Joida :ಪೊಲೀಸರಿಗೆ ಜಾತಿ ನಿಂದನೆ -ಆರೋಪಿಗೆ ನ್ಯಾಯಾಂಗ ಬಂಧನ
Joida :ಪೊಲೀಸರಿಗೆ ಜಾತಿ ನಿಂದನೆ -ಆರೋಪಿಗೆ ನ್ಯಾಯಾಂಗ ಬಂಧನ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ರಾಮನಗರದಲ್ಲಿ (Ramnagar) ಕರ್ತವ್ಯ ನಿರತ ಪೊಲೀಸ್ (police) ಸಿಬ್ಬಂದಿಗೆ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಕುರಿತು ಪ್ರಕರಣ ದಾಖಲಾಗಿದ್ದು ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಜಿಲ್ಲೆಯಜೋಯಿಡಾ(joida ) ತಾಲೂಕಿನ ರಾಮನಗರದ ರಾಮಲಿಂಗ ಗಲ್ಲಿಯ ನಿವಾಸಿ ಪ್ರವೀಣ್ ಸುದೀರ್ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನಕ್ಕೊಳಗಾದವನಾಗಿದ್ದಾನೆ.
ಇದನ್ನೂ ಓದಿ:-Joida: ಅರಣ್ಯ ಭೂಮಿ ಅತಿಕ್ರಮಣ-ರೆಸಾರ್ಟ ತೆರವು
ಪ್ರಕರಣ ಒಂದರ ಆರೋಪಿಯಾಗಿರುವ ಪ್ರವೀಣ್ ಸುದೀರ್ ಎಂಬಾತನಿಗೆ ವಿಚಾರಣೆಗೆ ಹಾಜುರಾಗುವಂತೆ ನೋಟಿಸ್ ನೊಂದಿಗೆ ಅಲ್ಲಿನ ಬೀಟ್ ಪೊಲೀಸ್ ರಾಜು ಛಲವಾದಿ ಹಾಗೂ ಸದಾಶಿವ ಮಠಪತಿ ಎಂಬುವವರು ತೆರಳಿದ್ದರು.
ಇದನ್ನೂ ಓದಿ:-Kumta :ಕರ್ತವ್ಯದಲ್ಲಿ ಮದ್ಯ ಸೇವಿಸಿ ಹಿರಿಯ ಅಧಿಕಾರಿ ಜೊತೆ ಅನುಚಿತ ವರ್ತನೆ -ಸೇವೆಯಿಂದ ಅಮಾನತು.
ಆದರೇ ಈತ ನೋಟಿಸ್ ತೆಗೆದುಕೊಳ್ಳದೇ ಉದ್ದಟತನ ತೋರಿದ್ದು ನಂತರ ಸೋಮವಾರ ಪಿ.ಎಸ್.ಐ ಬಸವರಾಜ್ ಜೊತೆ ಸಿಬ್ಬಂದಿಗಳು ಬಂಧಿಸಿ ಕರೆದೊಯ್ಯಲು ತೆರಳಿದ್ದು ಪೊಲೀಸರಿಗೆ ಬೆದರಿಕೆ ಹಾಕಿದ್ದು ,ಕಾನಸ್ಟೇಬಲ್ ರಾಜು ಛಲವಾದಿಗೆ ಹಾಗೂ ಸದಾಶಿವ್ ಮಠಪತಿ ಗೆ ಜಾತಿ ನಿಂದನೆ ಮಾಡಿ ಬಟ್ಟೆ ಹರಿದು ಹಲ್ಲೆ ನಡೆಸಿದ್ದನು . ಈ ಕುರಿತು ರಾಮನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾಲನಸ್ಟೇಬಲ್ ರಾಜು ಛಲವಾದಿ ದೂರು ನೀಡಿದ್ದು ಈ ಸಂಬಂಧ ಎಸ್.ಸಿ ಎಸ್.ಟಿ ಕಾಯ್ದೆಯಡಿ ದೂರು ದಾಖಲಾಗಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.