Hassan -ಪ್ರೊಬೆಷನರಿ IPS officer ಹರ್ಷಬರ್ಧನ್ ಅಪಘಾತದಲ್ಲಿ ಮೃತ
Hasana news 01 December 2024 : ಮೈಸೂರಿನ ಕೆಪಿಎನಿಂದ ಹಾಸನ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಬರುತ್ತಿದ್ದ ಮಧ್ಯಪ್ರದೇಶ ಮೂಲದ ಯುವ ಪ್ರೊಬೆಷನರಿ ಐಪಿಎಸ್ ಅಧಿಕಾರಿ (IPS officer) ಹರ್ಷಬರ್ಧನ್ ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ.
ಹಾಸನ ತಾಲ್ಲೂಕಿನ, ಕಿತ್ತಾನೆ ಗಡಿ ಭಾಗದಲ್ಲಿ ವಾಹನದ ಟಯರ್ ಸ್ಪೋಟಗೊಂಡು ಅಪಘಾತ ನಡೆದಿತ್ತು.
ಇದನ್ನೂ ಓದಿ:- Karavali| ಕಾಲೇಜು ಯುವತಿಯೊಂದಿಗೆ ಬುರ್ಖಾ ಹಾಕಿ ಹೋದವನಿಗೆ ಬಿತ್ತು ಧರ್ಮದೇಟು
ಈ ಘಟನೆಯಲ್ಲಿ ಹರ್ಷಬರ್ದನ್ ಗೆ ತಲೆಗೆ ತೀವ್ರವಾಗಿ ಗಾಯವಾಗಿತ್ತು.ಪ್ರೊಬೆಷನರಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಹಾಸನ ಜಿಲ್ಲೆಗೆ ನಿಯೋಜನೆಗೊಂಡಿದ್ದ ಹರ್ಷಬರ್ದನ್ ಇಂದು ಸಂಜೆ ವರದಿ ಮಾಡಿಕೊಳ್ಳಲು ಹೊಳೆನರಸೀಪುರ ಕಡೆಯಿಂದ KA-13-G-1386 ಜೀಪ್‌ನಲ್ಲಿ ಹಾಸನ ನಗರಕ್ಕೆ ಬರುತ್ತಿದ್ದರು.
ಇನ್ನೇನು ಕೆಲವೇ ನಿಮಿಷಗಳಲ್ಲಿ ಹಾಸನ ತಲುಪಬೇಕು ಅನ್ನುವಷ್ಟರಲ್ಲಿ ಕಿತ್ತಾನೆಗಡಿ ಬಳಿ ಪೊಲೀಸ್ ಜೀಪ್‌ನ ಟಯರ್ ಸಿಡಿದು ವೇಗವಾಗಿ ಚಲಿಸುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಪಲ್ಟಿಯಾಗಿದೆ.
ಪಲ್ಟಿಯಾದ ರಭಸಕ್ಕೆ ಜೀಪ್ ನಜ್ಜುಗುಜ್ಜಾಗಿದೆ. ಇದರಿಂದ ಐಪಿಎಸ್ ಅಧಿಕಾರಿ ಅವರ ತಲೆಗೆ ಪೆಟ್ಟುಬಿದ್ದು ತೀವ್ರ ರಕ್ತಸ್ರಾವ ಆಗಿದೆ.ಇದಲ್ಲದೇ ಚಾಲಕ ಮಂಜೇಗೌಡ ಎಂಬುವರಿಗೂ ಗಾಯಗಳಾಗಿತ್ತು.
ಇದನ್ನು ಗಮನಿಸಿದ ಸ್ಥಳೀಯರೂ ಕೂಡಲೇ ರಕ್ತಸ್ರಾವವಾಗಿ ಬಿದ್ದಿದ್ದ ಅಧಿಕಾರಿ ಮತ್ತು ಚಾಲಕನನ್ನು 108 ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದರು.
ಆದರೆ ಐಪಿಎಸ್ ಅಧಿಕಾರಿಯ ಸ್ಥಿತಿ ತೀರಾ ಗಂಭೀರವಾಗಿದ್ದು ಹಾಸನ ಪೊಲೀಸ್ ಇಲಾಖೆ ಅಧಿಕಾರಿಯ ಚಿಕಿತ್ಸೆ ಉಸ್ತುವಾರಿ ವಹಿಸಿ ಚಿಕಿತ್ಸೆ ಕೊಡಿಸಿದರೂ ಬದುಕುಳಿಯಲಿಲ್ಲ .
2022 ನೇ ಬ್ಯಾಚ್ ನ IPS officer ಆಗಿದ್ದ ಇವರು ಮೂಲತಹಾ ಮಧ್ಯಪ್ರದೇಶದವರಾಗಿದ್ದಾರೆ. ಆಲ್ ಇಂಡಿಯಾ ಲೆವೆಲ್ ನಲ್ಲಿ 153 ನೇ ರ್ಯಾಂಕ್ ಪಡೆದಿದ್ದು ಕರ್ನಾಟಕ ಕೇಡರ್ ಗೆ ಆಯ್ಕೆಯಾಗಿದ್ದರು.