Honnavar: ದೋಣಿವಿಹಾರ ತಾತ್ಕಾಲಿಕ ಸ್ಥಗಿತ
Honnavar: ದೋಣಿವಿಹಾರ ತಾತ್ಕಾಲಿಕ ಸ್ಥಗಿತಮಾಡಿದ ಸ್ಥಳೀಯ ಆಡಳಿತ.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (Honnavara) ತಾಲ್ಲೂಕಿನ ವ್ಯಾಪ್ತಿಯ ಕೆಳಗಿನಪಾಳ್ಯ, ಕಾಸರಕೋಡ ಹಾಗೂ ಬಿಕಾಸಿತಾರಿಯ ಸಮೀಪ ಶರಾವತಿ ನದಿಯಲ್ಲಿ (Sharavathi River)ನಡೆಯುತಿದ್ದ ದೋಣಿವಿಹಾರವನ್ನು ಹೊನ್ನಾವರ ತಾಲ್ಲೂಕು ಆಡಳಿತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಈ ಹಿನ್ನೆಲೆಯಲ್ಲಿ ದೋಣಿ ವಿಹಾರಕ್ಕೆ ಎಂದು ಬಂದಿದ್ದ ನೂರಾರು ಪ್ರವಾಸಿಗರು ದೋಣಿ ವಿಹಾರ ನಡೆಸಲಾಗದೆ ನಿರಾಸೆ ಅನುಭವಿಸಿದರು.
ಇದನ್ನೂ ಓದಿ:-Honnavar : ನಿಷೇಧದ ನಡುವೆ ಅಕ್ರಮ ಮರಳುಗಾರಿಕೆ
ಎರಡು ದಿನಗಳ ಹಿಂದೆ ಕಾಸರಕೋಡ ಕಾಂಡ್ಲಾ ವನಕ್ಕೆ ಪ್ರವಾಸಿಗರನ್ನು ಕರೆ ತಂದಿದ್ದ ಕಾರು ಚಾಲಕನೊಬ್ಬನ ಮೇಲೆ ದೋಣಿ ವಿಹಾರ ಉದ್ಯಮಕ್ಕೆ ಸಂಬಂಧಿಸಿದ ಮದ್ಯವರ್ತಿಗಳು ಹಲ್ಲೆ ನಡೆಸಿದ್ದರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರಿನ ಹಿನ್ನೆಲೆಯಲ್ಲಿ ನಡೆದ ತನಿಖೆಯ ವೇಳೆ ಕೆಲವು ದೋಣಿ(boat) ಮಾಲಿಕರು ದೋಣಿ ವಿಹಾರಕ್ಕೆ ಪಡೆದಿದ್ದ ಅನುಮತಿಯನ್ನು ನವೀಕರಿಸದಿರುವುದು ಬೆಳಕಿಗೆ ಬಂದಿತ್ತು. ಇದೇ ಘಟನೆಯನ್ನು ಆಧರಿಸಿ ತಾಲ್ಲೂಕು ಆಡಳಿತ ಬುಧವಾರ ದೋಣಿ ವಿಹಾರಕ್ಕೆ ತಾತ್ಕಾಲಿಕ ತಡೆಯೊಡ್ಡಿದೆ.
ಸಧ್ಯ ಈ ಭಾಗದಲ್ಲಿ ಯಾರು ಅನುಮತಿ ಪಡೆದಿದ್ದಾರೆ ಎಂಬುದನ್ನು ದೃಢೀಕರಿಸಿ ನಂತರ ದೋಣಿ ವಿಹಾರಕ್ಕೆ ಅವಕಾಶ ಕಲ್ಪಿಸಿಕೊಡಲು ತಾಲೂಕು ಆಡಳಿತ ನಿರ್ಧರಿಸಿದೆ.