ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Operation Sindoor : ಆಪರೇಷನ್ ಸಿಂಧೂರ್ ಇನ್ ಸೈಡ್ ಸ್ಟೋರಿ 

ನವದೆಹಲಿ: ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿದ್ದ ಉಗ್ರರ ಒಟ್ಟು 9 ನೆಲೆಗಳ ಮೇಲೆ ಭಾರತ ದಾಳಿ ನಡೆಸಿದೆ ಎಂದು ಭಾರತ ಅಧಿಕೃತವಾಗಿ ತಿಳಿಸಿದೆ.
08:34 PM May 07, 2025 IST | ಶುಭಸಾಗರ್
ನವದೆಹಲಿ: ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿದ್ದ ಉಗ್ರರ ಒಟ್ಟು 9 ನೆಲೆಗಳ ಮೇಲೆ ಭಾರತ ದಾಳಿ ನಡೆಸಿದೆ ಎಂದು ಭಾರತ ಅಧಿಕೃತವಾಗಿ ತಿಳಿಸಿದೆ.

Operation Sindoor : ಆಪರೇಷನ್ ಸಿಂಧೂರ್ ಇನ್ ಸೈಡ್ ಸ್ಟೋರಿ

ಪ್ರಕೃತಿ ಮೆಡಿಕಲ್ ,ಕಾರವಾರ.

ನವದೆಹಲಿ: ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತ (India) ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿದ್ದ ಉಗ್ರರ ಒಟ್ಟು 9 ನೆಲೆಗಳ ಮೇಲೆ ಭಾರತ ದಾಳಿ ನಡೆಸಿದೆ ಎಂದು ಭಾರತ ಅಧಿಕೃತವಾಗಿ ತಿಳಿಸಿದೆ.

Advertisement

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಜೊತೆ ಸಶಸ್ತ್ರ ಪಡೆಗಳ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳಾದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಅವರು ಆಪರೇಷನ್‌ ಸಿಂಧೂರದ (sindoor) ಬಗ್ಗೆ  ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?

ಆಪರೇಷನ್ ಸಿಂಧೂರ ಕುರಿತು ಪತ್ರಿಕಾಗೋಷ್ಠಿ

ಬಲವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಒಂಬತ್ತು ಗುರಿಗಳನ್ನು ಆಯ್ಕೆ ಮಾಡಲಾಗಿತ್ತು.ವಿಶ್ವಾಸಾರ್ಹ ಗುಪ್ತಚರ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಅವರ ಪಾಲ್ಗೊಳ್ಳುವಿಕೆಯ ಆಧಾರದ ಮೇಲೆ  ಗುರಿಗಳನ್ನು ಆಯ್ಕೆ ಮಾಡಲಾಗಿತ್ತು.

Advertisement

ಜನರು ಮತ್ತು ಪಾಕ್‌  ಮಿಲಿಟರಿ ನೆಲೆಗಳ ಮೇಲೆ ಭಾರತ ಯಾವುದೇ ದಾಳಿ ನಡೆಸಿಲ್ಲ. ಉಗ್ರರ ನೆಲೆಗಳ ಮೇಲೆ ಮಾತ್ರ ಈ ದಾಳಿ ನಡೆದಿದೆ. ಮುಂಬೈ ದಾಳಿಕೋರರಾದ  ಕಸಬ್‌, ಹೇಡ್ಲಿ ತರಬೇತಿ ಪಡೆದ ಕ್ಯಾಂಪ್‌ ಧ್ವಂಸ ಮಾಡಲಾಗಿದೆ

ಪಾಕಿಸ್ತಾನದಲ್ಲಿ ದಾಳಿ ನಂತರ ಸನ್ನಿವೇಶ

ಎರಡು ದೇಶಗಳ ಮಧ್ಯೆ ಈಗಲೂ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಕಾರಣ ಈಗ ಯಾವುದೇ ಪ್ರಶ್ನೆಗಳನ್ನು ತೆಗೆದುಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದಿದ್ದಾರೆ.

ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸಕ್ಕೆ ಭಾರತೀಯ ಸೇನೆ ತೆಗೆದುಕೊಂಡಿದ್ದು ಕೇವಲ 23 ನಿಮಿಷ. ಜಸ್ಟ್‌ 23 ನಿಮಿಷಗಳಲ್ಲೇ ಆಪರೇಷನ್ ಸಿಂಧೂರಕ್ಕೆ ಉಗ್ರರ 9 ನೆಲೆ ನಾಮಾವಶೇಷವಾಗಿವೆ.

ಇದನ್ನೂ ಓದಿ:-Karnataka:  ವಿದೇಶಾಂಗ ಇಲಾಖೆ ಸೂಚನೆ ಇದ್ರೂ ಭಟ್ಕಳ ಪಾಕಿಸ್ತಾನದ ಪ್ರಜೆಗಳು ಭಟ್ಕಳದಲ್ಲಿ! ಏನಿದು ವಿಶೇಷ ಸೂಚನೆ?

ಭಾರತೀಯ ಸೇನೆ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನ ಟಾರ್ಗೆಟ್ ಮಾಡಿ ಹೊಡೆದುರುಳಿಸಿದೆ. ಎಲ್ಲಾ 9 ಕಡೆಗಳಲ್ಲೂ ಏಕಕಾಲಕ್ಕೆ ಭಾರತೀಯ ಸೇನೆಯ ಮಿಸೈಲ್‌ ದಾಳಿ ಮಾಡಿದ್ದು, ನೂರಾರು ಉಗ್ರರ ಸಂಹಾರ ಮಾಡಲಾಗಿದೆ.

ಭಾರತದ ಟಾರ್ಗೆಟ್ ಏನಾಗಿತ್ತು?

ಭಾರತೀಯ ಸೇನೆ ಪ್ರಮುಖವಾಗಿ ಪಿಓಕೆಯಲ್ಲಿದ್ದ 21 ಉಗ್ರರ ಕ್ಯಾಂಪ್‌ಗಳನ್ನ ಟಾರ್ಗೆಟ್​ ಮಾಡಿತ್ತು. ಕಳೆದ 30 ವರ್ಷಗಳಿಂದ ಈ ಕ್ಯಾಂಪ್‌ಗಳಲ್ಲೇ ಉಗ್ರರ ನೇಮಕಾತಿ, ಭಯೋತ್ಪಾದಕರಿಗೆ ಟ್ರೈನಿಂಗ್‌ ಕೊಡಲಾಗುತ್ತಾ ಇತ್ತು. ಉಗ್ರರ ಟ್ರೈನಿಂಗ್ ಸೆಂಟರ್​ಗಳೇ ಸೇನೆಯ ಟಾರ್ಗೆಟ್ ಆಗಿತ್ತು.

ಭಾರತೀಯ ಸೇನೆ ನಾಗರಿಕರು ಹಾಗೂ ಸೇನಾ ಸೆಂಟರ್​ಗಳನ್ನ ಟಾರ್ಗೆಟ್ ಮಾಡಿಲ್ಲ. ಇಂಟೆಲಿಜೆನ್ಸ್‌ ಆಧಾರದ ಮೇಲೆ ದಾಳಿ ಮಾಡುವ ಜಾಗಗಳನ್ನ ಆಯ್ಕೆ ಮಾಡಲಾಗಿದೆ. ನಾಗರಿಕರು, ಸೇನೆಗೆ ತೊಂದರೆಯಾಗದಂತೆ ಉಗ್ರರ ಕಟ್ಟಡಗಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಿದೆ.

ಆಪರೇಷನ್ ಸಿಂಧೂರ ಸಕ್ಸಸ್ ಸೀಕ್ರೆಟ್ಸ್!

ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಭಾರತೀಯ ಸೇನೆ ಬಹಳ ಗೌಪ್ಯವಾಗಿ ಮಾಡಿ ಮುಗಿಸಿದೆ. 2025ರ ಆಪರೇಷನ್ ಸಿಂಧೂರಗೂ 2019ರ ಬಾಲಾಕೋಟ್ ದಾಳಿಗೂ ಬಹಳಷ್ಟು ವ್ಯತ್ಯಾಸಗಳಿವೆ

2019ರ ಪುಲ್ವಾಮಾ ದಾಳಿಯ ನಂತರ ಭಾರತ 12 ಮಿರಾಜ್ -2000 ಫೈಟರ್ ಜೆಟ್‌ಗಳೊಂದಿಗೆ ಬಾಲಾಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿತ್ತು.

ಮಸೀದಿ ಒಳಗಿನ ದೃಶ್ಯ

ಏಪ್ರಿಲ್ 22, 2025ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಆಪರೇಷನ್ ಸಿಂಧೂರ ಅಟ್ಯಾಕ್ ಮಾಡಲಾಗಿದೆ. ಈ ಬಾರಿ ಏಕಕಾಲಕ್ಕೆ 9 ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರೋದು ವಿಶೇಷವಾಗಿದೆ.

ಬಾಲಾಕೋಟ್‌ನಲ್ಲಿ ಭಯೋತ್ಪಾದಕ ನೆಲೆಗಳ ಮೇಲೆ ವಾಯುಪಡೆ ಮಾತ್ರ ವೈಮಾನಿಕ ದಾಳಿ ನಡೆಸಿತ್ತು. ಆದರೆ ಆಪರೇಷನ್ ಸಿಂಧೂರದಲ್ಲಿ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯು ಜಂಟಿಯಾಗಿ ಕ್ಷಿಪಣಿ ದಾಳಿ ನಡೆಸಿದೆ.

ಬಾಲಾಕೋಟ್ ವೈಮಾನಿಕ ದಾಳಿ ರಾತ್ರಿ 3 ಗಂಟೆಗೆ ನಡೆಯಿತು. ಆದರೆ ಆಪರೇಷನ್ ಸಿಂಧೂರವನ್ನು ರಾತ್ರಿ 1:44ಕ್ಕೆ ನಡೆಸಲಾಗಿದೆ.

ಬಾಲಾಕೋಟ್ ದಾಳಿಯ ಬಗ್ಗೆ ಪಾಕಿಸ್ತಾನ ಅಂದಾಜಿಸಿ ಮರುದಾಳಿ ಮಾಡಿತ್ತು. ಆದರೆ ಆಪರೇಷನ್ ಸಿಂಧೂರ ಸಂಪೂರ್ಣವಾಗಿ ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ ಪ್ರತಿಕ್ರಿಯಿಸಲು ಅವಕಾಶ ಸಿಗಲಿಲ್ಲ. ಭಾರತದ ದಾಳಿಗೆ ಪತರಗುಟ್ಟಿರುವ ಪಾಕಿಸ್ತಾನ ಸುಧಾರಿಸಿಕೊಳ್ಳಲು ಬಹಳಷ್ಟು ಸಮಯ ಬೇಕಾಗಿದೆ.

 

Advertisement
Tags :
BorderIndiaindia newsKarnatakaOperation sindoorpakistansindoor
Advertisement
Next Article
Advertisement