Joida | ಬಂಗಾರದ ಆಸೆಗೆ ಶಿಕ್ಷಕಿ ಕೊಂದವನ ಬಂಧನ
Joida | ಬಂಗಾರದ ಆಸೆಗೆ ಶಿಕ್ಷಕಿ ಕೊಂದವನ ಬಂಧನ
ಕಾರವಾರ:- ಬೆಳಗಾವಿ ಜಿಲ್ಲೆಯ ನಂದಗಢ ಅಂಗನವಾಡಿ ಶಿಕ್ಷಕಿಯ ಅನುಮಾನಾಸ್ಪದ ಸಾವಿಗೆ ಟ್ವಿಷ್ಟ್ ಸಿಕ್ಕಿದ್ದು ಚಿನ್ನದಾಸೆಗೆ ಕೊಲೆ ಮಾಡಿದ್ದ ಆರೋಪಿ ಯನ್ನು ಉತ್ತರ ಕನ್ನಡ ಜಿಲ್ಲೆಯ ರಾಮನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಮುಖ ಆರೋಪಿ ಶಂಕರ್ ಪಾಟೀಲ (35)ನನ್ನು ಬಂಧಿಸಿದ ಜೋಯಿಡಾ ತಾಲೂಕಿನ ರಾಮನಗರ ಪೊಲೀಸರು ಆಕೆ ಹತ್ಯೆಯಾಗಿರುವುದುನ್ನು ದೃಢಪಡಿಸಿದ್ದಾರೆ.
ಹತ್ಯೆ ಮಾಡಿದ್ದು ಏಕೆ?
ಶಂಕರ್ ಪಾಟೀಲ್ ಗೆ ಬೆಳಗಾವಿ ಖಾನಾಪುರ ನಂದಗಢ ಗ್ರಾಮದ ಅಂಗನವಾಡಿ ಶಿಕ್ಷಕಿ ಅಶ್ವಿನಿ ಪಾಟೀಲ ಮೊದಲೇ ಪರಿಚಯವಿದ್ದು ಆಕೆ ಹಾಕಿಕೊಂಡಿದ್ದ ಚಿನ್ನದ ಸರದ ಆಸೆಗೆ ಬಲಿಬಿದ್ದ ಈತ
ತನಿಖೆಯ ವೇಳೆ ಚಿನ್ನಾಭರಣದ ಆಸೆಗೆ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ಜಾತ್ರೆಗೆ ಹೋಗುವ ನೆಪದಲ್ಲಿ ಆಕೆಯೊಂದಿಗೆ ಈತನೂ ಹೋಗಿದ್ದು ಅಲ್ಲಿಯೇ ಕೊಲೆ ಮಾಡಿದ್ದನು.ಕೊಲೆ ಮಾಡಿದ ನಂತರ ವಾಹನದಲ್ಲಿ ಶಿಕ್ಷಕಿಯ ಶವವನ್ನು ಹಾಕಿ ರಾಮನಗರದ ತಿನೈಘಾಟ್ ಬಳಿ ಎಸೆದಿದ್ದನು.
ಮನೆಯವರ ದಿಕ್ಕು ತಪ್ಪಿಸಲು ಹತ್ಯೆಯ ನಂತರ ಆಕೆಯ ಮೊಬೈಲ್‌ನಿಂದ "ನಾನು ಬೆಂಗಳೂರಿಗೆ ಹೋಗಿದ್ದೇನೆ. ಸೋಮವಾರ ವಾಪಸ್ಸು ಬರುತ್ತೇನೆ" ಎಂಬ ಸಂದೇಶವನ್ನು ಕಳುಹಿಸಿದ್ದನು.ಮರುದಿನ, "ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ" ಎಂಬ ಮತ್ತೊಂದು ಸಂದೇಶ ಕಳುಹಿಸಿದ್ದನು ನಂತರ ಮೊಬೈಲ್‌ಫೋನ್‌ನ್ನು ಶವ ಪತ್ತೆಯಾದ ಸ್ಥಳದಲ್ಲೇ ಎಸೆದು ,ಮೃತದೇಹವನ್ನು ಕಬ್ಬಿಣದ ತಂತಿಯಿಂದ ಕಟ್ಟಿ, ಮೇಲೆ ಕಲ್ಲು ಇಟ್ಟು ನೀರಿಗೆ ಎಸೆದು ಪರಾರಿಯಾಗಿದ್ದನು.
ವಾಹನದಲ್ಲಿ ರಕ್ತದ ಕಲೆಯನ್ನು ಮೊದಲೇ ಪತ್ತೆಮಾಡಿದ್ದ ಪೊಲೀಸರು ಮರಣೋತ್ತರ ಪರೀಕ್ಷೆ ವೇಳೆ ಆಕೆಯ ತಲೆಗೆ ಪೆಟ್ಟು ಬಿದ್ದಿರುವುದನ್ನು ಪತ್ತೆ ಮಾಡಿದ್ದರು.
Joida|ಜಾತ್ರೆಗೆ ಹೋದ ಮಹಿಳೆ ಶವವಾಗಿಪತ್ತೆ
ಪ್ರಕರಣವನ್ನು ರಾಮನಗರ ಪೊಲೀಸ್ ಠಾಣೆಯಿಂದ ಬೆಳಗಾವಿಯ ನಂದಗಢ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ.