For the best experience, open
https://m.kannadavani.news
on your mobile browser.
Advertisement

Honnavara | ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಇಬ್ಬರು ಸಾವು

Honnavara news:- ಉತ್ತರ ಕನ್ನಡ ಜಿಲ್ಲೆಯ (uttarakannda) ಹೊನ್ನಾವರ(Honnavara) ತಾಲೂಕಿನ ಗೇರುಸೊಪ್ಪ ಸಾಗರ ರಸ್ತೆಯ ಸುಳಿಮುರ್ಖಿ ತಿರುವು ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾಗಿದೆ.
08:58 AM Jan 06, 2025 IST | ಶುಭಸಾಗರ್
honnavara   ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಇಬ್ಬರು ಸಾವು

Honnavara news:- ಉತ್ತರ ಕನ್ನಡ ಜಿಲ್ಲೆಯ (uttarakannda) ಹೊನ್ನಾವರ(Honnavara) ತಾಲೂಕಿನ ಗೇರುಸೊಪ್ಪ ಸಾಗರ ರಸ್ತೆಯ ಸುಳಿಮುರ್ಖಿ ತಿರುವು ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾಗಿದೆ.

Advertisement

ಪಲ್ಟಿಯಾದ ರಭಸಕ್ಕೆ ಲಾರಿಯಲ್ಲಿ ಇದ್ದ ಇಬ್ಬರು ಮೃತಪಟ್ಟಿದ್ದಾರೆ.ಲಾರಿಯಲ್ಲಿ ಆರು ಜನರು ಪ್ರಯಾಣಿಸುತಿದ್ದರು.

ಈ ಘಟನೆ ಸೋಮವಾರ ಮುಂಜಾನೆ ನಡೆದಿದ್ದು , ಕಬ್ಬಿಣದ ಆಟದ ಸಾಮಾನುಗಳನ್ನು ತುಂಬಿಕೊಂಡು ಸಾಗರ ಭಾಗದಿಂದ ಹೊನ್ನಾವರ ಕಡೆ ಬರುತಿತ್ತು.

ಅತೀ ವೇಗದ ಚಾಲಬೆಯೇ ಲಾರಿ ಪಲ್ಟಿಯಾಗಲು ಕಾರಣ ಎನ್ನಲಾಗಿದೆ.

ಇದನ್ನೂ ಓದಿ:-Honnavara ಬೈಕ್ ಮತ್ತು KSRTC ಬಸ್ ನಡುವೆ ಅಪಘಾತ ಮಾರು ಜನರ ಸಾವು

ಮೃತರು ಮತ್ತು ಗಾಯಳು ಮೂಲತ ಬಿಹಾರ ರಾಜ್ಯದವರು ಎಂದು ತಿಳಿದುಬಂದಿದೆ. ವಾಹನದಲ್ಲಿದ್ದ 06 ಜನರಲ್ಲಿ ಇಬ್ಬರು ಮೃತ ಪಟ್ಟಿದ್ದು, ಮೂವರು ಗಾಯಗಳಾಗಿವೆ .

ಹೊನ್ನಾವರದ ತಾಲೂಕ ಸರಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ