ONLINE TRADING FRAUD:ಕೋಟಿ ಆಸೆಗೆ 41 ಲಕ್ಷ ಕಳೆದುಕೊಂಡ ಹೊನ್ನಾವರ ವ್ಯಾಪಾರಿ
ONLINE TRADING FRAUD NEWS 27 October 2014 :- ಲೈನ್ ಟ್ರೇಡಿಂಗ್ ವಂಚನೆಗಳ ಬಗ್ಗೆ ಎಷ್ಟೇ ಜನರಿಗೆ ಜಾಗೃತಿ ಮೂಡಿಸಿದರೂ ದುಪ್ಪಟ್ಟು ಹಣದ ಆಸೆಗೆ ಹಣ ಕಳೆದುಕೊಳ್ಳುವವರ ಸಂಖ್ಯೆ ಏರುತ್ತಲೇ ಇದೆ.
ಹೌದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಯ ಕೃಷ್ಣಕಾಂತ್ ಎಂಬುವವರು ತಮ್ಮ ಮೊಬೈಲ್ ಗೆ ವಾಟ್ಸ್ ಅಪ್ ನಲ್ಲಿ Online Trading ಮಾಡುವ ಮೂಲಕ ಅತೀ ಹೆಚ್ಚು ಹಣ ಗಳಿಸಬಹುದೆಂಬ ಜಾಹಿರಾತನ್ನು ( advertisement) ಕಳುಹಿಸಿದ್ದನ್ನು ನೋಡಿ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ.
ಹೇಗೆ ವಂಚನೆಯಾಗಿದ್ದು?
ಇವರ ಟ್ರೇಡಿಂಗ್ ವ್ಯಾಲೆಟ್ ನಲ್ಲಿ ಹೆಚ್ಚು ಹಣ ಸಂಗ್ರಹವಾಗಿದ್ದು ತೋರಿಸಿದ್ದು, ಇದರ ಲಾಭ ಪಡೆದ ಸೈಬರ್ ವಂಚಕ ಹೆಚ್ಚಿನ ಹಣ ಹೂಡುವಂತೆ ನಂಬಿಸಿದ್ದಾರೆ.
ಇದನ್ನೂ ಓದಿ:-Honnavara| ಚಿರತೆ ದಾಳಿ ಬೋನು ಕಾಲಿ!
ಅಧಿಕ ಲಾಭ ಹೊಂದಿವ ಆಸಗೆ ಸೈಬರ್ ವಂಚಕ ಹೇಳಿದಂತೆ ಲಾಭಾಂಶದ ಹಣವನ್ನು 30 ದಿವಸದ ನಂತರ ನಗದೀಕರಣ ಮಾಡಿಕೊಂಡರೆ ಇನ್ನೂ ಹೆಚ್ಚಿನ ಲಾಭಾಂಶ ಕೊಡುವುದಾಗಿ ಆಮಿಶಕ್ಕೆ ಒಳಗಾಗಿ ಕೃಷ್ಣಕಾಂತ್ ವಂಚಕರು ಹೇಳಿದ ವಿವಿಧ ಬ್ಯಾಂಕ ಖಾತೆಗಳಿಗೆ ದಿನಾಂಕ: 08-09-2024 ರಿಂದ ದಿನಾಂಕ: 25-10-2024 ರವರೆಗೆ ಒಟ್ಟೂ ರೂ. 41,27,000-00 ಹಣವನ್ನು ಡಿಪಾಸಿಟ್ ಮಾಡಿದ್ದಾರೆ.
ನಂತರದಲ್ಲಿ ಕೃಷ್ಣ ರವರ ಟ್ರೇಡಿಂಗ್ ವ್ಯಾಲೇಟ್ ನಲ್ಲಿ ಒಟ್ಟೂ ರೂ. 1,60,00,000-00 ಹಣವು ಇರುವ ಬಗ್ಗೆ ಕಂಡು ಬಂದಿದ್ದು, ಈ ಹಣವನ್ನು ವಿತ್ ಡ್ರಾ ಮಾಡಲು ವಾಟ್ಸಪ್ ಗ್ರೂಪ್‌ನ ಅಡ್ಮಿನ್ ರವರಿಗೆ ಕೇಳಿದ್ದಾರೆ.
ಆದರೇ ಗ್ರೂಪ್ ಅಡ್ಮಿನ್ ಮಾಹಿತಿ ನೀಡದೇ ಸದರಿ ಗ್ರೂಪ್ ನಿಂದ ಕೃಷ್ಣಕಾಂತ್ ರನ್ನು ಬ್ಲಾಕ್ ಮಾಡಿದ್ದಲ್ಲದೇ , ವಾಟ್ಸಪ್ ಗ್ರೂಪ್ ನ್ನೂ ಸಹಾ ಡಿಲೀಟ್ ಮಾಡಿ ಹೂಡಿಕೆ ಮಾಡಿದ ರೂ. 41,27,000-00 ಹಣವನ್ನ ಎಗರಿಸಿ ವಂಚಿಸಿದ್ದಾರೆ.
ಈ ಕುರಿತು ಕಾರವಾರದ ಸೈಬರ್ ಕ್ರೈಂ ವಿಭಾಗದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
- Karwar:ಅರಣ್ಯ ಇಲಾಖೆ ನಿರ್ಲಕ್ಷ ದಿಕ್ಕು ಕಳೆದುಕೊಂಡ ಕಾಂಡ್ಲಾ ನಡಿಗೆ ಪಥ!
- HoneyTrap:ಮಾಲೀಕಯ್ಯ ಗುತ್ತೆದಾರ್ ಗೆ ಕಾಂಗ್ರೆಸ್ ನಾಯಕಿ ಹನಿಟ್ರ್ಯಾಪ್; 20 ಲಕ್ಷಕ್ಕೆ ಬೇಡಿಕೆಯಿಟ್ಟ ಮಹಿಳೆ ಪೊಲೀಸರ ವಶಕ್ಕೆ
- Mla sathish sail ಗೆ ಶಿಕ್ಷೆ ಪ್ರಕಟ ಎಷ್ಟು ವರ್ಷ ವಿವರ ಇಲ್ಲಿದೆ.
- SIRSI :ಸಿದ್ದರಾಮಯ್ಯನವರನ್ನು ಯಾರೂ ಇಳಿಸಲು ರಡಿ ಇಲ್ಲ. -ಸಚಿವ ಮಧು ಬಂಗಾರಪ್ಪ
- SIRSI :ಮನೆ ಕಳ್ಳತನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ! ಇವರು ಅಂತಿಂತ ಕಳ್ಳರಲ್ಲ!