Joida|ಟ್ರಕ್ ಅಪಘಾತ ದಲ್ಲಿಒಂದುಗಂಟೆಗೂ ಹೆಚ್ಚುಕಾಲ ಟ್ರಕ್ ನಲ್ಲಿ ಸಿಲುಕಿದ ಚಾಲಕ!
truck traveling from Goa to Dandeli crashed into a tree on the Singargav road in Joida while trying to avoid an oncoming vehicle, leaving the 24-year-old driver trapped inside for over an hour. The injured driver, Shahid Naikawadi, was rescued and shifted to Ramnagar Government Hospital.
08:06 PM Dec 02, 2025 IST | ಶುಭಸಾಗರ್
Joida|ಟ್ರಕ್ ಅಪಘಾತ ದಲ್ಲಿಒಂದುಗಂಟೆಗೂ ಹೆಚ್ಚುಕಾಲ ಟ್ರಕ್ ನಲ್ಲಿ ಸಿಲುಕಿದ ಚಾಲಕ!
Advertisement
ಕಾರವಾರ :- ಎದುರಿನಿಂದ ಬರುತಿದ್ದ ವಾಹನ ತಪ್ಪಿಸಲು ಹೋಗಿ ಗೋವಾದಿಂದ ದಾಂಡೇಲಿಗೆ(dandeli) ಬರುತಿದ್ದ ಟ್ರಕ್ ಒಂದು ಮರಕ್ಕೆ ಡಿಕ್ಕಿಯಾಗಿ ಗಂಟೆಗಟ್ಟಲೇ ಚಾಲಕ ಟ್ರಕ್ ನಲ್ಲೇ ಸಿಲುಕಿಕೊಂಡ ಘಟನೆ ಜೋಯಿಡಾ ತಾಲೂಕಿನ
ಸಿಂಗರ್‌ಗಾವ್ ಮಾರ್ಗದಲ್ಲಿ ನಡೆದಿದೆ.ಶಾಹಿದ್ ನಾಯಕವಾಡಿ (24), ಗಾಯಗೊಂಡು ಟ್ರಕ್ ನಲ್ಲಿ ಸಿಲುಕಿಕೊಂಡಚಾಲಕನಾಗಿದ್ದಾನೆ.
ಜೊಯಿಡಾ (joida)ಜಗಲಬೇಟ್‌ನಿಂದ ದಾಂಡೇಲಿಗೆ ತೆರಳುವ ಸಿಂಗರ್‌ಗಾವ್ ರಸ್ತೆಯಲ್ಲಿ ಎದುರಿನಿಂದ ವಾಹನ ಅಪಘಾತ ತಪ್ಪುಸಲು ಹೋಗಿ ಮರಕ್ಕೆ ಢಿಕ್ಕಿ ಹೊಡೆದು ಟ್ರಕ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಟ್ರಕ್ ನಲ್ಲಿ ಸಿಲುಕಿದ ಚಾಲಕನನ್ನು ಹೊರತೆಗೆದು 108 ಆಂಬ್ಯುಲೆನ್ಸ್ ಮೂಲಕ ರಾಮನಗರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಘಟನೆ ಸಂಬಂಧ ರಾಮನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Advertisement