿ ತೀವ್ರ ಆಘಾತವಾಗಿ ಮೃತಪಟ್ಟಿರುವ ಘಟನೆ ನವೆಂಬರ್‌ 28 ರಂದು ನಡೆದಿತ್ತು
08:54 PM Nov 29, 2024 IST | ಶುಭಸಾಗರ್
haliyala ವರದಿಗೆ ಸರ್ಕಾರ ಸ್ಪಂದನೆ  ವಿದ್ಯಾರ್ಥಿನಿ ಸಾವಿಗೆ ಕಾರಣನಾದ ಮುಖ್ಯ ಶಿಕ್ಷಕ ಅಮಾನತು

Haliyala News 29 november 2024:- ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶೈಕ್ಷಣಿಕ ಜಿಲ್ಲೆಯ ಹಳಿಯಾಳ(Haliyala) ತಾಲೂಕಿನ ಮುಂಡವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ನೇ ತರಗತಿಯ ವಿದ್ಯಾರ್ಥಿನಿ(student) ಸಾನ್ವಿ ಮೂತ್ರವಿಸರ್ಜನೆಗೆ ಹೋದ ಸಮಯದಲ್ಲಿ ವಿದ್ಯುತ್‌ ತಂತಿ ತಗುಲಿ ತೀವ್ರ ಆಘಾತವಾಗಿ ಮೃತಪಟ್ಟಿರುವ ಘಟನೆ ನವೆಂಬರ್‌ 28 ರಂದು ನಡೆದಿತ್ತು.

Advertisement

ಇದನ್ನೂ ಓದಿ:-Haliyala ವಿದ್ಯುತ್ ಅವಘಡ ಮಳಿಗೆ ಮನೆಗಳು ಬೆಂಕಿಗಾಹುತಿ.

ಇದನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ತಕ್ಷಣವೇ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.

ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸದರಿ ಶಾಲೆಗೆ ಕೆಇಬಿ (KEB)ಅನುಮತಿ ಇಲ್ಲದೆ ವಿದ್ಯುತ್‌ ಸಂಪರ್ಕ ಪಡೆದುಕೊಂಡು ಬೋರ್‌ವೆಲ್‌ಗೆ ಸಂಪರ್ಕ ಕಲ್ಪಿಸಿದ್ದು ಈ ತಂತಿ ಹಲವು ಕಡೆ ತುಂಡಾಗಿ ಜಾಯಿಂಟ್‌ ಮಾಡಿದ್ದು ಇರುತ್ತದೆ.

Haliyala news
ಮೃತ ಶಾಲಾ ಬಾಲಕಿ

ಇದನ್ನೂ ಓದಿ:-https://kannadavani.news/a-little-girl-who-went-to-the-school-toilet-died-due-to-electric-shock/

ಈ ತಂತಿಯ ಮೇಲೆ ಅದೇ ಸಮಯದಲ್ಲಿ ಕೋತಿಗಳು ಓಡಾಡಿದ್ದರಿಂದ ತಂತಿ ತುಂಡಾಗಿ ಬಿದ್ದಿರುವುದನ್ನು ಈ ವಿದ್ಯಾರ್ಥಿನಿ ಗಮನಿಸದೆ ಹರಿದ ತಂತಿಯನ್ನು ಸ್ಪರ್ಶಿಸಿದ್ದು ಅವಘಡಕ್ಕೆ ಕಾರಣವಾಗಿರುತ್ತದೆ.

ಇಲ್ಲಿ ಶಾಲೆಯ ಮುಖ್ಯ ಶಿಕ್ಷಕ  ಹಾಗೂ ಶಿಕ್ಷಕರ (teather)ನಿರ್ಲಕ್ಷ್ಯತೆ ಎದ್ದು ಕಾಣುತ್ತಿದ್ದು ಸ್ಪಷ್ಟವಾಗಿರುತ್ತದೆ. ಈ ಕುರಿತು ಹಳಿಯಾಳ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕರ್ತವ್ಯ ನಿರ್ಲಕ್ಷ್ಯತನದ ಹಿನ್ನೆಲೆಯಲ್ಲಿ ಸದರಿ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ತುಕರಾಮ್ ಜಯವಂತ್ ಕಲ್ಕೇರಿ ಅಮಾನತು ಮಾಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಬಸವರಾಜ್  ತಿಳಿಸಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ