ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

HOSANAGARA: ಕುಸಿದ ದರೆ ರಸ್ತೆಯಲ್ಲಿ ಬಿರುಕು ಸಂಚಾರಕ್ಕೆ ತಂತು ಕಂಟಕ!

HOSANAGARA NEWS 18 November 2024:-  ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ (Rain) ಹಲವು ಅನಾಹುತಗಳು ಸೃಷ್ಟಿಯಾಗಿದೆ. ಇದೀಗ ಜಿಲ್ಲೆಯ ಹೊಸನಗರ(Hosanagara) ತಾಲೂಕಿನ ಹೊಸನಗರ- ಸಾಗರ ರಸ್ತೆಯ ಪುರಪ್ಪೆಮನೆ ಭಾಗದ ಅಪ್ಪೆಮನೆ ಗ್ರಾಮದ ರಸ್ತೆ ಭಾಗದಲ್ಲಿ ಮಳೆಯಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಬಂದು ದರೆ ಕುಸಿತವಾಗಿದೆ.
01:59 PM Nov 18, 2024 IST | ಶುಭಸಾಗರ್

HOSANAGARA NEWS 18 November 2024:-  ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ (Rain) ಹಲವು ಅನಾಹುತಗಳು ಸೃಷ್ಟಿಯಾಗಿದೆ. ಇದೀಗ ಜಿಲ್ಲೆಯ ಹೊಸನಗರ(Hosanagara) ತಾಲೂಕಿನ ಹೊಸನಗರ- ಸಾಗರ ರಸ್ತೆಯ ಪುರಪ್ಪೆಮನೆ ಭಾಗದ ಅಪ್ಪೆಮನೆ ಗ್ರಾಮದ ರಸ್ತೆ ಭಾಗದಲ್ಲಿ ಮಳೆಯಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಬಂದು ದರೆ ಕುಸಿತವಾಗಿದೆ.

Advertisement

ಇದರಿಂದಾಗಿ ದಲಿತ ಕಾಲೂನಿಗೆ ಸಂಪರ್ಕಿಸುವ ಸಿಮೆಂಟ್ ರಸ್ತೆ ಬಿರುಕು ಮೂಡಿದೆ.ಅಪ್ಪೆ ಮನೆಗೆ ಗ್ರಾಮದ ರಸ್ತೆ ಇದಾಗಿದ್ದು ಸಮಾರು 900 ಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮದ ರಸ್ತೆ ಬಿಳಗೋಡಿ, ತಾರನಬೈಲು,ಹುಣಸೆ ಕೊಪ್ಪಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಇದನ್ನೂ ಓದಿ:-Sagar: ಆನಂದಪುರದಲ್ಲಿ ಅಪಘಾತ ಇಬ್ಬರು ಸಾವು.

ರಸ್ತೆ ಯ ಒಂದು ಭಾಗ ಬಿರುಕು ಬಿಟ್ಟಿದ್ದು ಪಕ್ಕದಲ್ಲಿರುವ ದರೆ ಕುಸಿತವಾಗಿದೆ. ಹೆಚ್ಚಿನ ಮಳೆಯಾದರೇ ನೀರು ಹೆಚ್ಚಾಗಿ ಹರಿದುಬಂದು ಕುಸಿತ ಹೆಚ್ಚಾಗಲಿದ್ದು ಯಾವ ಸಂದರ್ಭದಲ್ಲಾದರೂ ರಸ್ತೆ ಕುಸಿಯುವ ಹಂತದಲ್ಲಿದೆ.

Advertisement

ಗ್ರಾಮದ ಜನರಿಂದ ಮನವಿ.

ಪ್ರತಿನಿತ್ಯ ನೂರಾರು ಜನ ಈ ರಸ್ತೆ ಮೂಲಕ ಸಾಗರ ಹಾಗೂ ಇತರೆ ಭಾಗಕ್ಕೆ ಸಂಚರಿಸುತ್ತಾರೆ. ಸಂಚಾರದ ಸಂದರ್ಭದಲ್ಲಿ ಕುಸಿದರೆ ಸಾವುನೋವುಗಳಾಗಿವ ಸಂದರ್ಭಗಳಿವೆ. ಹೀಗಾಗಿ ರಸ್ತೆ ಕುಸಿಯದಂತೆ ತಡೆಗೋಡೆ ನಿರ್ಮಿಸಿ ನೀರು ಸರಾಗವಾಗಿ ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯ ಶಾಸಕರಿಗೆ ಹಾಗೂ ಗ್ರಾಮಪಂಚಾಯ್ತಿ ಗೆ ಮನವಿ ನೀಡಿದ್ದಾರೆ.

ಆದರೇ ತಡೆಗೋಡೆ ನಿರ್ಮಿಸಲು ಅನುದಾನದ ಕೊರತೆ ಎದುರಾದರೇ ಗ್ರಾಮಪಂಚಾಯ್ತಿ ಇಂದಲೂ ಸಹ ನಿರ್ಲಕ್ಷ ಮಾಡಲಾಗಿದೆ.

ಹೀಗಾಗಿ SDRF ನಿಧಿಯಿಂದಲಾದರೂ ಇಲ್ಲೊಂದು ತಡೆಗೋಡೆ ನಿರ್ಮಿಸಿಕೊಡಬೇಕು ಎಂಬುದು ಗ್ರಾಮದ ಜನರ ಆಗ್ರಹ.

Advertisement
Tags :
Hosanagara newsKarnatakaland slidespurappe maneroad crackShivamogga
Advertisement
Next Article
Advertisement