For the best experience, open
https://m.kannadavani.news
on your mobile browser.
Advertisement

Honnavara ಬಂದರು ಪ್ರತಿಭಟನೆ - 50 ಮೀನುಗಾರರ ಬಂಧನ

ಕಾರವಾರ :- ಉತ್ತರ ಕನ್ನಡ (uttara kannda) ಜಿಲ್ಲೆಯ ಹೊನ್ನಾವರದ(Honnavara) ಕಾಸರಕೋಡ ದಲ್ಲಿ ಇಂದು ನಡೆದ ಬಂದರು ರಸ್ತೆ ನಿರ್ಮಾಣದ ಸರ್ವೆ ಕಾರ್ಯ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ 50 ಜನರನ್ನು ಬಂಧಿಸಿರುವುದಾಗಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್ ತಿಳಿಸಿದ್ದಾರೆ.
08:28 PM Feb 25, 2025 IST | ಶುಭಸಾಗರ್
honnavara ಬಂದರು ಪ್ರತಿಭಟನೆ   50 ಮೀನುಗಾರರ ಬಂಧನ
Honnavara news

Honnavara ಬಂದರು ಪ್ರತಿಭಟನೆ - 50 ಮೀನುಗಾರರ ಬಂಧನ

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ಉತ್ತರ ಕನ್ನಡ (uttara kannda) ಜಿಲ್ಲೆಯ ಹೊನ್ನಾವರದ(Honnavara) ಕಾಸರಕೋಡ ದಲ್ಲಿ ಇಂದು ನಡೆದ ಬಂದರು ರಸ್ತೆ ನಿರ್ಮಾಣದ ಸರ್ವೆ ಕಾರ್ಯ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ 50 ಜನರನ್ನು ಬಂಧಿಸಿರುವುದಾಗಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್ ತಿಳಿಸಿದ್ದಾರೆ.

ಇದನ್ನೂ ಓದಿ:-Honnavara: ಪ್ರತ್ತೇಕ ಅಪಘಾತ 12 ಜನರಿಗೆ ಗಾಯ

ಈ ಕುರಿತು ಮಾತನಾಡಿದ ಅವರು ಬಂದರು ಇಲಾಖೆಯ ಜಾಗದಲ್ಲಿ ಅನಧಿಕೃತ ಹೋಮ್ ಸ್ಟೇಗಳು,ಹೋಟಲ್ ಗಳನ್ನು ಮಾಡಿದ್ದಾರೆ, ಅಕ್ರಮವಾಗಿ ಮನೆಗಳ ನಿರ್ಮಾಣ ಆಗಿದೆ. ಇವುಗಳನ್ನು ತೆರವು ಮಾಡಿ ರಸ್ತೆ ನಿರ್ಮಾಣ ಮಾಡಬೇಕಿದೆ. ಕಳೆದ 10 ವರ್ಷದಿಂದ ಸರ್ವೆ ಕಾರ್ಯ ಪ್ರತಿಭಟನೆಯಿಂದ ವಿಳಂಬವಾಗಿತ್ತು .ಹೀಗಾಗಿ ಕಲಂ 163 ನಡಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಇಂದು ಏಕಾ ಏಕಿ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳನ್ನು ಸಹ ಬಳಸಿಕೊಳ್ಳಲಾಗಿತ್ತು.

ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ 35 ರಿಂದ 50 ಜನರನ್ನು ವಶಕ್ಕೆ ಪಡೆದಿದ್ದೇವೆ, ಐದು ಪ್ರತ್ತೇಕ  ಪ್ರಕರಣವನ್ನು ದಾಖಲು ಮಾಡಲಾಗಿದೆ. ಶಾಲಾ ಮಕ್ಕಳಿಗೆ ಪ್ರಚೋಧನೆ ಮಾಡಿ ಪ್ರತಿಭಟನೆಗೆ ಬರುವಂತೆ ಮಾಡಿದವರ ವಿರುದ್ಧ ಪ್ರತ್ತೇಕ ಪ್ರಕರಣ ದಾಖಲಿಸಲಿದ್ದೇವೆ

ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ , ಬಿಎನ್.ಎಸ್ ಕಲಂ 163 ಉಲ್ಲಂಘನೆ, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ತಪ್ಪು ಸಂದೇಶ ಹಬ್ಬಿಸಿದವರ ವಿರುದ್ಧ ಪ್ರತ್ತೇಕ ಪ್ರಕರಣ ದಾಖಲು ಮಾಡುತ್ತೇವೆ ಎಂದರು.

ಇನ್ನು ಸರ್ವೆ ಮಾಡಿ ಮುಗಿಸಲಾಗಿದೆ, ನಾಳೆಯೂ ಹೊನ್ನಾವರ ದ ಕಾಸರಕೋಡಿನಲ್ಲಿ ನಿಷೇಧಾಜ್ಞೆ ಮುಂದುವರೆಯಲಿದೆ, ಸರ್ವೆ ಮಾಡಿ ಫೋಲ್ ಗಳನ್ನು ಹಾಕಲಾಗಿದೆ. ಈ ಫೋಲ್ ಗಳನ್ನು ತೆಗೆಯುವವರ ವಿರುದ್ಧವು ಕ್ರಮ ಜರುಗಿಸುತ್ತೇವೆ ಎಂದು ಹೊನ್ನಾವರದಲ್ಲಿ ಎಸ್.ಪಿ ಎಂ ನಾರಾಯಣ್ ಹೇಳಿದರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ