Breaking news: ವಿದೇಶಾಂಗ ಸಚಿವ ಎಸ್ ಜೈಶಂಕರ್ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲು
Breaking news: ವಿದೇಶಾಂಗ ಸಚಿವ ಎಸ್ ಜೈಶಂಕರ್ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲು
ನವದೆಹಲಿ (ಆ.11):- ದಿಢೀರ್ ಆರೋಗ್ಯ ಏರುಪೇರಿನ ಕಾರಣದಿಂದ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
70 ವರ್ಷದ ಜೈಶಂಕರ್ ಖಡಕ್ ಮಾತುಗಳಿಂದಲೂ ಜನಪ್ರಿಯರಾಗಿದ್ದಾರೆ. ಇಂದು ಬೆಳಗ್ಗೆ ಕೇಂದ್ರ ಏಷ್ಯಾದ ಚಾಡ್ ದೇಶದ ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿ ಟ್ವೀಟ್ ಮಾಡಿದ್ದ ಜೈಶಂಕರ್, ವಿದೇಶಾಂಗ ಇಲಾಖೆಯ ಹಲವು ಸಭೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ:-Karnataka:ಮುರುಡೇಶ್ವರ ದೇವಸ್ಥಾನದ ಹೆಸರಲ್ಲಿ ನಕಲಿ ಲಕ್ಕಿ ಡ್ರಾ- ದುಡ್ಡು ದೋಚುತ್ತಿರುವವರ ವಿರುದ್ಧ ದೂರು ದಾಖಲು
ಪ್ರಧಾನಿ ನರೇಂದ್ರ ಮೋದಿಯ 2ನೇ ಅಧಿಕಾರದ ಅವಧಿಯಲ್ಲಿ ಎಸ್ ಜೈಶಂಕರ್ ವಿದೇಶಾಂಗ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡರು. ಬಳಿಕ ಮೂರನೇ ಅವಧಿ ಸರ್ಕಾರದಲ್ಲೂ ಜೈಶಂಕರ್ ವಿದೇಶಾಂಗ ಸಚಿವರಾಗಿ ಮುಂದುವರಿದಿದ್ದಾರೆ.
ಮಾಜಿ ಪ್ರಧಾನಿ ಜವಹಾರ್ ನೆಹರು ನಂತರ ಸುದೀರ್ಘ ದಿನಗಳ ಕಾಲ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ ಭಾರತದ 2ನೇ ವಿದೇಶಾಂಗ ಸಚಿವ ಅನ್ನೋ ಹೆಗ್ಗಳಿಕೆಗೂ ಜೈಶಂಕರ್ ಪಾತ್ರರಾಗಿದ್ದರೆ.
ಜೈಶಂಕರ್ ಬರೋಬ್ಬರಿ 38 ವರ್ಷಗಳ ಕಾಲ ವಿದೇಶಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸಿಂಗೂಪಾರು, ಜೆಕ್ ರಿಪಬ್ಲಿಕ್, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 2015ರಿಂದ 2018ರ ಅವಧಿಯಲ್ಲಿ ವಿದೇಶಾಂಗ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 2019ರಲ್ಲಿ ವಿದೇಶಾಂಗ ಸಚಿವರಾಗಿ ಮೋದಿ ಆಯ್ಕೆ ಮಾಡಿದ್ದರು. ಬಳಿಕ ರಾಜ್ಯಸಭೆ ಸದಸ್ಯರಾಗುವ ಮೂಲಕ ರಾಜಕಾರಣಿಯಾಗಿಯೂ ಮಿಂಚುತ್ತಿದ್ದಾರೆ.
ಆದರೇ ಇದೀಗ ಅವರ ಆರೋಗ್ಯದ ಏರುಪೇರು ಅವರ ಅಭಿಮಾನಿಗಳಲ್ಲಿ ಕಳವಳ ಉಂಟುಮಾಡಿದ್ದು ಅವರ ಹೆಲ್ತ್ ಬುಲಿಟಿನ್ ಹೊರಬರಬೇಕಿದೆ.