Honnavar |ಮನೆಕೆಲಸದಾಕೆ ಮುಂದೆ ಬೆತ್ತಲಾದ ಮನೆ ಮಾಲೀಕ-ದೂರು ದಾಖಲು
Honnavar |ಮನೆಕೆಲಸದಾಕೆ ಮುಂದೆ ಬೆತ್ತಲಾದ ಮನೆ ಮಾಲೀಕ-ದೂರು ದಾಖಲು
ಕಾರವಾರ :- ಮನೆ ಕೆಲಸದಾಕೆ ಮುಂದೆ ಬೆತ್ತಲಾಗಿ ಲೈಂಗಿಕತೆಗೆ ಕರೆದು ಆಕೆ ಒಪ್ಪದಿದ್ದಾಗ ಕಳ್ಳತನ ಆರೋಪ ಹೊರಿಸಿದ ಆರೋಪ ಸಂಬಂಧ ದೂರು ದಾಖಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ (honnavar)ಪ್ರಭಾತ್ ನಗರದಲ್ಲಿ ನಡೆದಿದೆ.
ನೊಂದ ಮಹಿಳೆ ವಿಡಿಯೋ ಸಮೇತ ಪೊಲೀಸರಿಗೆ ದೂರು ನೀಡಿದ್ದಾಳೆ.ಹೊನ್ನಾವರ ದ ಪ್ರದೀಪ್ ನಾಯ್ಕ ಲೈಂಗಿಕ ಶೋಷಣೆ ಮಾಡಿದ ಆರೋಪ ಹೊತ್ತ ವ್ಯಕ್ತಿಯಾಗಿದ್ದು ಈತ ಹೊನ್ನಾರದಲ್ಲಿ ಪ್ರದೀಪ್ ಸ್ಟೋರ್ ಎಂಬ ಏಜನ್ಸಿ ನಡೆಸುತಿದ್ದಾನೆ.
Honnavar ಹೊನ್ನಾವರ ಯುವಕನಿಗೆ ಚಾಕು ಇರಿತ ಪ್ರಕರಣ-ಇಬ್ಬರ ಬಂಧನ
ಈತನ ಪತ್ನಿ ಸಹ ಏಜೆನ್ಸಿ ನೋಡಿಕೊಳ್ಳುತ್ತಿರುವ ಕಾರಣ ಖಾಸಗಿ ಏಜನ್ಸಿ ಮೂಲಕ ಆಗಸ್ಟ್ 13 ರಂದು ಯಲ್ಲಾಪುರ ಮಹಿಳೆಯೊಬ್ಬಳನ್ನ ಅಡುಗೆ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದನು.
ಆಗಸ್ಟ್ 22 ರಂದು ಈತ ಮೊದಲಬಾರಿಗೆ ಕೆಲಸದಾಕೆ ಜೊತೆ ಕೆಟ್ಟದಾಗಿ ವರ್ತಿಸಿದ್ದಾನೆ. ನಂತರ ಈತ ಆಕೆಯ ಮುಂದೆ ಬೆತ್ತಲಾಗಿ ಓಡಾಡುವುದನ್ನು ಮಾಡಿದ್ದು , ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ .ಆದರೇ ಆಕೆ ಒಪ್ಪದೇ ಈತನ ಪತ್ನಿ ಶಶಿಕಲಾಗೆ ಮಾಹಿತಿ ನೀಡಿದ್ದಾಳೆ.
ಆದರೇ ಪ್ರದೀಪ್ ನಾಯ್ಕ ಅಡುಗೆ ಕೆಲಸದವಳ ಮೇಲೆ ಕಳ್ಳತನದ ಆರೋಪ ಹೊರಿಸಿದ್ದ. ಹೀಗಾಗಿ ಈತನ ಪತ್ನಿಯೂ ಸುಮ್ಮನಾಗಿದ್ದಳು.ಎಲ್ಲಿ ಪುನಹಾ ಬೆತ್ತಲಾಗಿ ಶೋಷಣೆಗೆ ಇಳಿದಾಗ ನೊಂದ ಕೆಲಸದಾಕೆ ಹೊನ್ನಾವರ ಠಾಣೆಯಲ್ಲಿ ಈತನ ವಿರುದ್ಧ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.ಸತ್ಯಾ ಸತ್ಯತೆ ತನಿಖೆಯಿಂದ ಬೆಳಕಿಗೆ ಬರಬೇಕಿದೆ.
ದೂರಿನಲ್ಲಿ ಏನಿದೆ?
ನನ್ನ ಜೀವನಕ್ಕಾಗಿ ನಾನು ಬೇರೆಯವರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ನನಗೆ ಹೊನ್ನಾವರದ ಫಾರೆಸ್ಟ ಕಾಲೋನಿಲಯನ್ಸ್ ಕ್ಲಬ್ ಎದುರು ಪ್ರಭಾತನಗರದ ನಿವಾಸಿಯಾದ ಪ್ರದೀಪ ಕೇಶವ ನಾಯ್ಕ ಎನ್ನುವವರ ಮನೆಯಲ್ಲಿ ಕೆಲಸಕ್ಕೆ ಕರೆದಿದ್ದು ಇರುತ್ತದೆ. ನಾನು ದಿನಾಂಕ: 13-08-2025 ರಿಂದ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು ಇರುತ್ತದೆ. ಅವರ ಮನೆಯಲ್ಲಿ ಅವರ ಹೆಂಡತಿ ******ಎನ್ನುವವರು ಸಹ ವಾಸವಾಗಿದ್ದು ಇರುತ್ತದೆ. ನಾನು ಅವರ ಮನೆಯಲ್ಲಿ ಉಳಿದು ಕೆಲಸ ಮಾಡಬೇಕು ಅಂತಾ ಹೇಳಿ ನೇಮಕ ಮಾಡಿಕೊಂಡಿದ್ದು ಇರುತ್ತದೆ. ನಾನು ದಿನಾಂಕ: 01-09-2025 ರವರೆಗೆ ಅವರ ಮನೆಯಲ್ಲಿ ಮದ್ಯಾಹ್ನ 2 ಗಂಟೆವರೆಗೆ ಕೆಲಸ ಮಾಡಿದ್ದು ಇರುತ್ತದೆ. ನಾನು ಅವರ ಮನೆಯಲ್ಲಿ ಕೆಲಸ ಮಾಡುವಾಗ ಕೆಲಸಕ್ಕೆ ಸೇರಿದ ಮಾರನೇ ದಿನದಿಂದ ಅಂದರೆ ದಿನಾಂಕ: 14-08-2025 ರಂದು ಸಂಜೆ 06-00 ಗಂಟೆಯಿಂದಲೂ ಪ್ರದೀಪ ಕೇಶವ ನಾಯ್ಕ ಇವರು ನನಗೆ ಅಶ್ಲೀಲವಾಗಿ ವರ್ತಿಸಿದ್ದು ಇರುತ್ತದೆ.
Honnavar| ಬೈಕ್ ಓವರ್ ಟೇಕ್ ವಿಚಾರ -ಹಿಂದೂ ಯುವಕನಿಗೆ ಮುಸ್ಲಿಂ ಯುವಕನಿಂದ ಮಾರಕಾಸ್ತ್ರದಿಂದ ಇರಿತ
ನನ್ನ ಎದುರು ಬೆತ್ತಲೆಯಾಗಿ ಓಡಾಡುವದು. ಅಸಂಬದ್ದ ವಿಷಯಗಳನ್ನು ಮಾತಾಡಿಸುವುದು, ಕೆಟ್ಟದಾಗಿ ನೋಡುವುದು ಮಾಡುತ್ತಾ ಬಂದಿದ್ದು ಇರುತ್ತದೆ. ಪ್ರದೀಪ ಕೇಶವ ನಾಯ್ಕ ಇವರು ನನಗೆ ಲೈಂಗಿಕ ಪ್ರಚೋದನೆ ಆಗುವಂತೆ ವರ್ತನೆ ಮಾಡುವುದು ಮಾಡುತ್ತಾ ಬಂದಿದ್ದು ಇರುತ್ತದೆ. ಈ ವರ್ತನೆಯಿಂದ ಬೇಸತ್ತು ನಾನು ಕೆಲಸ ಬಿಟ್ಟಿದ್ದು ಇರುತ್ತದೆ. ಪ್ರದೀಪ ಕೇಶವ ನಾಯ್ಕ ಇವರು ದಿನಾಂಕ: 22-08-2025 ರಂದು ಬೆಳಿಗ್ಗೆ 11-53 ಸಮಯದಲ್ಲಿ ನನ್ನ ಮುಂದೆ ಬೆತ್ತಲೆಯಾಗಿ ಓಡಾಡಿದ್ದು, ನನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು ಇರುತ್ತದೆ. ಅದೇ ದಿನ ಸಂಜೆ 06-58 ಗಂಟೆ ಸುಮಾರಿಗೆ ನನ್ನ ಎದುರು ಬೆತ್ತಲೆಯಾಗಿ ಓಡಾಡಿದ್ದು ಅದನ್ನು ಸಹ ಚಿತ್ರೀಕರಿಸಿದ್ದು ಇರುತ್ತದೆ. 01-09-2025 ರಂದು ಬೆಳಿಗ್ಗೆ 10-39 ಗಂಟೆಗೆ ನನ್ನ ಎದುರು ಬೆತ್ತಲೆಯಾಗಿ ಓಡಾಡಿದ ಬಗ್ಗೆ ಸಹ ಚಿತ್ರೀಕರಣ ಮಾಡಿದ್ದು ಇರುತ್ತದೆ.
ನಾನು ದಿನಾಂಕ: 01-09-2025 ರಂದು ಕೆಲಸ ಬಿಡುತ್ತಿರುವುದಾಗಿ ಹೇಳಿದಾಗ ಪ್ರದೀಪ ಕೇಶವ ನಾಯ್ಕ ನನ್ನ ಮೇಲೆ ಮನೆಯಲ್ಲಿ ಇಟ್ಟಿರುವ ರೂಪಾಯಿ 8000/- ಕಳ್ಳತನ ಆಗಿದೆ ಅಂತಾ ಸುಳ್ಳು ಕಳ್ಳತನ ಆರೋಪಿಸಿದ್ದು ಇರುತ್ತದೆ.
ಪ್ರದೀಪ ಕೇಶವ ನಾಯ್ಕ ಇವರು ನನ್ನ ಮುಂದೆ ಬೆತ್ತಲೆಯಾಗಿ ಓಡಾಡಿದ ಬಗ್ಗೆ ನನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು ಸಹ ಇರುತ್ತದೆ. ಈ ವಿಷಯವನ್ನು ಅವರ ಹೆಂಡತಿ ಶಶಿಕಲಾ ಇವರ ಗಮನಕ್ಕೂ ತಂದಿದ್ದು ಇರುತ್ತದೆ. ಕೆಲಸ ಮಾಡುವ ಸ್ಥಳದಲ್ಲಿ ಈ ರೀತಿ ವರ್ತನೆ, ಲೈಂಗಿಕ ದೌರ್ಜನ್ಯವಾಗಿದ್ದು ಇರುತ್ತದೆ. ಈ ವ್ಯಕ್ತಿ ಕೇವಲ ನನಗೆ ಅಷ್ಟೇ ಅಲ್ಲದೇ ಕೆಲಸಕ್ಕೆ ಬರುವವರ ಜೊತೆ ಈ ಮೇಲೆ ಹೇಳಿದ ವರ್ತನೆ ಮಾಡುವುದು ಮಾಡುತ್ತಾನೆ ಎನ್ನುವುದು ನನಗೆ ನಂತರ ತಿಳಿದು ಬಂದಿದ್ದು ಇರುತ್ತದೆ. ಕಾರಣ ಪ್ರದೀಪ ಕೇಶವ ನಾಯ್ಕ, ವಯಸ್ಸು ಅಂದಾಜು 45 ವರ್ಷ. ಉದ್ಯೋಗ: ವ್ಯಾಪಾರ, ವಾಸ: ಲಯನ್ಸ್ ಕ್ಲಬ್ ಎದುರು, ಫಾರೆಸ್ಟ ಕಾಲೋನಿ, ಪ್ರಭಾತನಗರ, ಹೊನ್ನಾವರ ಈತನ ಮೇಲೆ ಲೈಂಗಿಕ ದೌರ್ಜನ್ಯದ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ವಿನಂತಿ ಇದೆ.
(ನೊಂದ ಮಹಿಳೆಯ ಹೆಸರು ಗೌಪ್ಯವಾಗಿಡುವ ಕಾರಣ FIR ಪ್ರತಿಯನ್ನು ನೀಡಿಲ್ಲ. ಬದಲಿಗೆ ಆಕೆ ನೀಡಿದ ದೂರಿನ ಕೆಲವು ಮಾಹಿತಿ ಮಾತ್ರ ನೀಡಲಾಗಿದೆ)