ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Honnavar : ನಿಷೇಧದ ನಡುವೆ ಅಕ್ರಮ ಮರಳುಗಾರಿಕೆ 

09:24 PM Mar 29, 2025 IST | ಶುಭಸಾಗರ್

Honnavar : ನಿಷೇಧದ ನಡುವೆ ಅಕ್ರಮ ಮರಳುಗಾರಿಕೆ

Advertisement

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶರಾವತಿ ನದಿ ದಂಡೆಯಲ್ಲಿ ಅಕ್ರಮವಾಗಿ ಮರಳುಗಣಿಗಾರಿಕೆ ನಡೆಯುತ್ತಿದ್ದು ಅಧಿಕಾರಿಗಳು ಕ್ರಮತೆಗೆದುಕೊಳ್ಳುತ್ತಿಲ್ಲ. ಜಿಲ್ಲಾಧಿಕಾರಿ ಭೇಟಿ ಮಾಡಿ ಹೇಳಿದರೂ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ ಮಾಡಲಾಗುತ್ತಿದೆ ಎಂಬುದು ಸ್ಥಳೀಯರ ಆರೋಪಿಸಿದ್ದಾರೆ.

ಹೊನ್ನಾವರದ (Honnavar) ಪಡುಕುಳಿಯಲ್ಲಿ ರಾತ್ರಿ ಹಗಲು ಎನ್ನದೇ ನದಿಯಲ್ಲಿ ಮರಳನ್ನು ತೆಗೆಯಲಾಗುತ್ತಿದೆ. ಈ ಕುರಿತು ಗಣಿ ಇಲಾಖೆ,ಪೊಲೀಸರಿಗೆ ಸ್ಥಳದ ಚಿತ್ರಗಳು , ಲೊಕೇಶನ್ ಗಳನ್ನು ಸಹ ಕಳುಹಿಸಿ ಕ್ರಮ ಕೈಗೊಳ್ಳಲು ಸ್ಥಳೀಯರು ಮನವಿ ಮಾಡಿದ್ದರು.

ಆದರೇ ಯಾವ ಅಧಿಕಾರಿಗಳಾಗಲಿ,ತಹಶಿಲ್ದಾರ್ ಆಗಲಿ ಒಂದುಬಾರಿಯೂ ಈ ಅಕ್ರಮ ಮರಳನ್ನು ತೆಗೆಯದಂತೆ ತಡೆದು ಕ್ರಮ ಕೈಗೊಂಡಿಲ್ಲ.

Advertisement

ಇದನ್ನೂ ಓದಿ:-Honnavar: ಮಳೆ ಪರಿಹಾರ ನೀಡಲು ನಿರ್ಲಕ್ಷ -ಪಟ್ಟಣ ಪಂಚಾಯ್ತಿ ವಸ್ತುಗಳ ಜಪ್ತಿಗೆ ಕೋರ್ಟ ಆದೇಶ! ಮುಂದೇನಾಯ್ತು?

ಇನ್ನು ಅಕ್ರಮ ಮರಳು ದಂದೆಕೋರರು ಶರಾವತಿ ನದಿಯಲ್ಲಿ ದೋಣಿಗಳನ್ನು ತೆಗೆದುಕೊಂಡುಹೋಗಿ ಅಲ್ಲಿ ಯಂತ್ರಗಳನ್ನು ಬಳಸಿ ಮರಳನ್ನು ಸಂಗ್ರಹಿಸುತಿದ್ದಾರೆ.

ಇನ್ನು ರಾತ್ರಿವೇಳೆ ಮರಳನ್ನು ಸಾಗಿಸಲಾಗುತ್ತಿದೆ. ಇದರಿಂದಾಗ ರಾತ್ರಿ ಗ್ರಾಮದ ಜನ ನಿದ್ದೆ ಮಾಡದ ಪರಿಸ್ಥಿತಿ ಇದ್ದು ಲಾರಿಗಳ ಓಡಾಟ,ರಾತ್ರಿ ನದಿಯಲ್ಲಿನ ಇಂಜಿನ್ ಗಳ ಶಬ್ದ ದಿಂದ ಜನ ತೊಂದರೆಗೊಳಗಾಗಿದ್ದಾರೆ. ಒಂದುವೇಳೆ ಲಾರಿ ತಡೆದು ಏನಾದರೂ ಪ್ರಶ್ನಿಸಿದರೇ ಊರಿನವರ ಮೇಲೆ ಹಲ್ಲೆ ಮಾಡಲಾಗುತ್ತಿದೆ.

ಅಧಿಕಾರಿಗಳಿ ಧಮ್ಕಿ ! ರಾಜಕೀಯ ಪ್ರಭಾವ

ಇನ್ನು ಹೊನ್ನಾವರದ ಶರಾವತಿ ನದಿಯಲ್ಲಿ ಮರಳು ತೆಗೆಯುವುದನ್ನು ತಡೆಯಲು ಅಧಿಕಾರಿಗಳಿಂದಲೂ ಆಗುತ್ತಿಲ್ಲ.  ಕಳೆದ ವರ್ಷ ಏಪ್ರಿಲ್ 25 ರಂದು ಹೊನ್ನಾವರ ತಾಲೂಕಿನ ಅರೋಳಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಆಶಾ ರವರು ಅಕ್ರಮ ಮರಳು ದಂಧೆ ನಡೆಯುತಿದ್ದ ಸ್ಥಳಕ್ಕೆ ದಾಳಿ ನಡೆಸಿದ್ದು ಈ ವೇಳೆ 12 ಜನರ ತಂಡ ಅಧಿಕಾರಿಯ ಮೇಲೆ ದಾಳಿ ನಡೆಸಿದ್ದರು.

ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ  ಹೊನ್ನಾವರದ ತುಂಬೊಳ್ಳಿ ನಿವಾಸಿ ಜಗದೀಶ್ ನಾಯ್ಕ್, ಹೊನ್ನಾವರ ಪಟ್ಟಣದ ಮಂಜು ಶೆಟ್ಟಿ ಮತ್ತು ಮುರಳೀಧರ ಶೆಟ್ಟಿ, ನವೀನ್ ನಾಯ್ಕ್, ಮಹೇಶ್ ನಾಯ್ಕ್, ನಾಗರಾಜ ಮೇಸ್ತ, ಜಾಕಿ ಅಲ್ಮೇಡ, ಸುಬ್ರಹ್ಮಣ್ಯ ನಾಯ್ಕ್, ಪ್ರದೀಪ್ ನಾಯ್ಕ್, ಶೇಖರ್ ಗೌಡ, ವಿಶ್ವನಾಥ್ ವಿರುದ್ಧ  ದೂರು ದಾಖಲಿಸಿದ್ದರು.

ಇನ್ನು ಅಕ್ರಮ ಮರಳು ದಂಧೆ ಕೋರರಿಗೆ ರಾಜಕಾರಣಿಗಳ ಬೆಂಬಲ ಇದ್ದು ಅಧಿಕಾರಿಗಳು ಸಹ ಕೈ ಚಲ್ಲಿ ಕೂರುವಂತೆ ಮಾಡಿದೆ. ಇದರಿಂದಾಗಿ ಇದೀಗ ಯಾರ ಭಯವಿಲ್ಲದೇ ರಾತ್ರಿ ಹಗಲು ಎನ್ನುವಂತೆ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು ಕಡಿವಾಣ ಹಾಕದ ಸ್ಥಿತಿ ನಿರ್ಮಾಣವಾಗಿದೆ.

Advertisement
Advertisement
Next Article
Advertisement