For the best experience, open
https://m.kannadavani.news
on your mobile browser.
Advertisement

Honnavar|ಕೆಪಿಟಿಸಿಎಲ್ ನೌಕರಿ ಕೊಡಿಸುವುದಾಗಿ 15 ಲಕ್ಷ ರೂ. ವಂಚನೆ: ನಾಲ್ಕು ವರ್ಷದ ನಂತರ ಇಬ್ಬರ ಬಂಧನ

Promising a KPTCL SDA (Second Division Assistant) job, two accused cheated a resident by collecting ₹15 lakh and went absconding for four years. Honnavar Police successfully traced and arrested both suspects from Bengaluru after a special investigation team launched a search. Full details of the job scam case and police operation here.
11:58 AM Nov 25, 2025 IST | ಶುಭಸಾಗರ್
Promising a KPTCL SDA (Second Division Assistant) job, two accused cheated a resident by collecting ₹15 lakh and went absconding for four years. Honnavar Police successfully traced and arrested both suspects from Bengaluru after a special investigation team launched a search. Full details of the job scam case and police operation here.
honnavar ಕೆಪಿಟಿಸಿಎಲ್ ನೌಕರಿ ಕೊಡಿಸುವುದಾಗಿ 15 ಲಕ್ಷ ರೂ  ವಂಚನೆ  ನಾಲ್ಕು ವರ್ಷದ ನಂತರ ಇಬ್ಬರ ಬಂಧನ

Honnavar|ಕೆಪಿಟಿಸಿಎಲ್ ನೌಕರಿ ಕೊಡಿಸುವುದಾಗಿ 15 ಲಕ್ಷ ರೂ. ವಂಚನೆ: ನಾಲ್ಕು ವರ್ಷದ ನಂತರ ಇಬ್ಬರ ಬಂಧನ

Advertisement

ಕಾರವಾರ: ಇಂಧನ ಇಲಾಖೆಯಲ್ಲಿ (KPTCL) ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆ ಕೊಡಿಸುವುದಾಗಿ ನಂಬಿಸಿ, ವ್ಯಕ್ತಿಯೊಬ್ಬರಿಂದ ಬರೋಬ್ಬರಿ 15 ಲಕ್ಷ ರೂಪಾಯಿ ಪಡೆದು ವಂಚಿಸಿದ ಇಬ್ಬರು ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Honnavar| ಅಪ್ರಾಪ್ತ ಬಾಲಕಿ ಪುಸಲಾಯಿಸಿ ಯುವಕರಿಂದ ಅತ್ಯಾಚಾರ -ಗರ್ಭಿಣಿಯಾದ ಬಾಲಕಿ!

ನಾಲ್ಕು ವರ್ಷದ ಹಿಂದೆ ಈ  ಪ್ರಕರಣ ನಡೆದಿದ್ದು ಆರೋಪಿಗಳು ದೂರುದಾರರ ಅಕ್ಕನ ಮಗನಿಗೆ ಕೆಪಿಟಿಸಿಎಲ್ ಇಲಾಖೆಯಲ್ಲಿ ಸೆಕೆಂಡ್ ಡಿವಿಷನ್ ಕ್ಲರ್ಕ್ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದರು. ಇದನ್ನು ನಂಬಿದ ದೂರುದಾರರಿಂದ ಹಂತ ಹಂತವಾಗಿ ಬ್ಯಾಂಕ್ ಮೂಲಕ ಹಾಗೂ ನಗದು ರೂಪದಲ್ಲಿ ಒಟ್ಟು ಹದಿನೈದು ಲಕ್ಷ ಹಣವನ್ನು ಪಡೆದುಕೊಂಡಿದ್ದರು.

ಆದರೆ, ಹಣ ಪಡೆದ ನಂತರ ಆರೋಪಿಗಳು ಯಾವುದೇ ಕೆಲಸವನ್ನೂ ಕೊಡಿಸದೇ ಪಡೆದ ಹಣವನ್ನೂ ಮರಳಿಸದೇ ವಂಚಿಸಿದ್ದರು.ಕೆಲಸ ಸಿಗದೇ  ಹಣ ಮರಳಿ ಕೇಳಿದಾಗ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿತ್ತು. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ 2022 ರಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಹೊನ್ನಾವರ ಪೊಲೀಸರು, ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು. ಖಚಿತ ಮಾಹಿತಿಯ ಮೇರೆಗೆ ನವೆಂಬರ್ 15 ರಂದು ಬೆಂಗಳೂರಿಗೆ ತೆರಳಿದ ತಂಡವು ಇದೀಗ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದೆ.

ಬಂಧಿತರು ಉಡುಪಿ ಜಿಲ್ಲೆಯ ಕಾರ್ಕಳ ನಿವಾಸಿಯಾಗಿರುವ  ವಿಜಯ ಕುಮಾರ್ ಕೆ (44): ಬೆಂಗಳೂರಿನ ಬನಶಂಕರಿ ನಿವಾಸಿ ವಿಜಯ .ಸಿ (46)  ಬಂಧಿತ ಆರೋಪಿಗಳಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಹೊನ್ನಾವರ ಸಿಪಿಐ ಸಿದ್ದರಾಮೇಶ್ವರ ಎಸ್.ರವರ ನೇತ್ರತ್ವದಲ್ಲಿ ಎಎಸ್‌ಐ ಗಿರೀಶ ಶೆಟ್ಟಿ, ಸಿಬ್ಬಂದಿಗಳಾದ ಮನೋಜ ಡಿ, ರವಿ ನಾಯ್ಕ, ಗಜಾನನ ನಾಯ್ಕ, ವಿಠಲ ಗೌಡ ಮತ್ತು ಚಂದ್ರಶೇಖರ ನಾಯ್ಕ ಭಾಗಿಯಾಗಿದ್ದು ನಾಲ್ಕು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ