Honnavar ಗೋ ಹತ್ಯೆ ಪ್ರಕರಣ ಶಂಕಿತರ ಐದು ಜನರ ಬಂಧನ| ಕಾಡು ಸುತ್ತಿದ SP,ASP
Honnavara news/ ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (honnavar)ಸಾಲ್ಕೋಡ ಗ್ರಾಮದಲ್ಲಿ ಗರ್ಭದರಿಸಿದ್ದ ಹಸು ತಲೆಕಡಿದು ಹತ್ಯೆಮಾಡಿ ಮಾಂಸ ಕೊಂಡೊಯ್ದ ಪ್ರಕರಣ ಸಂಬಂಧ ಮೂರು ದಿನದ ನಂತರ ಉತ್ತರ ಕನ್ನಡ ಹಾಗೂ ಉಡುಪಿ ಮೂಲದ ಶಂಕಿತ ಐದು ಜನರನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ತೀವ್ರತೆ ಅರಿತ ಪೊಲೀಸರು ಒಟ್ಟು ಆರು ತಂಡಗಳನ್ನು ಮಾಡಿ ತನಿಖೆ ಕೈಗೊಂಡಿದ್ದರು. ಇದಲ್ಲದೇ ಎಸ್.ಪಿ ಎಂ ನಾರಾಯಣ್ ,ಎ.ಎಸ್.ಪಿ ಜಗದೀಶ್ ಹೊನ್ನಾವರದಲ್ಲಿ ಮೊಕ್ಕಾಂ ಹೂಡಿದ್ದು, ಹೊನ್ನಾವರ ತಾಲೂಕಿನ ಸಾಲ್ಕೊಡ್, ಹಡಿನಬಾಳ, ಬಾಸ್ಕೇರಿ, ಕವಲಕ್ಕಿ ಭಾಗದಲ್ಲಿ ತಿವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು.
ಇದನ್ನೂ ಓದಿ:-Honnavara ಗರ್ಭಿಣಿ ಆಕಳು ರುಂಡ ,ಕಾಲು ಕಡಿದು ,ಕರುಹತ್ಯೆ ಮಾಡಿದ ದುರುಳರು!
ಇದಲ್ಲದೇ ಈ ಹಿಂದೆ ನಾಪತ್ತೆ ಆಗಿರುವ ಹಸುಗಳ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸದ್ಯ ಶಂಕಿತ ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತಿದ್ದು ಶೀಘ್ರದಲ್ಲೇ ತಪ್ಪಿತಸ್ಥರನ್ನು ಸೆರೆಹಿಡಿಯುವ ಭರವಸೆಯನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ರವರು ನೀಡಿದ್ದಾರೆ.