KAIGA|ಕೈಗಾ ದಲ್ಲಿ ಉದ್ಯೋಗ ಮಾಹಿತಿ ನೀಡದೇ ಕನ್ನಡಿಗರಿಗೆ ವಂಚನೆ !
ಕೈಗಾ ದಲ್ಲಿ ಉದ್ಯೋಗ ಮಾಹಿತಿ ನೀಡದೇ ಕನ್ನಡಿಗರಿಗೆ ವಂಚನೆ !
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕೈಗಾ (kaiga) ಅಣು ವಿದ್ಯುತ್ ಸ್ಥಾವರದಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಕರೆದಿದೆ. ಆದರೇ ಈ ವಿಷಯ ಕನ್ನಡಿಗರಿಗೆ ತಿಳಿಯದಂತೆ ಮುಚ್ಚಿಟ್ಟು ಕೇರಳ,ತಮಿಳುನಾಡು ,ಮಹರಾಷ್ಟ್ರ ,ಉತ್ತರ ಪ್ರದೇಶ ಸೇರಿದಂತೆ ಬೇರೆ ರಾಜ್ಯದ ಪತ್ರಿಕೆಯಲ್ಲಿ ಮಾತ್ರ ಇದರ ಬಗ್ಗೆ ಪ್ರಕಟಣೆ ಹೊರಡಿಸಿದ್ದು , ಕನ್ನಡದ ಯಾವ ಮಾಧ್ಯಮದಲ್ಲೂ ಈ ವಿಷಯ ತಿಳಿಯದಂತೆ ನೋಡಿಕೊಂಡಿದ್ದು ಈ ಮೂಲಕ ಕನ್ನಡ ನೆಲದಲ್ಲಿ ಇದ್ದರೂ ಕನ್ನಡಿಗರಿಗೆ ಅದರಲ್ಲೂ ಅಣು ಸ್ಥಾವರಕ್ಕಾಗಿ ನೆಲ ಕೊಟ್ಟ ಜಿಲ್ಲೆಯ ಜನರಿಗೂ ತಿಳಿಯದಂತೆ ನೋಡಿಕೊಳ್ಳುವ ಮೂಲಕ ದ್ರೋಹ ಎಸಗಿದೆ.
ಇದನ್ನೂ ಓದಿ:-Kaiga ನ್ಯೂಕ್ಲಿಯರ್ ಪ್ಲಾಂಟ್ ನಲ್ಲಿ ಗುಂಡು ಹಾರಿಸಿಕೊಂಡ ರಕ್ಷಣಾ ಸಿಬ್ಬಂದಿ ಸಾವು!

ಕೈಗಾ ಅಣುಸ್ಥಾವರದಲ್ಲಿ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಯಿಂದ ಹಿಡಿದು ಟೆಕ್ನೀಷಿಯನ್ ವರೆಗೆ ಒಟ್ಟು 108 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಸ್ಥಳೀಯ ಜನರಿಗೆ ಹಾಗೂ ರಾಜ್ಯದ ಜನರಿಗೆ ತಿಳಿಯದಂತೆ ಇಂಗ್ಲೀಷ್,ಹಿಂದಿ,ಮಳೆಯಾಳಿ,ತಮಿಳು ಭಾಷೆಯ ಪತ್ರಿಕೆಗಳಿಗೆ ಪ್ರಕಟಣೆ ನೀಡಿದೆ.
ಕನ್ನಡ ಸಂಘಟನೆಯೇ ಇಲ್ಲದ ಕಾರವಾರ!
ಇನ್ನು ಜಿಲ್ಲೆಯ ಕರಾವಳಿಯಲ್ಲಿ ಕನ್ನಡ ಸಂಘಟನೆಗಳ ಶಕ್ತಿ ಕಡಿಮೆಯಿದೆ. ಕಾರವಾರದಲ್ಲಿ ಕನ್ನಡ ಸಂಘಟನೆ ಶಕ್ತಿ ಇಲ್ಲ. ನೆಪಕ್ಕೆ ಮಾತ್ರ ಎನ್ನುವಂತಾಗಿದೆ. ಇನ್ನು ಸ್ಥಳೀಯ ಜನರಿಗೂ ಆಸಕ್ತಿ ಕಡಿಮೆ. ಹೀಗಾಗಿ ತಾವು ಮಾಡಿದ್ದೇ ಸರಿ ಎನ್ನುವಂತೆ ಕನ್ನಡಿಗರನ್ನು ಬಿಟ್ಟು ಉಳಿದವರಿಗೆ ಉದ್ಯೋಗ ಕೊಡಲು ಕೈಗಾ ಅಧಿಕಾರಿಗಳು ಮುಂದಾಗಿದ್ದು ,ತಮ್ಮ ರಾಜ್ಯದ ಜನರಿಗೆ ಮಾತ್ರ ಮಾಹಿತಿ ಸಿಗುವಂತೆ ನೋಡಿಕೊಳ್ಳುವ ಮೂಲಕ ತಮ್ಮ ರಾಜ್ಯದ ಅಭಿಮಾನ ಮೆರೆಯುತಿದ್ದಾರೆ ಕೈಗಾ ದ ಹೊರ ರಾಜ್ಯದ ಅಧಿಕಾರಿಗಳು.
ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ನೆಲ ಬಳಸಿಕೊಂಡು ಸಾವಿರಾರು ಜನರನ್ನ ನಿರಾಶ್ರಿತರನ್ನಾಗಿ ಮಾಡಿದ ಕೈಗಾ ಇಲ್ಲಿನ ಜನರಿಗೆ ಉದ್ಯೋಗ ನೀಡುವಲ್ಲಿ ಮಾತ್ರ ಕನ್ನಡಿಗರ ಬೆನ್ನಿಗೆ ಚೂರಿ ಹಾಕುತ್ತಿದೆ.
ಇದನ್ನೂ ಓದಿ:-Karwar:ಕನ್ನಡವಾಣಿ ವರದಿ ಫಲಶೃತಿ- ಗುಡ್ಡಳ್ಳಿಗೆ ಸಂಪರ್ಕ ,ನುಡಿದಂತೆ ನೆಡೆದ ಜಿಲ್ಲಾಧಿಕಾರಿ