ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Joida :ವಾಹನ ಅಪಘಾತ ಓರ್ವ ಸಾವು ಹತ್ತು ಜನರಿಗೆ ಗಾಯ

ಜೋಯಿಡಾ (joida)ತಾಲ್ಲೂಕಿನ ಕುಂಬಾರವಾಡದ ಡೊಣಪ ಸಮೀಪ ಬೊಲೆರೋ ಪಿಕಪ್ ವಾಹನ ಪಲ್ಟಿಯಾಗಿ ಓರ್ವ ಸ್ಥಳದಲ್ಲೆ ಸಾವುಕಂಡು 10 ಜನರಿಗೆ ಗಾಯವಾದ ಘಟನೆ ನಡೆದಿದೆ.
04:16 PM Feb 27, 2025 IST | ಶುಭಸಾಗರ್

Joida :ವಾಹನ ಅಪಘಾತ ಓರ್ವ ಸಾವು ಹತ್ತು ಜನರಿಗೆ ಗಾಯ

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಜೋಯಿಡಾ ತಾಲ್ಲೂಕಿನ ಕುಂಬಾರವಾಡದ ಡೊಣಪ ಸಮೀಪ ಬೊಲೆರೋ ಪಿಕಪ್ ವಾಹನ ಪಲ್ಟಿಯಾಗಿ ಓರ್ವ ಸ್ಥಳದಲ್ಲೆ ಸಾವುಕಂಡು 10 ಜನರಿಗೆ ಗಾಯವಾದ ಘಟನೆ ನಡೆದಿದೆ.

ಜೋಯಿಡಾ ತಾಲ್ಲೂಕಿನ ಕುಂಬಾರವಾಡದ ಡೊಣಪ ಸಮೀಪದಲ್ಲಿ ಬೊಲೆರೋ ಕ್ಯಾಂಪರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವಿಗೀಡಾಗಿ, ಉಳಿದ ಹತ್ತು ಜನರಿಗೆ ಗಾಯಗೊಂಡ ಘಟನೆ ಇಂದು ಗುರುವಾರ ಮಧ್ಯಾಹ್ನ 1.30 ಗಂಟೆ ಸುಮಾರಿಗೆ ನಡೆದಿದೆ.

ಗಾಯಗೊಂಡವರನ್ನು ತಕ್ಷಣವೇ ಜೋಯಿಡಾದ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಗಾಯಗೊಂಡ ಹತ್ತು ಜನರ ಪೈಕಿ ಇಬ್ಬರಿಗೆ ಗಂಭೀರ ಸ್ವರೂಪದ ಗಾಯವಾಗಿದೆ ಎಂದು ತಿಳಿದುಬಂದಿದೆ‌.

Advertisement

ಸ್ಥಳಕ್ಕೆ ಜೋಯಿಡಾದ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಮೃತನ ಹಾಗೂ ಗಾಯಗೊಂಡವರ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

Advertisement
Tags :
AccidentJoidakannda neesKannda newsRoad accident
Advertisement
Next Article
Advertisement