Haliyala :ಸಾಲ ತೀರಿಸಿದರೂ ಕಾಲಿ ಚಕ್ ತೋರಿಸಿ ಮಂಚಕ್ಕೆ ಕರೆದ ಮೀಟರ್ ದಂಧೆಕೋರರ ಬಂಧನ.
Haliyala :ಸಾಲ ತೀರಿಸಿದರೂ ಕಾಲಿ ಚಕ್ ತೋರಿಸಿ ಮಂಚಕ್ಕೆ ಕರೆದ ಮೀಟರ್ ದಂಧೆಕೋರರ ಬಂಧನ.

ಕಾರವಾರ:- ತಂದೆಯ ಸಾವಿನ ನಂತರ ಕಾರ್ಯ ಮಾಡುವುದಕ್ಕಾಗಿ 50 ಸಾವಿರ ಸಾಲ ಮಾಡಿದ ಯುವತಿಯೊಬ್ಬಳು ಬಡ್ಡಿ ಸಮೇತ ಸಾಲ ತೀರಿಸಿದರೂ ಆಕೆ ನೀಡಿದ್ದ ಕಾಲಿ ಚಕ್ ತೋರಿಸಿ ಕೋರ್ಟ ನಲ್ಲಿ ದಾವೆ ಹೂಡುವ ದಮ್ಕಿ ನೀಡಿ ಕಾಮದಾಟಕ್ಕೆ ಕರೆದ ಐದುಜನ ಮೀಟರ್ ಬಡ್ಡಿದಂಧೆಕೋರರನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ(Haliyala) ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:-Haliyala :ನಕಲಿ ಪತ್ರಕರ್ತೆಯಿಂದ ಆಸ್ಪತ್ರೆಯಲ್ಲಿ ಗಲಾಟೆ -ಮಹಿಳೆ ಸೇರಿ ಇಬ್ಬರು ಜೈಲು ಶಿಕ್ಷೆ!
ಹಳಿಯಾಳದ ಅಬ್ದುಲ್, ಶಾಂತಾ ಮೋಹನ್ ನಾಯ್ಕ , ಭಾಷಾ, ರಾಜು ಮತ್ತು ಸುಭಾನಿ ಐವರ ಮೇಲೆ ಕೇಸ್ ದಾಖಲಾಗಿದ್ದು ಹಸೀನಾ ಎಂಬ ಯುವತಿ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.

ಈ ಐವರು ಹತ್ತು ಸಾವಿರ ರೂಪಾಯಿ ನಂತೆ ಐವತ್ತು ಸಾವಿರ ರೂಪಾಯಿ ಸಾಲವನ್ನು ಈ ಯುವತಿಗೆ ನೀಡಿದ್ದರು.ಐದು ಜನ ಪ್ರತ್ಯೇಕವಾಗಿ ಐದು ಖಾಲಿ ಚಕ್ ಗಳನ್ನ ಹಸಿನಾಳಿಂದ ಪಡೆದಿದ್ದರು.
ಹಸೀನಾ ಬಡ್ಡಿ ಸಮೇತ ಸಾಲ ಮರುಪಾವತಿ ಮಾಡಿದ್ರು ಸಹಿತ ಚಕ್ ನನ್ನು ಮರಳಿ ನೀಡಿರಲಿಲ್ಲ. ಬದಲಾಗಿ ಲೈಂಗಿಕತೆಗೆ ಬಳಸಿಕೊಳ್ಳಲು ಈಕೆಗೆ ಒತ್ತಾಯ ಮಾಡಿದ್ದರು. ಈ ಸಂಬಂಧ ಯುವತಿ ದೂರು ನೀಡುತಿದ್ದಂತೆ ಅಬ್ದುಲ್ ಎಂಬ ಎ1ಆರೋಪಿ ಯನ್ನ ಕೂಡಲೆ ಬಂಧಿಸಲಾಗಿದ್ದು ನಂತರ ಉಳಿದ ಆರೋಪಗಳನ್ನು ಸಹ ಬಂಧಿಸಿದ್ದಾರೆ.