ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Joida: ಅರಣ್ಯ ಭೂಮಿ ಅತಿಕ್ರಮಣ-ರೆಸಾರ್ಟ ತೆರವು

ಕಾರವಾರ :- ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರವರ ಭೂ ಅತಿಕ್ರಮಣ ತೆರವಿಗೆ ಹೈಕೋರ್ಟ ಸರ್ಕಾರವನ್ನು ತರಾಟೆ ತೆಗೆದುಕೊಂಡ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲೂ ಪ್ರಭಾವಿಗಳ ಭೂ ಅತಿಕ್ರಮಣ ತೆರವಿಗೆ ಮುಂದಾಗಿದ್ದು ಪ್ರಭಾವಿಗಳ ಭೂ ಒತ್ತುವರಿ ವಿರುದ್ಧ ಅರಣ್ಯ ಇಲಾಖೆ (Forest Department )ಮರ ಸಾರಿದೆ.
10:31 PM Mar 21, 2025 IST | ಶುಭಸಾಗರ್

Joida: ಅರಣ್ಯ ಭೂಮಿ ಅತಿಕ್ರಮಣ-ರೆಸಾರ್ಟ ತೆರವು.

ಕಾರವಾರ :- ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರವರ ಭೂ ಅತಿಕ್ರಮಣ ತೆರವಿಗೆ ಹೈಕೋರ್ಟ ಸರ್ಕಾರವನ್ನು ತರಾಟೆ ತೆಗೆದುಕೊಂಡ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲೂ ಪ್ರಭಾವಿಗಳ ಭೂ ಅತಿಕ್ರಮಣ ತೆರವಿಗೆ ಮುಂದಾಗಿದ್ದು ಪ್ರಭಾವಿಗಳ ಭೂ ಒತ್ತುವರಿ ವಿರುದ್ಧ ಅರಣ್ಯ ಇಲಾಖೆ  (Forest Department )ಮರ ಸಾರಿದೆ.

Advertisement

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಗಣೇಶ ಗುಡಿಯ ವಿಸಿಲಿಂಗ್ ವುಡ್ ರೆಸಾರ್ಟ ನ ಮಾಲೀಕ ರೆಸಾರ್ಟ ಮಾಡಲು ಅರಣ್ಯ ಇಲಾಖೆ, ಇಂಧನ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಸೇರಿದ್ದ 3 ಏಕರೆ ಭೂಮಿಯನ್ನು ಒತ್ತುವರಿ ಮಾಡಿ ರೆಸಾರ್ಟ ನಿರ್ಮಿಸಿದ್ದರು .

ಪ್ರಕೃತಿ ಮೆಡಿಕಲ್ ,ಕಾರವಾರ.

ಎಂಟು ವರ್ಷಗಳ ಬಳಿಕ ಅತಿಕ್ರಮಣ ತೆರವು ಮಾಡಲು ಧಾರವಾಡ ಹೈ ಕೋರ್ಟ್ ಸೂಚಿಸಿದ ಬೆನ್ನಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಅಕ್ರಮ ರೆಸಾರ್ಟ ಅನ್ನು ತೆರವು ಮಾಡಿದ್ದಾರೆ.

ಇದನ್ನೂ ಓದಿ:-Joida :ವಾಹನ ಅಪಘಾತ ಓರ್ವ ಸಾವು ಹತ್ತು ಜನರಿಗೆ ಗಾಯ

Advertisement

ಒಟ್ಟು ಕೊರ್ಟ್ ಆದೇಶದಂತೆ(court order) ಅರಣ್ಯ ಇಲಾಖೆಯ 2 ಎಕರೆ 10 ಗುಂಟೆ ಭೂಮಿ ತೆರವುಮಾಡಿದ್ದು ,ಇನ್ನೂಳಿದ ಭೂಮಿಯನ್ನ ಒಂದು ತಿಂಗಳಲ್ಲಿ ತೆರವು ಗೊಳಿಸಲು ಸೂಚನೆ ನೀಡಿದೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ(joida) ತಾಲೂಕಿನ ಗಣೇಶಗುಡಿ ಬಳಿಯ ಇಳವಾದಲ್ಲಿ ಈ ರೆಸಾರ್ಟ್ ಇದ್ದು ಹಿಂದೆ ತೆರವುಗೊಳಿಸಲು ಅರಣ್ಯಾಧಿಕಾರಿಗಳು ತೆರಳಿದ್ದಾಗ ರೆಸಾರ್ಟ ಮಾಲೀಕ ವಿನಾಯಕ ಜಾಧವಕೋರ್ಟ ಮೆಟ್ಟಿಲೇರಿದ್ದರು.

ಮಾಲಿಕನ ವಿರುದ್ದ ಫೆಬ್ರುವರಿ 2018 ರಂದು ಕೌಂಟರ್ ಕೇಸ್ ದಾಖಲಿಸಿದ್ದ ಅರಣ್ಯ ಇಲಾಖೆ‌ ಕೊನೆಗೂ ಕೋರ್ಟ ಆದೇಶದಂತೆ ತೆರವು ಕಾರ್ಯ ನಡೆಸಿದ್ದು ಸಿಬ್ವಂದಿಗಳೊಂದಿಗೆ ತೆರಳಿದ ಅರಣ್ಯಾಧಿಕಾರಿಗಳು ಅಲ್ಲಿನ ಕಾಟೇಜ್ ಗಳನ್ನು ದ್ವಂಸ ಗೊಳಿಸಿ ತೆರವು ನಡೆಸಿದರು.

ಅರಣ್ಯ ಇಲಾಖೆಯಿಂದ ತೆರವು ಕಾರ್ಯಾಚರಣೆ

ಜೋಯಿಡಾದಲ್ಲಿ ಹಲವು ಭಾಗದಲ್ಲಿ ಸರ್ಕಾರಿ ಜಮೀನನ್ನು ಒತ್ತುವರಿಮಾಡಿ ರೆಸಾರ್ಟಗಳು ಹಾಗೂ ವಾಣಿಜ್ಯ ಮಳಿಗೆಗಳು ತಲೆಎತ್ತಿದ್ದು ,ಇದೀಗ ಕೋರ್ಟ ಆದೇಶ ಬೆನ್ನಲ್ಲೇ  ಅರಣ್ಯ ಇಲಾಖೆ ಅರಣ್ಯ ಭೂಮಿ ಒತ್ತುವರಿದಾರರಿಗೆ ಶಾಕ್ ನೀಡಿದೆ.

 

Advertisement
Tags :
EnvironmentalProtectionForestEncroachmentForestLandIllegalEncroachmentJoidaKarnatakaNewsResortDemolitionWildlifeConservation
Advertisement
Next Article
Advertisement