For the best experience, open
https://m.kannadavani.news
on your mobile browser.
Advertisement

Honnavara: ಉಕ್ಕಿ ಹರಿದ ಬಡಗಣಿ ನದಿ - ರೈತರ ಬೆಳೆ ಉಪ್ಪು ನೀರುಪಾಲು

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಬಡಗಣಿ ನದಿ (river)ಉಕ್ಕಿದ ಪರಿಣಾಮ ಕಳೆದ ನಾಲ್ಕು ದಿನದಿಂದ ನದಿ ಪಾತ್ರದ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತಿದೆ. ಇದರಿಂದ ಅಲ್ಲಿ ಬೆಳೆದ ಫಸಲು ಹಾಳಾಗುತ್ತಿದೆ.
10:22 PM Mar 04, 2025 IST | ಶುಭಸಾಗರ್
honnavara  ಉಕ್ಕಿ ಹರಿದ ಬಡಗಣಿ ನದಿ   ರೈತರ ಬೆಳೆ ಉಪ್ಪು ನೀರುಪಾಲು

Honnavara: ಉಕ್ಕಿ ಹರಿದ ಬಡಗಣಿ ನದಿ - ರೈತರ ಬೆಳೆ ಉಪ್ಪು ನೀರುಪಾಲು

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

Honnavar news :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ(Honnavar) ಬಡಗಣಿ ನದಿ (river)ಉಕ್ಕಿದ ಪರಿಣಾಮ ಕಳೆದ ನಾಲ್ಕು ದಿನದಿಂದ ನದಿ ಪಾತ್ರದ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತಿದೆ. ಇದರಿಂದ ಅಲ್ಲಿ ಬೆಳೆದ ಫಸಲು ಹಾಳಾಗುತ್ತಿದೆ.

ಕಳೆದ ನಾಲ್ಕು ದಿನದಿಂದ ಜಿಲ್ಲೆಯ ಕರಾವಳಿ ಭಾಗದಲ್ಲಿ ಭರತದಿಂದ ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ನೀರು ನುಗ್ಗುತ್ತಿದೆ. ಹಳದಿಪುರ ಭಾಗದಲ್ಲಿ ಬಡಗಣಿಯಿಂದ ಸಾಲಿಕೇರಿಯವರೆಗೆ ಗದ್ದೆಗಳಲ್ಲಿ ಸಮುದ್ರದ ಭರತದಿಂದ ಉಪ್ಪು ನೀರು ನುಗ್ಗಿದ ಪರಿಣಾಮವಾಗಿ ಶೇಂಗಾ ಬೆಳೆ ಸಂಪೂರ್ಣವಾಗಿ ನೆಲ ಕಚ್ಚಿದೆ. ಇದರಿಂದ ಆ ಭಾಗದ ರೈತರು ಕಂಗಾಲಾಗಿದ್ದಾರೆ.

ಕೃಷಿ ಜಮೀನಿಗೆ ಉಪ್ಪು ನೀರು ನುಗ್ಗದಂತೆ ತಡೆಯಲು 50 ಲಕ್ಷ ರೂಪಾಯಿ ವೆಚ್ಚದಲ್ಲಿ 2022ರಲ್ಲಿ ತಡೆಗೋಡೆ ನಿರ್ಮಾಣಕ್ಕೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದ್ದರು. ಚಿಕ್ಕ ನೀರಾವರಿ ಇಲಾಖೆ ತಡೆಗೋಡೆ ಕಾರ್ಯ ಪ್ರಾರಂಭಿಸಿ 3 ವರ್ಷ ಗತಿಸಿದರೂ ಕಾಮಗಾರಿ ಪೂರ್ಣಗೊಳಿಸಿಲ್ಲ.

ಇದನ್ನೂ ಓದಿ:- Honnavar :ವಿದ್ಯುತ್ ಷಾರ್ಟ ಸೆರ್ಕ್ಯೂಟ್ ಲಾರಿ ಜೊತೆ ಹೊತ್ತಿ ಉರಿದ ಗುಜರಿ ಸಾಮಾನು|ವಿಡಿಯೋ ನೋಡಿ

ಇದೀಗ ಸಮುದ್ರದ ಉಬ್ಬರದಿಂದ ನದಿ ಪಾತ್ರದ ತಗ್ಗು ಪ್ರದೇಶಕ್ಕೆ ಉಪ್ಪು ಮಿಶ್ರಿತ ನೀರು ನುಗ್ಗುತ್ತಿದೆ.
ಅಪೂರ್ಣ ಹಾಗೂ ಕಳಪೆ ಕಾಮಗಾರಿಯಿಂದ ತಮ್ಮ ಬೆಳೆಗಳು ಹಾನಿಯಾಗಿದೆ. ಈಗಾಗಲೇ ತಡೆಗೋಡೆ ಹಲವು ಕಡೆ ಬಿರುಕು ಬಿಟ್ಟಿದ್ದು ಮಳೆಗಾಲದಲ್ಲಿ ನೀರಿನ ರಭಸಕ್ಕೆ ಸಂಪೂರ್ಣವಾಗಿ ಕೊಚ್ಚಿ ಹೋಗುವ ಸಾಧ್ಯತೆಗಳಿವೆ. ಈ ಬಗ್ಗೆ ಚಿಕ್ಕ ನೀರಾವರಿ ಅಧಿಕಾರಿಗಳಿಗೆ ಸಾಕಷ್ಟು ಸಲ ಫೋನ್ ಮಾಡಿದರೂ ಸ್ವೀಕರಿಸುತ್ತಿಲ್ಲ ಎಂಬುದು ರೈತರ ದೂರಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ