ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Joida| ರಾಮನಗರ ಬಸ್ ನಿಲ್ದಾಣದಲ್ಲಿ ಚಾಲಕ,ನಿರ್ವಾಹಕನಿಂದ ಪ್ರಯಾಣಿಕನ ಮೇಲೆ ಹಲ್ಲೆ

ಜೋಯಿಡಾ : ಸಾರಿಗೆ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಇಬ್ಬರು ಸೇರಿ ಪ್ರಯಾಣಿಕನೋರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ಜೋಯಿಡಾ (joida)ತಾಲೂಕಿನ ರಾಮನಗರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದಿದೆ.
11:34 PM Sep 27, 2024 IST | ಶುಭಸಾಗರ್

ವರದಿ| ಸಂದೇಶ್ ಜೈನ್

Advertisement

ಜೋಯಿಡಾ : ಸಾರಿಗೆ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಇಬ್ಬರು ಸೇರಿ ಪ್ರಯಾಣಿಕನೋರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ಜೋಯಿಡಾ (joida)ತಾಲೂಕಿನ ರಾಮನಗರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಹುಬ್ಬಳ್ಳಿ ಸಾರಿಗೆ ಘಟಕದ ನವಲಗುಂದ - ಪಣಜಿ ಸಂಚರಿಸುವ ಸಾರಿಗೆ ಬಸ್ಸಿನ ಚಾಲಕ ಮತ್ತು ನಿರ್ವಾಹಕ ರಾಮನಗರ ಬಸ್ ನಿಲ್ದಾಣದ ಕ್ಯಾಂಟೀನ್ ಮುಂಭಾಗದಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೆ ಕಾರಣವೇನು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಇದೀಗ ಈ ಪ್ರಕರಣ ರಾಮನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.

Advertisement

ಇದನ್ನೂ ಓದಿ:-Kumta| ಮೆಕ್ಕೆಜೋಳ ,ಡ್ರಾಗನ್ ಪ್ರೂಟ್ ನಲ್ಲಿ ಅರಳಿದ ಗ್ರಾಮ ದೇವತೆ ಶ್ರೀ ಶಾಂತಿಕಾ ಪರಮೇಶ್ವರಿ

ಸಾರಿಗೆ ಬಸ್ಸಿನ ಚಾಲಕ ಮತ್ತು ನಿರ್ವಾಹಕನ ಈ ನಡವಳಿಕೆಯ ಬಗ್ಗೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಯಾಣಿಕ ಏನೇ ತಪ್ಪು ಮಾಡಿದ್ದರೂ, ಬಸ್ ನಿಲ್ದಾಣದ ಹತ್ತಿರದಲ್ಲೇ ಪೊಲೀಸ್ ಠಾಣೆ ಇರುವುದರಿಂದ, ಠಾಣೆಗೆ ದೂರು ನೀಡಬಹುದಿತ್ತು.

ಇದನ್ನೂ ಓದಿ:-Joida|ರಾಮನಗರ -ಅನಮೋಡ್ ಹೆದ್ದಾರಿ ಭಾರಿ ವಾಹನ ಸಂಚಾರ ಮುಕ್ತ-ಡಿ.ಸಿ

ಆದರೆ ಸಾರಿಗೆ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಏಕಾಏಕಿ ಪ್ರಯಾಣಿಕನ ಮೇಲೆ ಹಲ್ಲೆಗೆ ಮುಂದಾಗಿರುವುದು ಕಾನೂನಿನ ಉಲ್ಲಂಘನೆಯಾಗಿದೆ. ಈ ಬಗ್ಗೆ ರಾಮನಗರದ ಪೊಲೀಸರು ಯಾವ ರೀತಿಯ ಕ್ರಮವನ್ನು ಕೈಗೊಳ್ಳಬಹುದು ಎನ್ನುವುದನ್ನು ಕಾದು ನೋಡಬೇಕಾಗಿದೆ.

Advertisement
Advertisement
Next Article
Advertisement