India news| ಮಕ್ಕಳನ್ನು ಕೊಲ್ಲುತ್ತಿದೆ ಕೆಮ್ಮಿನ ಸಿರಫ್ | ಎರಡು ವರ್ಷದ ಒಳಗಿನ ಮಕ್ಕಳಿಗೆ ಔಷಧ ನೀಡಲು ನಿರ್ಬಂಧ
India news| ಮಕ್ಕಳನ್ನು ಕೊಲ್ಲುತ್ತಿದೆ ಕೆಮ್ಮಿನ ಸಿರಫ್ | ಎರಡು ವರ್ಷದ ಒಳಗಿನ ಮಕ್ಕಳಿಗೆ ಔಷಧ ನೀಡಲು ನಿರ್ಬಂಧ
ಚೆನ್ನೈ (ಅ.4):-ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಶೀತ ,ಕೆಮ್ಮಿಗೆ ಪಡೆದ ಭಷಧವು 11 ಮಕ್ಕಳ ಸಾವಿಗೆ ಕಾರಣವಾಗಿದೆ. ಈ ಸಂಬಂಧ ತಮಿಳುನಾಡು ಸರ್ಕಾರವು ‘ಕೋಲ್ಡ್ರಿಫ್’ (coldrif) ಕೆಮ್ಮಿನ ಸಿರಪ್ ಮಾರಾಟವನ್ನು ನಿಷೇಧಿಸಿದೆ ಹಾಗೂ ಮಾರುಕಟ್ಟೆಯಿಂದ ಹಿಂಪಡೆಯುವಂತೆ ಆದೇಶಿಸಿದೆ.
ಅಕ್ಟೋಬರ್ 1ರಿಂದ ಪ್ರಭಾವಿಯಾಗಿ, ಚೆನ್ನೈ ಆಧಾರಿತ ಕಂಪನಿಯು ತಯಾರಿಸುತ್ತಿದ್ದ ಈ ಸಿರಪ್‌ನ ಮಾರಾಟವನ್ನು ರಾಜ್ಯದಾದ್ಯಂತ ನಿಷೇಧಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಕಾಂಚೀಪುರಂ ಜಿಲ್ಲೆಯ ಪ್ರದೇಶದಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ಪರಿಶೀಲನೆ ನಡೆಸಲಾಗಿದ್ದು, ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಯು ತಿಳಿಸಿದ್ದಾರೆ.
ಈ ಕಂಪನಿಯು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಪುದುಚೇರಿಗೆ ಈ ಸಿರಪ್ ಸರಬರಾಜು ಮಾಡುತ್ತದೆ. ಸಂಗ್ರಹಿಸಿದ ಮಾದರಿಗಳನ್ನು ಸರ್ಕಾರದ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು, ‘ಡೈಇಥಿಲೀನ್ ಗ್ಲೈಕಾಲ್’ ಎಂಬ ವಿಷಕಾರಿ ರಾಸಾಯನಿಕದ ಅಂಶವಿರುವುದನ್ನು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಕ್ಕಳ ಸಾವು ಪ್ರಕರಣಗಳನ್ನು ಗಮನಿಸಿ, ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದ್ದು, 2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತದ ಔಷಧಿಗಳನ್ನು ನೀಡಬಾರದು ಎಂದು ನಿರ್ದೇಶಿಸಿದೆ.
Karnataka| ಮುಖ್ಯಮಂತ್ರಿ ಬದಲಾವಣೆ- ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ !
ಈ ಸಲಹೆಯನ್ನು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯವು ನೀಡಿದ್ದು, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್‌ನಿಂದ ಸಂಭವಿಸಿದ ಶಂಕಿತ ಸಾವುಗಳ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಅಕ್ಟೋಬರ್ 1ರಿಂದ ಸಿರಪ್ ಮಾರಾಟವನ್ನು ನಿಲ್ಲಿಸಲು ಮತ್ತು ಎಲ್ಲಾ ಸ್ಟಾಕ್‌ಗಳನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಸಂಗ್ರಹಿಸಿದ ಮಾದರಿಗಳನ್ನು ಕೇಂದ್ರ ಸರ್ಕಾರದ ಪ್ರಯೋಗಾಲಯದಲ್ಲಿಯೂ ಪರೀಕ್ಷಿಸಲಾಗುತ್ತದೆ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕಂಪನಿಯು ಪುದುಚೇರಿ, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಿಗೆ ಸಿರಪ್ ಸರಬರಾಜು ಮಾಡಿದೆ.
ಔಷಧ ಇಲಾಖೆಯ ಪ್ರಕಾರ, ಪ್ರಯೋಗಾಲಯದ ವರದಿ ಬರುವವರೆಗೆ ಕಂಪನಿಗೆ ಉತ್ಪಾದನೆ ನಿಲ್ಲಿಸಲು ಆದೇಶಿಸಲಾಗಿದೆ. “ವರದಿ ಮುಂದಿನ ಕೆಲವು ದಿನಗಳಲ್ಲಿ ಬರುವ ನಿರೀಕ್ಷೆಯಿದೆ,” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಘಟನೆ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಕಾಮಲ ನಾಥ್ ಪ್ರತಿಕ್ರಿಯಿಸಿ, ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿನ ಮಕ್ಕಳ ಸಾವುಗಳಿಗೆ ‘ಬ್ರೇಕ್ ಆಯಿಲ್ ಸೊಲ್ವೆಂಟ್’ ಮಿಶ್ರಿತ ಕೆಮ್ಮಿನ ಸಿರಪ್ ಕಾರಣವಾಗಿದೆ ಎಂದು ಆರೋಪಿಸಿದರು.
ಮಧ್ಯಪ್ರದೇಶದಲ್ಲಿ ಸಾವು ಸಂಖ್ಯೆ 9ಕ್ಕೆ ಏರಿದ್ದು, ಮಾಧ್ಯಮ ವರದಿಗಳ ಪ್ರಕಾರ ರಾಜಸ್ಥಾನದಲ್ಲಿ ಇಬ್ಬರಯ ಶಿಶುಗಳು ಮೃತಪಟ್ಟಿದೆ.
ಕರ್ನಾಟಕದಲ್ಲಿಯೂ ಈ ಸಿರಫ್ ಮಾರಾಟವಾಗುತಿದ್ದು ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ತಿಳಿಯಬೇಕಿದೆ.