ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Budget 2025: ಯಾವ ಕ್ಷೇತ್ರಕ್ಕೆ ಎಷ್ಟು! ಏರಿಕೆ,ಇಳಿತ ಯಾವುದು? ವಿವರ ಇಲ್ಲಿದೆ.

ಕೇಂದ್ರ ಸರ್ಕಾರದ ಬಜೆಟ್ 2025-26 ನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ರವರು ಯಾವ ಕ್ಷೇತ್ರಕ್ಕೆ ಏನು ನೀಡಿದ್ದಾರೆ. ಯಾವ ಬೆಲೆ ಹೆಚ್ಚಳ, ಯಾವುದು ಇಳಿಕೆ ಎಂಬ ಮಾಹಿತಿ ಇಲ್ಲಿದೆ
05:43 PM Feb 01, 2025 IST | ಶುಭಸಾಗರ್
Here are the details of the budget allocations for each sector in the Union Budget 2025-26.

Budget 2025: ಯಾವ ಕ್ಷೇತ್ರಕ್ಕೆ ಎಷ್ಟು! ಏರಿಕೆ,ಇಳಿತ ಯಾವುದು? ವಿವರ ಇಲ್ಲಿದೆ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕೇಂದ್ರ ಸರ್ಕಾರದ ಬಜೆಟ್ 2025-26 ನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ರವರು ಯಾವ ಕ್ಷೇತ್ರಕ್ಕೆ ಏನು ನೀಡಿದ್ದಾರೆ. ಯಾವ ಬೆಲೆ ಹೆಚ್ಚಳ, ಯಾವುದು ಇಳಿಕೆ ಎಂಬ ಮಾಹಿತಿ ಇಲ್ಲಿದೆ.

ಬಜೆಟ್‌ 2025ರಲ್ಲಿ ಮಧ್ಯಮ ವರ್ಗಕ್ಕೆ ಕೇಂದ್ರ ಸರ್ಕಾರ ಬಂಪರ್‌ ಗಿಫ್ಟ್‌ ಕೊಟ್ಟಿದೆ. ವಾರ್ಷಿಕ 12 ಲಕ್ಷದವರೆಗೆ ಆದಾಯ ಹೊಂದಿರುವವರು ತೆರಿಗೆ ಕಟ್ಟುವಂತಿಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಘೋಷಿಸಿದ್ದಾರೆ

ಈ ಬಾರಿ ಗರಿಷ್ಠ 10 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ನೀಡಬಹುದು ಎಂಬ ಮಾತು ಕೇಳಿ ಬಂದಿತ್ತು. ಆದರೆ ಈ ಬಾರಿ ನಿರ್ಮಲಾ ಸೀತಾರಾಮನ್‌ ಅವರು ಬರೋಬ್ಬರಿ 12 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿ ಮಧ್ಯಮ ವರ್ಗದವರಿಗೆ ಬಂಪರ್‌ ಘೋಷಣೆ ಮಾಡಿದ್ದಾರೆ.

Advertisement

ಇದನ್ನೂ ಓದಿ:-Union Budget 2025: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನೆಲ್ಲ ಬೇಕು? ಬೇಡಿಕೆ ಪಟ್ಟಿ ಕೊಟ್ಟ ಸಿ.ಎಂ!

ಮುಂದಿನ ವಾರ ಸೀತಾರಾಮನ್‌ ಅವರು ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡಿಸಲಿದ್ದಾರೆ. ಈ ಮಸೂದೆಯಲ್ಲಿ ಈ ವಿಚಾರದ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.

ಹೊಸ ತೆರಿಗೆ ಪದ್ಧತಿಯಡಿಯಲ್ಲಿ ವಾರ್ಷಿಕ 12 ಲಕ್ಷ ರೂ.ವರೆಗೆ ಆದಾಯ ಗಳಿಸುವವರು ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಇದಕ್ಕೆ 75,000 ರೂ.ಗಳ ಪ್ರಮಾಣಿತ ಕಡಿತವನ್ನು ಸೇರಿಸಿದರೆ, ವಾರ್ಷಿಕ 12.75 ಲಕ್ಷ ರೂ.ವರೆಗಿನ ಆದಾಯ ಹೊಂದಿರುವ ತೆರಿಗೆದಾರರು ತೆರಿಗೆ ಕಟ್ಟುವಂತಿಲ್ಲ.

Nirmala Sitharaman

ಕ್ಯಾನ್ಸರ್ ರೋಗಿಗಳಿಗೆ ರಿಲೀಫ್

ನೆರವು ಕಾರ್ಯಕ್ರಮದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ನೀಡಿದರೆ ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ಪಡೆಯಬಹುದು. ಹೆಚ್ಚುವರಿಯಾಗಿ, 37 ಹೊಸ ಔಷಧಿಗಳು ಮತ್ತು 13 ಹೊಸ ರೋಗಿ ನೆರವು ಕಾರ್ಯಕ್ರಮಗಳನ್ನು ವಿನಾಯಿತಿ ಪಟ್ಟಿಯಲ್ಲಿ ಸೇರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಕ್ಯಾನ್ಸರ್ ರೋಗಿಗಳು, ಅಪರೂಪದ ಕಾಯಿಲೆಗಳು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಪರಿಹಾರ ಒದಗಿಸಲು, 36 ಜೀವ ಉಳಿಸುವ ಔಷಧಿಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗುವುದು ಹಾಗೂ 6 ಜೀವ ಉಳಿಸುವ ಔಷಧಿಗಳಿಗೆ ಕಸ್ಟಮ್ಸ್ ಸುಂಕದಲ್ಲಿ 5% ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು

ರೈತರಿಗಾಗಿ ‘ಧನ್‌ ಧಾನ್ಯ ಕೃಷಿ’ ಯೋಜನೆ ಘೋಷಿಸಿದ ಸೀತಾರಾಮನ್‌

‘ಧನ್ ಧಾನ್ಯ ಕೃಷಿ’ ಯೋಜನೆಯನ್ನು ಘೋಷಿಸಿದ್ದಾರೆ. ಇದು ದೇಶದ 1 ಕೋಟಿಗೂ ಹೆಚ್ಚು ರೈತರಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಶನಿವಾರ 2025-26ರ ಕೇಂದ್ರ ಬಜೆಟ್ ಮಂಡಿಸುತ್ತಾ, ‘ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ’ಯು ಕಡಿಮೆ ಇಳುವರಿ, ಆಧುನಿಕ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ನಿಯತಾಂಕಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಳ್ಳುತ್ತದೆ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರವು ರಾಜ್ಯಗಳ ಸಹಭಾಗಿತ್ವದಲ್ಲಿ ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯನ್ನು ಕೈಗೊಳ್ಳಲಿದೆ. ಅಸ್ತಿತ್ವದಲ್ಲಿರುವ ಯೋಜನೆಗಳು ಮತ್ತು ವಿಶೇಷ ಕ್ರಮಗಳ ಒಮ್ಮುಖದ ಮೂಲಕ, ಈ ಕಾರ್ಯಕ್ರಮವು ಕಡಿಮೆ ಉತ್ಪಾದಕತೆ, ಮಧ್ಯಮ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ನಿಯತಾಂಕಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಳ್ಳುತ್ತದೆ. ಇದು ಸಾಂಸ್ಕೃತಿಕ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.

ತರಕಾರಿಗಳು, ಹಣ್ಣುಗಳ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಲಾಭದಾಯಕ ಬೆಲೆಗಳನ್ನು ಒದಗಿಸಲು ಸಮಗ್ರ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಕೃಷಿಯಿಂದ ಉದ್ಯೋಗ ಸೃಷ್ಟಿಯಾಗಲಿದೆ. ಇದರಿಂದ ವಲಸೆ ತಡೆಯಬಹುದು. ಯುವಕರನ್ನು ಕೃಷಿಯತ್ತ ಸೆಳೆಯುವ ಉದ್ದೇಶ ಹೊಂದಿದೆ. ಎನ್‌ಸಿಸಿಎಫ್ ಕಡೆಯಿಂದ ಧಾನ್ಯಗಳ ಸಂಗ್ರಹಣೆ ಮಾಡಲಾಗುವುದು. ಹಣ್ಣು ಮತ್ತು ತರಕಾರಿಯನ್ನು ಬೆಳೆಗೆ ಪ್ರೋತ್ಸಾಹ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಹತ್ತಿ ಬೆಳೆಗೆ ಈ ಐದು ವರ್ಷದಲ್ಲಿ ಆದ್ಯತೆ. ತಂತ್ರಜ್ಞಾನದ ಸಹಕಾರ ನೀಡುವುದು. ಇದು ಟೆಕ್ಸ್‌ಟೈಲ್ಸ್‌ ವಲಯದಲ್ಲಿ ಹೆಚ್ಚು ಆದಾಯ ತಂದು ಕೊಡಲಿದೆ ಎಂದು ತಿಳಿಸಿದ್ದಾರೆ. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮಿತಿ ಹೆಚ್ಚಳ ಮಾಡಲಾಗಿದೆ. ಐದು ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಉದ್ಯಮ ಆರಂಭಿಸುವ 5 ಲಕ್ಷ SC, ST ಮಹಿಳೆಯರಿಗೆ ಆರ್ಥಿಕ ನೆರವು.‌

ಮೊದಲ ಬಾರಿಗೆ ಉದ್ಯಮ ಆರಂಭಿಸುವ 5 ಲಕ್ಷ ಎಸ್‌ಸಿ, ಎಸ್ಟಿ ಮಹಿಳಾ ಉದ್ಯಮಿಗಳಿಗೆ (Women Entrepreneurs) ಸಾಲ ಸೌಲಭ್ಯ ನೀಡಲು ಉದ್ದೇಶಿಸಿದ್ದು, ಮುಂದಿನ 5 ವರ್ಷಗಳಲ್ಲಿ ಹಂತ ಹಂತವಾಗಿ 2 ಕೋಟಿ ರೂ.ವರೆಗೆ ಸಾಲ ಸೌಲಭ್ಯ ನೀಡುವುದಾಗಿ ಘೋಷಿಸಿದ್ದಾರೆ. ಮುಂದಿನ 5 ವರ್ಷಗಳಲ್ಲಿ 5 ಲಕ್ಷ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಎರಡನೇ ಮನೆಗೂ ತೆರಿಗೆ ಪಾವತಿಯಿಂದ ವಿನಾಯಿತಿ

ವೇತನ ಪಡೆಯುವ ತೆರಿಗೆದಾರರಿಗೆ 12 ಲಕ್ಷ ರೂ.ವರೆಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಲಾಗಿದೆ.

ಇಲ್ಲಿಯವರೆಗೆ ಒಂದು ಮನೆಗೆ ಮಾತ್ರ ತೆರಿಗೆ (Tax) ವಿನಾಯಿತಿ ಇತ್ತು. ಎರಡನೇ ಮನೆ ಹೊಂದಿದ್ದರೆ ಮಾರುಕಟ್ಟೆ ಮೌಲ್ಯಕ್ಕೆ ತಕ್ಕಂತೆ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಎರಡನೇ ಮನೆಗೂ ತೆರಿಗೆ ವಿನಾಯಿತಿ ನೀಡುವ ಮೂಲಕ ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ ಸುದ್ದಿ ಪ್ರಕಟಿಸಿದ್ದಾರೆ.

ಗ್ರಾಮೀಣ ಆರ್ಥಿಕತೆಗೆ ವೇಗವರ್ಧಕವಾಗಿ ಭಾರತೀಯ ಅಂಚೆ ಸೇವೆಗಳ ಕಾರ್ಯನಿರ್ವಹಣೆ.

ಗ್ರಾಮೀಣಾಭಿವೃದ್ಧಿಗಾಗಿ ಭಾರತೀಯ ಅಂಚೆ ಸೇವೆಗಳನ್ನು ವಿಸ್ತರಿಸಲಾಗುವುದು. ಇದರಿಂದ ಸೂಕ್ಷ್ಮ ಉದ್ಯಮಗಳಿಗೆ ಡಿಬಿಟಿ, ಕ್ರೆಡಿಟ್ ಸೇವೆಗಳು, ವಿಮೆ ಸೇರಿದಂತೆ ಇತರ ಸೇವೆಗಳು ಲಭ್ಯವಾಗುತ್ತವೆ. ವಿಶ್ವಕರ್ಮರು, ಮಹಿಳೆಯರು, ಸ್ವಸಹಾಯ ಗುಂಪುಗಳು, ಎಂಎಸ್ಎಂಇಗಳು ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಭಾರತೀಯ ಅಂಚೆ ಸೇವೆ ದೊಡ್ಡ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಪರಿವರ್ತಿಸಲಾಗುವುದು ಎಂದು ಹೇಳಿದರು.

ಪ್ರವಾಸೋದ್ಯಮಕ್ಕೆ ಉತ್ತೇಜನ – ಹೋಂಸ್ಟೇ ನಿರ್ಮಾಣಕ್ಕೆ ಮುದ್ರಾ ಲೋನ್‌ ವಿಸ್ತರಣೆ.

ಪ್ರವಾಸೋದ್ಯಮಕ್ಕೆ (Tourism) ಉತ್ತೇಜನ ನೀಡುವ ಸಲುವಾಗಿ ಹೋಂಸ್ಟೇ (Homestays) ನಿರ್ಮಾಣಕ್ಕೆ ಮುದ್ರಾ ಲೋನ್‌ (Mudra Loans) ವಿಸ್ತರಿಸುವುದಾಗಿ ಬಜೆಟ್‌ (Union Budget 2025 ) ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

50 ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಹಾಗೂ ರಾಜ್ಯಗಳ ಸಹಭಾಗಿತ್ವದಲ್ಲಿ ಟಾಪ್ 50 ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಿದೆ. ಇದಕ್ಕಾಗಿ ಹೋಂಸ್ಟೇ ನಿರ್ಮಾಣಕ್ಕೆ ಮುದ್ರಾ ಸಾಲ ವಿಸ್ತರಿಸಲಿದೆ ಎಂದು ಹೇಳಿದ್ದಾರೆ.

120 ನಗರಗಳಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ.
ಉಡಾನ್‌ ಯೋಜನೆ (UDAN Scheme) ಅಡಿಯಲ್ಲಿ 120 ನಗರಗಳಲ್ಲಿ ನೂತನ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

ಸಾಮಾನ್ಯ ಜನರ ಕೂಡ ವಿಮಾನದಲ್ಲಿ ಪ್ರಯಾಣ ಮಾಡಲು ನೆರವಾಗಲೆಂದು, ಕೇಂದ್ರ ಸರ್ಕಾರ 2017 ರಲ್ಲಿ ಉಡಾನ್‌ ಯೋಜನೆಯನ್ನು ಪರಿಚಯಿಸಿತ್ತು. ಈ ಯೋಜನೆ ಅಡಿಯಲ್ಲಿ 120 ನಗರಗಳಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲಾಗುತ್ತದೆ.

ಇದು ಮುಂದಿನ 10 ವರ್ಷಗಳಲ್ಲಿ 4 ಕೋಟಿ ಜನರಿಗೆ ಅನುಕೂಲ ಕಲ್ಪಿಸಲಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಸಣ್ಣ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ. ಅಲ್ಲದೇ ಬಿಹಾರದಲ್ಲಿ ಗ್ರೀನ್ ಫಿಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಜೊತೆಗೆ ಪಾಟ್ನಾ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಯಾವ ವಲಯಕ್ಕೆ ಎಷ್ಟು ಅನುದಾನ?

ರಕ್ಷಣಾ ವಲಯ – 4,91,732 ಕೋಟಿ ರೂ.
ಗ್ರಾಮೀಣಾಭಿವೃದ್ಧಿ – 2,66,817
ಗೃಹ ವ್ಯವಹಾರಗಳು – 2,33,211
ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು – 1,71,437
ಶಿಕ್ಷಣ – 1,28,650
ಆರೋಗ್ಯ – 98,311
ನಗರಾಭಿವೃದ್ಧಿ – 96,777
ಐಟಿ ಮತ್ತು ದೂರಸಂಪರ್ಕ – 95,298
ಇಂಧನ – 81,174
ವಾಣಿಜ್ಯ ಮತ್ತು ಕೈಗಾರಿಕೆ – 65,553
ಸಮಾಜ ಕಲ್ಯಾಣ ಇಲಾಖೆ – 60,052
ವಿಜ್ಞಾನ – 55,679

ಯಾವ ಬೆಲೆ ಇಳಿಕೆ.

* ಮೊಬೈಲ್‌
* ಎಲ್‌ಇಡಿ/ಎಲ್‌ಸಿಡಿ ಟಿವಿ
* ಸುಗಂದ ದ್ರವ್ಯ
* ಲಿಥಿಯಂ ಅಯಾನ್ ಬ್ಯಾಟರಿ
* ಲೆದರ್‌ ಬೆಲ್ಟ್‌, ಶೂ, ಜಾಕೆಟ್‌
* ಸಾಗರ ಉತ್ಪನ್ನ
* ಹಡಗುಗಳ ತಯಾರಿಕೆಗೆ ಬಳಸುವ ಕಚ್ಚಾ ವಸ್ತು
* ಕ್ಯಾನ್ಸರ್‌ ಔಷಧಿ, ಜೀವರಕ್ಷಕ ಔಷಧಿ
* ಸ್ವದೇಶಿ ಬಟ್ಟೆ

ಯಾವ ಬೆಲೆ ಏರಿಕೆ.

* ಹೆಣೆದ ಬಟ್ಟೆಗಳು
* ಪ್ಯಾನೆಲ್‌ ಡಿಸ್‌ಪ್ಲೇ ಮೇಲಿನ ಕಸ್ಟಮ್ಸ್‌ ಸುಂಕ ಹೆಚ್ಚಳ (10%-20%)
* ಟೆಲಿಕಾಂ ಉಪಕರಣಗಳ ಮೇಲಿನ ಕಸ್ಟಮ್ಸ್‌ ಸುಂಕ ಹೆಚ್ಚಳ (10%-15%)

Advertisement
Tags :
BudgetAllocationEconomicGrowthEconomyFinanceGovernmentSpendingIndiaBudgetSectorWiseBudgetTaxUnion Minister Nirmala setharamanUnionBudget2025Women Entrepreneurs
Advertisement
Next Article
Advertisement