For the best experience, open
https://m.kannadavani.news
on your mobile browser.
Advertisement

Joida | ರಾಮನಗರದಲ್ಲಿ ಸರಣಿ ಅಪಘಾತ-ಟೆಂಪೋ ಚಾಲಕ ಸಾವು ,ಐವರಿಗೆ ಗಂಭೀರ

tragic road accident near Ramnagar in Joida taluk, Uttara Kannada, claimed one life and left five seriously injured. The chain collision involving a tempo, private bus, truck, and bike occurred at Tinai Ghat on the Goa highway. Police have registered a case and begun an investigation.
02:41 PM Oct 01, 2025 IST | ಶುಭಸಾಗರ್
tragic road accident near Ramnagar in Joida taluk, Uttara Kannada, claimed one life and left five seriously injured. The chain collision involving a tempo, private bus, truck, and bike occurred at Tinai Ghat on the Goa highway. Police have registered a case and begun an investigation.
joida   ರಾಮನಗರದಲ್ಲಿ ಸರಣಿ ಅಪಘಾತ ಟೆಂಪೋ ಚಾಲಕ ಸಾವು  ಐವರಿಗೆ ಗಂಭೀರ

Joida | ರಾಮನಗರದಲ್ಲಿ ಸರಣಿ ಅಪಘಾತ-ಟೆಂಪೋ ಚಾಲಕ ಸಾವು ,ಐವರಿಗೆ ಗಂಭೀರ

Advertisement

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ (joida) ತಾಲೂಕಿನ ರಾಮನಗರದ (ramnagar)ತೀನೈಘಾಟ್ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವುಕಂಡು  ಐವರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.

ಜೋಯಿಡಾ ತಾಲೂಕಿನ ರಾಮನಗರದಲ್ಲಿ ಅಪಘಾತ

ಜೊಯಿಡಾ (joida) ತಾಲೂಕಿನ ರಾಮನಗರ ಗೋವಾ ಸಂಪರ್ಕಿಸುವ ತೀನೈಘಾಟ್ ಇದಾಗಿದ್ದು  ವಾಹನಗಳ ನಡುವೆ ನಡೆದ ಸರಣಿ ಅಪಘಾತ ದಲ್ಲಿ ಟೆಂಪೋ ಚಾಲಕ ಸಾವು ಕಂಡಿದ್ದಾನೆ.ಇದಲ್ಲದೇ ಖಾಸಗಿ ಬಸ್ಸಲ್ಲಿದ್ದ ನಾಲ್ವರು ಪ್ರಯಾಣಿಕರು ಹಾಗೂ ಬೈಕ್ ಚಾಲಕನಿಗೂ ಗಂಭೀರ ಗಾಯಗೊಂಡಿದ್ದಾನೆ.

Joida| ಅನಾರೋಗ್ಯದಿಂದ ಜೀವ ಚಲ್ಲಿದ ಪಣಸೋಲಿಯ ಗೌರಿ ಆನೆ

ಹೈದರಾಬಾದ್‌ನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಮ್ಯಾಂಗನೀಸ್ ತುಂಬಿಕೊಂಡು ಹೋಗುತಿದ್ದ ಟ್ರಕ್‌ ಅನ್ನು  ಓವರ್ ಟೇಕ್ ಮಾಡುತ್ತಿದ್ದಾಗ ಮುಂಭಾಗ ಬರುತ್ತಿರುವ ಟೆಂಪೋಗೆ ಬಸ್  ಡಿಕ್ಕಿ ಹೊಡೆದಿದೆ.ಘಟನೆಯಲ್ಲಿ ನಾಲ್ಕು ವಾಹನಗಳು ಜಖಂ ಆಗಿದ್ದು, ಓರ್ವ ಸ್ಥಳದಲ್ಲಿ ಸಾವು, ಐವರು ಗಂಭೀರವಾಗಿದ್ದು ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಸ್ಥಳಕ್ಕೆ ಆಗಮಿಸಿದ  ರಾಮನಗರ ಪೊಲೀಸರು ಪರಿಶೀಲನೆ ನಡೆಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಘಟನೆ ಸಂಬಂಧ  ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ