Honnavar| ಅಪ್ರಾಪ್ತ ಬಾಲಕಿ ಪುಸಲಾಯಿಸಿ ಯುವಕರಿಂದ ಅತ್ಯಾಚಾರ -ಗರ್ಭಿಣಿಯಾದ ಬಾಲಕಿ!
Honnavar| ಅಪ್ರಾಪ್ತ ಬಾಲಕಿ ಪುಸಲಾಯಿಸಿ ಯುವಕರಿಂದ ಅತ್ಯಾಚಾರ -ಗರ್ಭಿಣಿಯಾದ ಬಾಲಕಿ!
ಹೊನ್ನಾವರ (24 october 2025):-ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಮೂರು ಜನ ಯುವಕರು ಅಪ್ರಾಪ್ತ ಬಾಲಕಿಯನ್ನು ಪುಸುಲಾಯಿಸಿ ,ಲೈಂಗಿಕ ಕ್ರಿಯೆ ನಡೆಸಿದ ಘಟನೆ ಹೊನ್ನಾವರದಲ್ಲಿ (honnavar)ಬೆಳಕಿಗೆ ಬಂದಿದೆ.
ಘಟನೆ ಹಿನ್ನೆಲೆಯಲ್ಲಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಮೂವರು ಯುವಕರ ವಿರುದ್ಧ ಪೊಕ್ಸೋ ಕಾಯ್ದೆ ಯಡಿ ಪ್ರಕರಣ ದಾಖಲಾಗಿದೆ.
Honnavar|ಅನಧಿಕೃತ ವಿದೇಶಿ ಉದ್ಯೋಗ ನೇಮಕಾತಿ ಸಂಸ್ಥೆಯ ಮೇಲೆ ದಾಳಿ ದಾಖಲೆ ವಶ
ಪೊಲೀಸ್ ಮೂಲಗಳ ಪ್ರಕಾರ, ಅಪ್ರಾಪ್ತೆಯ ತಾಯಿ ಹೊನ್ನಾವರ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಆಧಾರದ ಮೇಲೆ, ಹೊನ್ನಾವರದ ಮಾವಿನ ಕುರ್ವಾ ಅಭಿ ಗೌಡ (22) ,ಕವಲಕ್ಕಿಯ ಹೇಮಂತ ನಾಯ್ಕ (21) ಗೇರುಸೊಪ್ಪದ ದೇವೇಂದ್ರ ನಾಯ್ಕ (26) ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Karnataka|ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಗೆ ಸಿದ್ದತೆ| ಏಷ್ಟು ಭೂಮಿ ಹೋಗಲಿದೆ ಗೊತ್ತಾ?
ದೂರಿನ ಪ್ರಕಾರ, ಸುಮಾರು ಎರಡು ತಿಂಗಳ ಹಿಂದೆ ಇನ್‌ಸ್ಟಾಗ್ರಾಂ ಮುಖಾಂತರ ಅಪ್ರಾಪ್ತೆಗೆ ಪರಿಚಯವಾದ ಅಭಿ ಗೌಡ ಎಂಬ ಯುವಕನು ತನ್ನ ಕಾರಿನಲ್ಲಿ ಅವಳನ್ನು ಮುಗಳಿ ಬೀಚ್‌ಗೆ ಕರೆದುಕೊಂಡು ಹೋಗಿ ಅಲ್ಲಿ ದೈಹಿಕ ಸಂಪರ್ಕ ಬೆಳಸಿದ್ದಾನೆ.
ನಂತರ ಹೇಮಂತ ನಾಯ್ಕ ಎಂಬ ಯುವಕನು ಸಹ ಮುರ್ಡೇಶ್ವರದ ಲಾಡ್ಜ್‌ನಲ್ಲಿ ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಾನೆ. ಇದೇ ವೇಳೆ ದೇವೇಂದ್ರ ನಾಯ್ಕ ಎಂಬ ಯುವಕನು ಕೂಡ ಮುರ್ಡೇಶ್ವರ ಲಾಡ್ಜ್ ಹಾಗೂ ಇಕೋ ಬೀಚ್‌ನಲ್ಲಿ ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಿದ್ದಾನೆ ಎಂಬ ವಿಷಯ ಹೊರಬಿದ್ದಿದೆ.
ಕೆಲವು ದಿನಗಳ ಹಿಂದೆ ಅಪ್ರಾಪ್ತೆಗೆ ಮಾಸಿಕ ಚಕ್ರ ಬಾರದ ಹಿನ್ನೆಲೆಯಲ್ಲಿ ತಾಯಿ ಪರೀಕ್ಷೆ ನಡೆಸಿದಾಗ ಗರ್ಭಧಾರಣೆ ದೃಢಪಟ್ಟಿದೆ. ವಿಚಾರಣೆ ವೇಳೆ ಅಪ್ರಾಪ್ತೆಯು ಮೂವರು ಆರೋಪಿತರ ವಿರುದ್ಧ ಹೇಳಿಕೆ ನೀಡಿದ್ದಾಳೆ.
ಪೊಲೀಸರು ಮೂವರ ವಿರುದ್ಧ ಪೊಕ್ಸೋ ಕಾಯ್ದೆ (Protection of Children from Sexual Offences Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿತರನ್ನು ಬಂಧಿಸಿ ತನಿಖೆ ಮುಂದುವಸಿದ್ದಾರೆ.