ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttarakannda:ಎರಡು ಲಕ್ಷಕ್ಕೂ ಹೆಚ್ಚು ಮೌಲ್ಯದ ನಾಟ ವಶಕ್ಕೆ- ಮೂವರು ಕಾಡುಗಳ್ಳರ ಬಂಧನ

ಕಾರವಾರ:- ಅಕ್ರಮವಾಗಿ ಸಾಗುವಾನಿ ಹಾಗೂ ಸೀಸಂ ಜಾತಿಯ ಮರದ‌ ತುಂಡಗಳ ಸಾಗಾಟ ಮಾಡುತಿದ್ದ ಮೂವರು ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆಯ (uttara kannda)
12:21 PM Apr 06, 2025 IST | ಶುಭಸಾಗರ್

ಎರಡು ಲಕ್ಷಕ್ಕೂ ಹೆಚ್ಚು ಮೌಲ್ಯದ ನಾಟ ವಶಕ್ಕೆ- ಮೂವರು ಕಾಡುಗಳ್ಳರ ಬಂಧನ

Advertisement

ಕಾರವಾರ:- ಅಕ್ರಮವಾಗಿ ಸಾಗುವಾನಿ ಹಾಗೂ ಸೀಸಂ ಜಾತಿಯ ಮರದ‌ ತುಂಡಗಳ ಸಾಗಾಟ ಮಾಡುತಿದ್ದ
ಮೂವರು ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆಯ (uttara kannda) ಯಲ್ಲಾಪುರದ ಇಡಗುಂದಿ ವಲಯದ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

ಯಲ್ಲಾಪುರ(yallapura) ಪ್ರಾದೇಶಿಕ ವಿಭಾಗದ ಇಡಗುಂದಿ ವಲಯದ ಅರಬೈಲ್ ಪ್ರದೇಶ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,ರಾಷ್ಟ್ರೀಯ ಹೆದ್ದಾರಿ-63 ರ ಅರಬೈಲ್- ಇಡಗುಂದಿ ಮಾರ್ಗದಲ್ಲಿ ನಅರಣ್ಯದಿಂದ‌ ಅಕ್ರಮವಾಗಿ 4 ಸಾಗುವಾನಿ ಮರಗಳು 1 ಸೀಸಂ ಜಾತಿಯ ಮರಗಳನ್ನು ಕತ್ತರಿಸಿ ಸಾಗಾಟ ಮಾಡುತಿದ್ದರು.

ಇದನ್ನೂ ಓದಿ:-Lokayukta – ಲಂಚ ಸ್ವೀಕರಿಸಿದ DYSP ಲೋಕಾಯುಕ್ತ ಬಲೆಗೆ

Advertisement

ಆರೋಪಿಗಳಾದ ಮಹಾಬಲೇಶ್ವ‌ರ್ ಬೀರಪ್ಪ ಹರಿಕಂತ್ರ, ಸಂದೀಪ ಸದಾನಂದ ನಾಯ್ಕ ಹಾಗೂ ಸುರೇಶ್ ತುಳಸು ಗೌಡ ಬಂದನಕ್ಕೊಳಗಾದವರಾಗಿದ್ದು ,2,50,000ರೂ. ಮೌಲ್ಯದ ಒಟ್ಟು 2.161 ಕ್ಯೂಬಿಕ್ ಮೀಟರ್ ನಷ್ಟು ತುಂಡುಗಳು ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ಇಡಗುಂದಿ ವಲಯ ಅರಣ್ಯಾಧಿಕಾರಿ ಮಂಜುನಾಥ್ ನಾಯಕ್, ಅಧಿಕಾರಿಗಳಾದ ಸೋಮಶೇಖರ್ ನಾಯಕ್,ಸಂತೋಷ್ ಪವಾರ್, ಚಂದ್ರಹಾಸ ಪಟಗಾರ, ಅರಣ್ಯ ಪಾಲಕ ಕಾಶಿನಾಥ್ ಯಂಕಂಚಿ ಭಾಗಿಯಾಗಿದ್ದರು.

ಆರೋಪಿ ಮಹಾಬಲೇಶ್ವರ್ ಬೀರಪ್ಪ ಹರಿಕಂತ್ರ ಎಂಬಾತ ನಟೋರಿಯಸ್ ಕಾಡುಗಳ್ಳನಾಗಿದ್ದು ,ಈತನ ಮೇಲೆ ಅರಣ್ಯ ಇಲಾಖೆಯ ವಿವಿಧ ವಲಯಗಳಲ್ಲಿ ಹಲವು ಎಫ್.ಐ.ಆರ್ ಗಳು ದಾಖಲಾಗಿದೆ.

ಇದನ್ನೂ ಓದಿ:-Yallapur :ಒಂದನೇ ತರಗತಿ ವಿದ್ಯಾರ್ಥಿನಿ ಯನ್ನು ಪಾಳು ಬಿದ್ದ ದೇವಸ್ಥಾನದಲ್ಲಿ ಅ*ಚಾರ ಮಾಡಿದ ಅಪ್ರಾಪ್ತ ಬಾಲಕ!

ಪ್ರತೀ ಬಾರಿ ಪರಾರಿಯಾಗುತ್ತಿದ್ದ ಆರೋಪಿ ಕೊನೆಗೂ ಅರಣ್ಯ ಇಲಾಖೆಯ ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದು,ಮೂವರು ಆರೋಪಿಗಳ ವಿರುದ್ಧ ಇಡಗುಂಡಿ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
CrimenewsEnvironmentalProtectionForestDepartmentForestSmugglersIllegalTradeLawEnforcementSmugglingArrestWildlifeCrime
Advertisement
Next Article
Advertisement