For the best experience, open
https://m.kannadavani.news
on your mobile browser.
Advertisement

Karnataka:ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ವೃದ್ಧ.

ಹಾವೇರಿ. ತುಂಗಭದ್ರಾ ನದಿಯಲ್ಲಿ (Thungabadra river)ಬಟ್ಟೆ ತೊಳೆಯಲು ಹೋಗಿದ್ದ ವೃದ್ಧರೊಬ್ಬರು ಕಾಲು ಜಾರಿ ಬಿದ್ದು 15 ಕಿ.ಮೀ. ದೂರ ಈಜಿಕೊಂಡು ಹೋಗಿ, ಸ್ಥಳೀಯರ ಸಹಾಯದಿಂದ ಬದುಕಿ ಬಂದಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಐರಣಿ ಗ್ರಾಮದ ಬಳಿ ನಡೆದಿದೆ.
10:12 PM Jul 23, 2025 IST | ಶುಭಸಾಗರ್
ಹಾವೇರಿ. ತುಂಗಭದ್ರಾ ನದಿಯಲ್ಲಿ (Thungabadra river)ಬಟ್ಟೆ ತೊಳೆಯಲು ಹೋಗಿದ್ದ ವೃದ್ಧರೊಬ್ಬರು ಕಾಲು ಜಾರಿ ಬಿದ್ದು 15 ಕಿ.ಮೀ. ದೂರ ಈಜಿಕೊಂಡು ಹೋಗಿ, ಸ್ಥಳೀಯರ ಸಹಾಯದಿಂದ ಬದುಕಿ ಬಂದಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಐರಣಿ ಗ್ರಾಮದ ಬಳಿ ನಡೆದಿದೆ.
karnataka ತುಂಗಭದ್ರಾ ನದಿಯಲ್ಲಿ 15 ಕಿ ಮೀ  ಈಜಿ ಪ್ರಾಣ ಉಳಿಸಿಕೊಂಡ ವೃದ್ಧ

Karnataka:ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ವೃದ್ಧ.

Advertisement

ಹಾವೇರಿ. ತುಂಗಭದ್ರಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ವೃದ್ಧರೊಬ್ಬರು ಕಾಲು ಜಾರಿ ಬಿದ್ದು 15 ಕಿ.ಮೀ. ದೂರ ಈಜಿಕೊಂಡು ಹೋಗಿ, ಸ್ಥಳೀಯರ ಸಹಾಯದಿಂದ ಬದುಕಿ ಬಂದಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಐರಣಿ ಗ್ರಾಮದ ಬಳಿ  ನಡೆದಿದೆ.

ಇದನ್ನೂ ಓದಿ:-Karnataka: ದೆವ್ವ ಬಿಡಿಸುವುದಾಗಿ ಕೋಲಲ್ಲಿ ಹೊಡೆದು ಚಿತ್ರಹಿಂಸೆ-ನೀರಿಗಾಗಿ ಅಂಗಲಾಚಿ ಮೃತಪಟ್ಟ ಮಹಿಳೆ

ಮೈಸೂರಿನ ಜಯಣ್ಣ (60) ಈಜಿ ಬದುಕಿಬಂದ ವೃದ್ಧನಾಗಿದ್ದು ,ರಾಣೇಬೆನ್ನೂರಿನ ಕುಮಾರಪಟ್ಟಣಂ ಬಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ತುಂಗಭದ್ರಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ಈ ಸಮಯದಲ್ಲಿ ಕಾಲು ಜಾರಿ ನದಿಗೆ ಬಿದ್ದಿದ್ದಾರೆ.

ಮಳೆಯಿಂದಾಗಿ(rain) ನದಿ ತುಂಬಿ ಹರಿಯುತ್ತಿದ್ದು ನೀರಿನ ಸೆಳೆತಕ್ಕೆ ಸಿಲುಕಿದ ಜಯಣ್ಣ ಈಜುತ್ತ 15 ಕಿ.ಮೀ.ವರೆಗೂ ತೆರಳಿದ್ದಾರೆ.

ನಂತರ ಈಜಲು ಆಗದ ಕಾರಣ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.ಅಷ್ಟರಲ್ಲಿ ಅವರು ಐರಣಿ ಗ್ರಾಮದ ಹೊಳೆಮಠದ ವರೆಗೂ ತೇಲಿ ಬಂದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಸಮಗ್ರ ಪರಿವರ್ತನಾ ಸಮುದಾಯದ ಸದಸ್ಯರು ಮೀನುಗಾರರ ದೋಣಿ ತೆಗೆದುಕೊಂಡು ನದಿಗೆ ಇಳಿದು ಜಯಣ್ಣ ಅವರನ್ನು ರಕ್ಷಿಸಿ ದಡಕ್ಕೆ ಕರೆದುಕೊಂಡು ಬಂದಿದ್ದಾರೆ. ನಂತರ ಅವರನ್ನು ಹರಿಹರ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಜಯಣ್ಣ ಅವರ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:-Haveri: ಮಾರ್ಗ ಮಧ್ಯೆ ಬಸ್ ನಿಲ್ಲಿಸಿ ನಮಾಜ್ ಮಾಡಿದ ಕಂಡಕ್ಟರ್ !

ಸಮಗ್ರ ಪರಿವರ್ತನಾ ಸಮುದಾಯದ ಅಧ್ಯಕ್ಷ ಆಂಜನೇಯ ನಾಗೇನಹಳ್ಳಿ, ಮೀನುಗಾರ ಗಿರೀಶ ಪಾಟೀಲ, ಮೌನೇಶ ತಳವಾರ, ಇರ್ಪಾನ ಖಂಡಾರಿ, ಹನುಮಂತಪ್ಪ ಮೀನಕಟ್ಟಿ ಜಯಣ್ಣ ಅವರನ್ನು ರಕ್ಷಣೆ ಮಾಡಿದವರಾಗಿದ್ದು ಸದ್ಯ ಈ ವೃದ್ಧ ಚೇತರಿಸಿಕೊಳ್ಳುತಿದ್ದಾರೆ‌.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ