Goa liquor:ಅಕ್ರಮ ಗೋವಾ ಮದ್ಯ ಮಾರಾಟ ಹಳಿಯಾಳ ಪೊಲೀಸ್ ಕಾನಸ್ಟೇಬಲ್ ಬಂಧನ
ಅಕ್ರಮ ಗೋವಾ ಮದ್ಯ ಮಾರಾಟ ಹಳಿಯಾಳ ಪೊಲೀಸ್ ಕಾನಸ್ಟೇಬಲ್ ಬಂಧನ

ಕಾರವಾರ :- ಗೋವಾದಿಂದ ಅಕ್ರಮವಾಗಿ ಗೋವಾ ಮದ್ಯವನ್ನು (goa liquor) ಶಿವಮೊಗ್ಗ ಹಾಗೂ ಮಂಡ್ಯಕ್ಕೆ ಸಾಗಾಟಮಾಡುತಿದ್ದ ಪೊಲೀಸ್ ಕಾನಸ್ಟೆಬಲ್ ಸೇರಿ ಇಬ್ಬರನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಪೊಲೀಸರು (police)ಮಾಲು ಸಮೇತ ಬಂಧಿಸಿದ ಘಟನೆ ಅಂಕೋಲದರಾಷ್ಟ್ರೀಯ ಹೆದ್ದಾರಿ 66 ಹಟ್ಟಿಕೇರಿ ಟೋಲ್ ಗೇಟ್ ಬಳಿ ನಡೆದಿದೆ.

ಬಂಧಿತ ವ್ಯಕ್ತಿ ಹಳಿಯಾಳದ (Haliyala)ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಸಂತೋಷ್ ಲಮಾಣಿ, ಮಂಡ್ಯದ ದಿವಾಕರ್ ಆರ್.ಈರಯ್ಯ ಕೃಷ್ಣಪ್ಪ (40) ಬಂಧಿತ ಆರೋಪಿಗಳಾಗಿದ್ದು ಓರ್ವ ಪರಾರಿಯಾಗಿದ್ದಾನೆ. ಬಂಧಿತರಿಂದ 80 ಸಾವಿರ ಮೌಲ್ಯದ ಗೋವಾ ಮದ್ಯ ಹಾಗೂ ಕೃತ್ಯಕ್ಕೆ ಬಳಸಿದ ಷಿಪ್ಟ್ ಕಾರನ್ನು ವಶಕ್ಕೆ ಪಡೆಯಲಾಗಿದೆ. ಕಾನಸ್ಟೇಬಲ್ ಸಂತೋಷ್ ಲಮಾಣಿ ಈ ಹಿಂದೆ ಗೋವಾ ದಿಂದ ಗೋಕರ್ಣಕ್ಕೆ(Gokarna) ಅಕ್ರಮವಾಗಿ ಗೋವಾ ಮದ್ಯ ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದಿದ್ದು ಜಾಮೀನಿನ ಮೇಲೆ ಹೊರಬಂದಿದ್ದನು.
ಇದನ್ನೂ ಓದಿ:-Ankola police ಕಾರ್ಯಾಚರಣೆ:ಬೇಲಿಕೇರಿಯಲ್ಲಿ ಮಹಿಳೆಗೆ ಬಲವಂತವಾಗಿ ವೇಷ್ಯಾವಾಟಿಕೆ ದಂಧೆಗೆ ತೊಡಗಿಸಿದವರ ಬಂಧನ
ಅಮಾನತು ಗೊಂಡಿದ್ದ ಈತನನ್ನು ಹಳಿಯಾಳ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಆದರೂ ಅಕ್ರಮ ಗೋವಾ ಮದ್ಯ ಸಾಗಾಟ ಮಾಡುವ ಕೆಲಸ ಕೈಬಿಡದ ಈತ ಗೋವಾದಿಂದ ಮಾಜಾಳಿಗೆ ಬರುವಾಗ ಅಬಕಾರಿ,ಪೊಲೀಸ್ ಚಕ್ ಪೋಸ್ಟ್ ನನ್ನು ಹ್ಯಾಮಾರಿಸಿ ಶಿವಮೊಗ್ಗ ,ಮಂಡ್ಯಕ್ಕೆ ಈ ಮದ್ಯವನ್ನು ತೆಗೆದುಕೊಂಡುಹೋಗುತ್ತಿರುವ ವೇಳೆ ಕಚಿತ ಮಾಹಿತಿ ಆಧರಿಸಿ ಈ ದಾಳಿ ನಡೆದಿದೆ. ಘಟನೆ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:-ಗೋಕರ್ಣದಲ್ಲಿ ಮೋಜು ಮಸ್ತಿ ಮಾಡಿದ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಮಾಡುವ ಶಿಕ್ಷೆ ನೀಡಿದ ಆರಕ್ಷಕರು