For the best experience, open
https://m.kannadavani.news
on your mobile browser.
Advertisement

Honnavar| ಮೇಲಾಧಿಕಾರಿ ಕಿರುಕುಳ| ಪತ್ನಿಜೊತೆ ಆತ್ಮಹತ್ಯೆ ಪತ್ರ ಬರೆದಿಟ್ಟು ಅರಣ್ಯ ಇಲಾಖೆ ಚಾಲಕ ನಾಪತ್ತೆ.

Honnavar: Forest department contract driver Manjunath Naik and his wife Veena Poojari have gone missing after leaving behind a suicide note alleging harassment by senior officers
02:28 PM Nov 27, 2025 IST | ಶುಭಸಾಗರ್
Honnavar: Forest department contract driver Manjunath Naik and his wife Veena Poojari have gone missing after leaving behind a suicide note alleging harassment by senior officers
honnavar  ಮೇಲಾಧಿಕಾರಿ ಕಿರುಕುಳ  ಪತ್ನಿಜೊತೆ ಆತ್ಮಹತ್ಯೆ ಪತ್ರ ಬರೆದಿಟ್ಟು ಅರಣ್ಯ ಇಲಾಖೆ ಚಾಲಕ ನಾಪತ್ತೆ

Honnavar| ಮೇಲಾಧಿಕಾರಿ ಕಿರುಕುಳ| ಪತ್ನಿಜೊತೆ ಆತ್ಮಹತ್ಯೆ ಪತ್ರ ಬರೆದಿಟ್ಟು ಅರಣ್ಯ ಇಲಾಖೆ ಚಾಲಕ ನಾಪತ್ತೆ.

Advertisement

ಹೊನ್ನಾವರ :- ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತು ಅರಣ್ಯ ಇಲಾಖೆಯ ಗುತ್ತಿಗೆ ನೌಕರ ಹಾಗೂ ಆತನ ಪತ್ನಿ ಆತ್ಮಹತ್ಯೆಯ ಪತ್ರ ಬರೆದಿಟ್ಟು ಕಾಣೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.

ಮಂಜುನಾಥ್ ನಾಯ್ಕ ಹಾಗೂ ಆತನ ಪತ್ನಿ ವೀಣಾ ಪೂಜಾರಿ ಆತ್ಮಹತ್ಯೆಯ ಪತ್ರ ಬರೆದಿಟ್ಟು ನಾಪತ್ತೆಯಾದವರಾಗಿದ್ದಾರೆ.

ಮಂಜುನಾಥ್ ನಾಯ್ಕ ಹೊನ್ನಾವರದ(honnavar) ಗೇರುಸೊಪ್ಪ ಅರಣ್ಯ ವಿಭಾಗದಲ್ಲಿ 2014 ರಲ್ಲಿ ಗುತ್ತಿಗೆ ಆಧಾರದಲ್ಲಿ ಗೇರುಸೊಪ್ಪ ವಿಭಾಗಕ್ಕೆ ಅರಣ್ಯ ಇಲಾಖೆಯ ವಾಹನ ಚಾಲಕನಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತಿದ್ದನು.

ಈತನಿಗೆ ಆರ್.ಎಫ್.ಓ ಕಾರ್ತೀಕ್ ಕಾಂಬ್ಳೆ  ಚಾಲಕನ ಕೆಲಸ ಬಿಟ್ಟು ಅಡುಗೆ ಕೆಲಸ ಮಾಡುವಂತೆ ಸೂಚಿಸಿದ್ದರು. ಚಾಲಕನ ಕೆಲಸ ಬಿಟ್ಟು ಅಡಿಗೆ ಕೆಲಸ ಮಾಡಲು ಒಪ್ಪದಿದ್ದಾಗ ಈತನಿಗೆ ಯಾವುದೇ ನಿಗದಿ ಕೆಲಸ ನೀಡದೇ ನಿರ್ಲಕ್ಷಿದಲಾಗಿತ್ತು.

Honnavar|ಕೆಪಿಟಿಸಿಎಲ್ ನೌಕರಿ ಕೊಡಿಸುವುದಾಗಿ 15 ಲಕ್ಷ ರೂ. ವಂಚನೆ: ನಾಲ್ಕು ವರ್ಷದ ನಂತರ ಇಬ್ಬರ ಬಂಧನ

ಇದರಿಂದ ಬೇಸತ್ತು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ನಾಗರಾಜ್ ರವರ ಗಮನಕ್ಕೆ ತಂದು ನಂತರ ಸಿಸಿಎಫ್ ಗಮನಕ್ಕೆ ತಂದು ಮತ್ತೆ ಚಾಲಕನ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು.ಆದೇರ ಪುನಹಾ ಕೆಲವು ದಿನಗಳ ನಂತರ ಆತನಿಗೆ ಅಡುಗೆ ಕೆಲಸ ಮಾಡುವಂತೆ  ಆರ್.ಎಫ್.ಓ ಕಾರ್ತೀಕ್ ಕಿರುಕುಳ ನೀಡಿದ್ದು ಈ ಸಂಬಂಧ ಡಿ.ಎಫ್.ಓ ಯೋಗೀಶ್ ರವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ .

ಇದರಿಂದ ಬೇಸತ್ತ ಮಂಜುನಾಥ್ ಹಾಗೂ ಆತನ ಪತ್ನಿ ವೀಣಾ ತಮ್ಮ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಆತ್ಮಹತ್ಯೆಯ ಪತ್ರ ಬರೆದಿಟ್ಟು ಕಾಣೆಯಾಗಿದ್ದಾರೆ. ಘಟನೆ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ