Honnavara ಗರ್ಭಿಣಿ ಆಕಳು ರುಂಡ ,ಕಾಲು ಕಡಿದು ,ಕರುಹತ್ಯೆ ಮಾಡಿದ ದುರುಳರು!
ಕಾರವಾರ :-ಹಸುವಿನ ಕೆಚ್ಚಲು ,ಬಾಲ ಕಡಿದು ವಿಕೃತಿ ಮೆರದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಗರ್ಭಿಣಿ ಹಸುವಿನ ತಲೆ ಕಾಲು ಕಡಿದುಹಾಕಿ ,ಕರುವನ್ನು ಸಹ ಹತ್ಯೆ ಮಾಡಿದ ಮತ್ತೊಂದು ಅಮಾನವೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ (honnavara) ಸಾಲ್ಕೋಡು ಗ್ರಾಮದ ಕೊಂಡಕುಳಿಯಲ್ಲಿ ನಡೆದಿದೆ
02:19 PM Jan 19, 2025 IST | ಶುಭಸಾಗರ್
Honnavara news:-ಹಸುವಿನ ಕೆಚ್ಚಲು ,ಬಾಲ ಕಡಿದು ವಿಕೃತಿ ಮೆರದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಗರ್ಭಿಣಿ ಹಸುವಿನ ತಲೆ ಕಾಲು ಕಡಿದುಹಾಕಿ ,ಹೊಟ್ಟೆಯಲ್ಲಿದ್ದ ಕರುವನ್ನು ಸಹ ಹತ್ಯೆ ಮಾಡಿದ ಮತ್ತೊಂದು ಅಮಾನವೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ (honnavara) ಸಾಲ್ಕೋಡು ಗ್ರಾಮದ ಕೊಂಡಕುಳಿಯಲ್ಲಿ ನಡೆದಿದೆ.
Advertisement
ಇದನ್ನೂ ಓದಿ:-Honnavara | ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಇಬ್ಬರು ಸಾವು
ಕೊಂಡಕುಳಿಯ ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಹಸುವಾಗಿದ್ದು ,ನಿನ್ನೆ ದಿನ ಮೇವಿಗಾಗಿ ಹೊರಕ್ಕೆ ಬಿಟ್ಟಿದ್ದರು .

ರಾತ್ರಿ ಹಸುವು ಮನೆಗೆ ಬರದ ಹಿನ್ನೆಲೆಯಲ್ಲಿ ಇಂದು ಬೆಳಗಿನಿಂದ ಹುಡುಕಾಡಿದ್ದು ,ಹಸುವಿನ ತಲೆ ಕಡಿದಿ ಕಾಲು ತುಂಡರಿಸಿ ದೇಹದ ಭಾಗಮಾತ್ರ ಒಯ್ಯಲಾಗಿದ್ದು ,ಹಸುವಿನ ಗರ್ಭದಲ್ಲಿದ್ದ ಕರುವನ್ನು ಸಹ ಹತ್ಯೆ ಮಾಡಲಾಗಿದೆ.ಇವರ ಕ್ರೌರ್ಯ ಎಷ್ಟಿದೆಯೆಂದರೇ ಕರುವಿನ ಹೊಟ್ಟೆಸಹ ಸೀಳಿದ್ದಾರೆ. ಇದನ್ನು ನೋಡಿದ ಮಾಲೀಕ ಕೂಡ ಶಾಕ್ ಆಗಿದ್ದು ಹೊನ್ನಾವರ(honnavara) ಠಾಣೆಗೆ ದೂರು ನೀಡಿದ್ದಾರೆ.
Advertisement