Haliyala ಬಡವರ ಕೆಲಸ ಮಾಡದ ಅಧಿಕಾರಿ ವಿರುದ್ಧ ಆರ್.ವಿ ದೇಶಪಾಂಡೆ ಗರಂ ! ಕೈಗೆ ಬಂತು ಬಾಟಲ್ ?
Haliyala ಬಡವರ ಕೆಲಸ ಮಾಡದ ಅಧಿಕಾರಿ ವಿರುದ್ಧ ಆರ್.ವಿ ದೇಶಪಾಂಡೆ ಗರಂ ! ಕೈಗೆ ಬಂತು ಬಾಟಲ್ ?
Haliyala :- ಅತಿವೃಷ್ಟಿಯಿಂದ ಮನೆ ಮುರಿದಿದಕ್ಕೆ ಮಹಿಳೆಗೆ ಪರಿಹಾರ ನೀಡಲು ನಿರ್ಲಕ್ಷ ಮಾಡಿದ ಕಂದಾಯ ಇಲಾಖೆ ಅಧಿಕಾರಿಗೆ (officer) ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ,ಹಳಿಯಾಳ ಶಾಸಕ ಆರ್. ವಿ ದೇಶಪಾಂಡೆ ಕೋಪದಲ್ಲಿ ನೀರಿನ ಬಾಟಲಿ ಎತ್ತಿ ಹೋದ ಘಟನೆ ನಡೆದಿದೆ.

ರಾಮನಗರದ ಶಾರದ ಸೋಲೇಕರ್ ಎಂಬುವವರು ಕಳೆದ ವರ್ಷ ಮಳೆಯಲ್ಲಿ ಮನೆ ಕಳೆದುಕೊಂಡಿದ್ದರು, ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರೂ ಕಂದಾಯಾಧಿಕಾರಿ ರೆಹಮಾನ್ ಎಂಬುವವರು ಈಕೆಯ ಅರ್ಜಿ ವಿಲೇವಾರಿ ಮಾಡದೇ ನಿರ್ಲಕ್ಷ ವಹಿಸಿದ್ದರು.
ಇದನ್ನೂ ಓದಿ:-Haliyala :ಅಂಗನವಾಡಿಯ ಲಕ್ಷಾಂತರ ಮೌಲ್ಯದ ಪೌಷ್ಟಿಕ ಆಹಾರ ಕದ್ದ ಕಾಂಗ್ರೇಸ್ ಮುಖಂಡ- ಇಬ್ಬರ ಬಂಧನ
ಈ ಕುರಿತು ಹಳಿಯಾಳ (Haliyala) ಶಾಸಕ ಆರ್.ವಿ ದೇಶಪಾಂಡೆ ಬಳಿ ಮಹಿಳೆ ನೋವು ತೋಡಿಕೊಂಡಿದ್ದರು. ಈ ಕುರಿತು ಸ್ಥಳದಲ್ಲಿ ಇದ್ದ ಕಂದಾಯಾಧಿಕಾರಿಗೆ ಮಾಹಿತಿ ಕೇಳಿದಾಗ ನಿರ್ಲಕ್ಷದ ಮಾತನಾಡಿದ್ದು ಇದರಿಂದ ಕೆರಳಿದ ಶಾಸಕ ಆರ್.ವಿ ದೇಶಪಾಂಡೆ ತರಾಟೆ ತೆಗೆದುಕೊಂಡಿದ್ದು ಸಿಟ್ಟಿನಲ್ಲಿ ಅಧಿಕಾರಿಗೆ ಬಾಟಲ್ ಎತ್ತಿ ಹೋಗಿದ್ದು ನಂತರ ಕೋಪ ತಡೆದುಕೊಂಡ ಅಧಿಕಾರಿಯನ್ನು ಅಮಾನತು ಮಾಡಲು ತಹಶಿಲ್ದಾರ್ ಗೆ ಸೂಚಿಸಿದರು.
ವಿಡಿಯೋ ನೋಡಿ:-