HoneyTrap:ಮಾಲೀಕಯ್ಯ ಗುತ್ತೆದಾರ್ ಗೆ ಕಾಂಗ್ರೆಸ್ ನಾಯಕಿ ಹನಿಟ್ರ್ಯಾಪ್; 20 ಲಕ್ಷಕ್ಕೆ ಬೇಡಿಕೆಯಿಟ್ಟ ಮಹಿಳೆ ಪೊಲೀಸರ ವಶಕ್ಕೆ
Farmer minister ಮಾಲೀಕಯ್ಯ ಗುತ್ತೆದಾರ್ ಗೆ
ಕಾಂಗ್ರೆಸ್ ನಾಯಕಿ ಹನಿಟ್ರ್ಯಾಪ್; 20 ಲಕ್ಷಕ್ಕೆ ಬೇಡಿಕೆಯಿಟ್ಟ ಮಹಿಳೆ ಪೊಲೀಸರ ವಶಕ್ಕೆ
Kalburgi news 26october 2024 : ಕಲಬುರ್ಗಿ ಮಾಜಿ ಸಚಿವ ಮಾಲೀಕಯ್ಯ ಗುತ್ತೆದಾರ್ ಗೆ ಹನಿಟ್ರ್ಯಾಪ್ (Honey Trap) ವಿಡಿಯೊ ತೋರಿಸಿ 20 ಲಕ್ಷ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿ ಬೆಂಗಳೂರು ಸಿಸಿಬಿ ಪೊಲೀಸ್ (Bengaluru CCP Police) ಬಂಧಿಸಿದ್ದಾರೆ.
ಇದನ್ನೂ ಓದಿ:-Arecanut price: ಅಡಿಕೆ ಧಾರಣೆ 25 october 2024
ಹನಿಟ್ರ್ಯಾಪ್ ನೆಪದಲ್ಲಿ ತಮಗೆ 20 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕುತ್ತಿರುವ ಬಗ್ಗೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ನೀಡಿದ ದೂರು ಆಧರಿಸಿ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಪೊಲೀಸರು ನಲಪಾಡ್ ಬ್ರಿಗೇಡ್ ಕಲಬುರಗಿ ಘಟಕದ ಅಧ್ಯಕ್ಷೆ, ಆಳಂದ ಕಾಲೋನಿ ನಿವಾಸಿ ಮಂಜುಳಾ ಪಾಟೀಲ್ (32) ಹಾಗೂ ಆಕೆಯ ಪತಿ ಶಿವರಾಜ್ ಪಾಟೀಲನನ್ನು (39) ಬಂಧಿಸಿದ್ದಾರೆ. ಬಂಧನದ ಬಳಿಕ ದಂಪತಿಯನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದ ಬಳಿಕ ಕೋರ್ಟ್ 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದು, ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ:-Sagar| ಯಕ್ಷ ರೂಪ ಧರಿಸಿದ ಮಾರಿಕಾಂಬೆ ಹೇಗಿದೆ ವಿಡಿಯೋ ನೋಡಿ.
ಆರೋಪಿ ಮಂಜುಳಾ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರ ಮೊಬೈಲ್ ನಂಬರ್ ಪಡೆದು ವಾಟ್ಸಪ್‌ನಲ್ಲಿ (whatsapp )ಪರಿಚಯ ಮಾಡಿಕೊಂಡು ನಂತರ, ವಾಟ್ಸಪ್‌ನಲ್ಲಿ ಚಾಟ್ ಮಾಡಿದ್ದಾಳೆ. ಆಗಾಗ ಸಲುಗೆಯಿಂದ ಚಾಟಿಂಗ್ ಮಾಡುತ್ತಾ, ತೀರಾ ಸಲುಗೆ ಬೆಳೆಸಿಕೊಂಡಿದ್ದಾಳೆ. ಈ ಮಧ್ಯೆ ತನ್ನೊಂದಿಗೆ ಖಾಸಗಿಯಾಗಿ ಕಾಣಿಸಿಕೊಂಡ ಮಾಜಿ ಸಚಿವರ ದೃಶ್ಯಗಳನ್ನು ವಿಡಿಯೋ, ಫೋಟೋಗಳನ್ನು ಇಟ್ಟುಕೊಂಡು, ಆ ವಿಡಿಯೋ ತುಣುಕು ಮಾಜಿ ಸಚಿವರಿಗೆ ಕಳುಹಿಸಿ ಬೆದರಿಕೆ ಹಾಕಲು ಶುರು ಮಾಡಿದ್ದಾಳೆ.
ಇದನ್ನೂ ಓದಿ:-Karwar 18 ವರ್ಷದಿಂದ ತಲೆಮರಸಿಕೊಂಡಿದ್ದ ಕಳ್ಳನ ಬಂಧನ! ಈತ ಮಾಡಿದ್ದೇನು ಗೊತ್ತಾ?
20 ಲಕ್ಷ ನೀಡದೆ ಹೋದರೆ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ.
ಈ ಬೆಳವಣಿಗೆಯಿಂದ ಕಂಗಾಲಾದ ಮಾಜಿ ಸಚಿವರು ಈ ಕುರಿತು ತಮ್ಮ ಮಗನಿಗೆ ಎಲ್ಲವನ್ನೂ ಹಂಚಿಕೊಂಡಿದ್ದಾರೆ.
ತಂದೆಗೆ ಧೈರ್ಯ ತುಂಬಿ ಮಹಿಳೆಯ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ, ಹಣ ಕೊಡುವುದಾಗಿ ಮಹಿಳೆಯನ್ನು ಬೆಂಗಳೂರಿಗೆ ಕರೆಸಿ, ಆಕೆ ಪತಿಯೊಂದಿಗೆ ಹಣ ಪಡೆಯಲು ಬಂದಾಗ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.